More

    ಜನರ ಮನ ಗೆದ್ದ ಅಂಗವಿಕಲ ಮಕ್ಕಳ ನೃತ್ಯ

    ಮೈಸೂರು: ಯುವ ಮನಸ್ಸುಗಳನ್ನು ಸೆಳೆಯುವ ಯುವ ಸಂಭ್ರಮ ಸಭಿಕರನ್ನು ರಂಜಿಸಿತು.

    ದಸರಾ ಮಹೋತ್ಸವ ಅಂಗವಾಗಿ ಮಾನಸಗಂಗೋತ್ರಿಯ ಬಯಲುರಂಗ ಮಂದಿರದಲ್ಲಿ ನಡೆದ 8ನೇ ದಿನದ ಕಾರ್ಯಕ್ರಮವೂ ರಂಗುರಂಗಿನ ಸಂಗೀತೋತ್ಸವದಿಂದ ಗಮನ ಸೆಳೆಯಿತು.

    ಮಾತೃ ಮಂಡಳಿಯ ಶಿಶುವಿಕಾಸ ಕೇಂದ್ರದ ವಿಶೇಷ ಮಕ್ಕಳ ನೃತ್ಯ ಕಾರ್ಯಕ್ರಮಕ್ಕೆ ನೆರೆದವರು ಭಾವುಕರಾದರು. ತಮ್ಮ ಅಂಗವೈಕಲ್ಯತೆ ನಡುವೆಯೂ ಮನೋಜ್ಞವಾಗಿ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು.

    ಶಿವಮೊಗ್ಗದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ತಂಡದ ವಿದ್ಯಾರ್ಥಿಗಳು ಜಾನಪದ ನೃತ್ಯ ಪ್ರಸ್ತುತ ಪಡಿಸಿದರು. ಹುಣಸೂರಿನ ಶ್ರೀ ಆದಿಚುಂಚನಗಿರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ, ಮಾನವ ನಿರ್ಮಿತ ಆಪತ್ತುಗಳ ಕುರಿತು ನೃತ್ಯದ ಮೂಲಕ ಅರಿವು ಮೂಡಿಸಿದರು. ಮಂಡ್ಯದ ಮಾಂಡವ್ಯ ಪದವಿ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರೀಯ ಭಾವೈಕತ್ಯತೆ ಕುರಿತು ಸಮೂಹ ನೃತ್ಯ ಮಾಡಿದರು.

    ಶ್ರೀರಂಗಪಟ್ಟಣದ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಜಾನಪದ ಕಲೆಯನ್ನು ಸೊಗಸಾಗಿ ಅನಾವರಣಗೊಳಿಸಿದರು. ಇತ್ತ ಮೈಸೂರಿನ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಭಾರತ ಸ್ವಾತಂತ್ರೃ ಚಳವಳಿಯನ್ನು ತೆರೆದಿಟ್ಟರು. ಕುವೆಂಪುನಗರದ ಕಾಳಿದಾಸ ಕಾಂಪೋಸಿಟ್ ಕಾಲೇಜು, ಮಳವಳ್ಳಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಶ್ರೀರಂಗಪಟ್ಟಣದ ನಗುವನಹಳ್ಳಿಯ ಸರ್ಕಾರಿ ಪಿಯು ಕಾಲೇಜು, ಕಿರುಗಾವಲಿನ ಭಾರತಿ ಪಿಯು ಕಾಲೇಜು, ಮೈಸೂರಿನ ಎನ್.ಎಸ್.ರಸ್ತೆಯ ಸರ್ಕಾರಿ ಮಹಾರಾಣಿ ಮಹಿಳಾ ಪ್ರಶಿಕ್ಷಣ ಸಂಸ್ಥೆಯ ಸೇರಿದಂತೆ 28 ಕಾಲೇಜುಗಳ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts