More

    ಜನರ ದೂರುಗಳ ಇತ್ಯರ್ಥಕ್ಕೆ ಪ್ರತ್ಯೇಕ ಸಭೆ: ಕೊಪ್ಪಳ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಮಾಹಿತಿ

    ಗಂಗಾವತಿ: ಜನರ ದೂರುಗಳ ಇತ್ಯರ್ಥಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಹೇಳಿದರು.

    ಬಸಾಪಟ್ಟಣದ ಸರ್ಕಾರಿ ಹಿಪ್ರಾ ಶಾಲೆ ಆವರಣದಲ್ಲಿ ಜಿಲ್ಲಾಡಳಿತದಿಂದ ಶನಿವಾರ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಗಳ ಕಡೆಗೆ ಕಾರ್ಯಕ್ರಮದ ಗ್ರಾಮವಾಸ್ತವ್ಯದಲ್ಲಿ ಮಾತನಾಡಿದರು. ಸಭೆ ಭಾಷಣಕ್ಕೆ ಸೀಮಿತವಾಗಲಿದ್ದು, ಸಮಸ್ಯೆ ತಿಳಿದುಕೊಳ್ಳಲು ಆಗಲ್ಲ. ಹೀಗಾಗಿ ಈ ಬಾರಿ ಸಭೆ ರದ್ದುಪಡಿಸಲಾಗಿದೆ. ಗ್ರಾಮದ ಎಲ್ಲ ಏರಿಯಾಗಳಿಗೆ ಭೇಟಿ ನೀಡಿ ಖುದ್ದಾಗಿ ಸಮಸ್ಯೆ ಆಲಿಸಲಾಗುತ್ತಿದ್ದು, ಸರ್ಕಾರಿ ಯೋಜನೆ ಸಮರ್ಪಕ ಅನುಷ್ಠಾನದ ಬಗ್ಗೆ ಜನರಿಂದ ಮಾಹಿತಿ ಪಡೆದುಕೊಳ್ಳಲಾಗುವುದು. ವಿವಿಧ ಇಲಾಖೆ ಯೋಜನೆಗಳ ಪ್ರದರ್ಶನ ಮತ್ತು ಮಾಹಿತಿ ಕೇಂದ್ರದ ವ್ಯವಸ್ಥೆ ಮಾಡಿದ್ದು, ತೆರಳಿ ತಿಳಿದುಕೊಳ್ಳಬಹುದಾಗಿದೆ ಎಂದರು.

    ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಗ್ರಾಮವಾಸ್ತವ್ಯದಿಂದ ಬಹುದಿನಗಳ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಗ್ರಾಮದ ಜನರ ಬೇಡಿಕೆ ಬಸ್ ನಿಲ್ದಾಣಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದರು.

    ಅಧಿಕಾರಿಗಳ ತಂಡ ಗ್ರಾಮದ ದಲಿತ, ಅಲ್ಪಸಂಖ್ಯಾತ ಕಾಲನಿಗಳಿಗೆ ತೆರಳಿ ಸಮಸ್ಯೆ ಆಲಿಸಿದರು. ಪಡಿತರ ಅಂಗಡಿಯಲ್ಲಿ ವಿತರಿಸುತ್ತಿರುವ ಆಹಾರ ಧಾನ್ಯ ಪರಿಶೀಲಿಸಿದರು. ಸ್ವಚ್ಛತಾ ಓಟದ ಜೆ ಕ್ರೀಡಾ ಮೈದಾನ ಉದ್ಘಾಟಿಸಲಾಯಿತು. ಚರಂಡಿ, ರಸ್ತೆ ಸೇರಿ ಕೊಳೆಗೇರಿ ಪ್ರದೇಶದಲ್ಲಿನ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದರು. ಕಂದಾಯ, ಗ್ರಾಪಂ, ಅಬಕಾರಿ, ಪ್ರವಾಸೋದ್ಯಮ, ಸಾರಿಗೆ, ಆಹಾರ ಸೇರಿ ವಿವಿಧ ಇಲಾಖೆಗಳ 65ಕ್ಕೂ ಹೆಚ್ಚು ಅಹವಾಲು ಸ್ವೀಕರಿಸಿದರು. ಶಾಲೆ ಆವರಣದ ತರಗತಿ ಕೊಠಡಿಗಳಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಹವಾಲುಗಳನ್ನು ಇತ್ಯರ್ಥಪಡಿಸಿ ವರದಿ ಸಲ್ಲಿಸುವಂತೆ ಡಿಸಿ ಸೂಚಿಸಿದರು. ಲಾನುಭವಿಗಳಿಗೆ ಸಂಧ್ಯಾ ಸುರಕ್ಷಾ, ವಿಧವಾ, ಅಂಗವಿಕಲ ಮಾಸಾಶನದ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

    ಗ್ರಾಪಂ ಅಧ್ಯಕ್ಷೆ ಮಂಜಮ್ಮ ಭೋಗೇಶಪ್ಪ, ಉಪಾಧ್ಯಕ್ಷ ಟಿ.ಶ್ರೀಕಾಂತ, ಜಿಪಂ ಸಿಇಒ ಫೌಜಿಯಾ ತರನ್ನುಮ್, ಎಸಿ ಬಸವಣ್ಣೆಪ್ಪ ಕಲಶೆಟ್ಟಿ, ತಹಸೀಲ್ದಾರ್ ಯು.ನಾಗರಾಜ್, ತಾಪಂ ಇಒ ಮಹಾಂತಗೌಡ ಪಾಟೀಲ್ ಇತರರಿದ್ದರು.

    ತೃತೀಯಲಿಂಗಿಗಳ ಜತೆ ಸಂವಾದ : ಮೊದಲ ಬಾರಿಗೆ ವೇದಿಕೆ ಕಾರ್ಯಕ್ರಮ ರದ್ದುಪಡಿಸಿದ್ದು, ಹಾರ ತುರಾಯಿಗಳಿಗೆ ಅವಕಾಶವಿರಲಿಲ್ಲ. ಆರೋಗ್ಯ, ನರೇಗಾ, ಕೃಷಿ ಇಲಾಖೆ ಆಯೋಜಿಸಿದ್ದ ಪ್ರದರ್ಶನ ಮಳಿಗೆ ಗಮನಸೆಳೆಯಿತು. ಅಹವಾಲು ಸ್ವೀಕರಿಸಲು ಪ್ರತ್ಯೇಕ ಕೇಂದ್ರ ತೆರೆಯಲಾಗಿತ್ತು. ಅಹವಾಲುಗಳ ಇತ್ಯರ್ಥ ಮತ್ತು ಹಿಂಬರಹ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಡಿಸಿ ಸುಂದರೇಶ ಮತ್ತು ಜಿಪಂ ಸಿಇಒ ೌಜಿಯಾ ತರನ್ನುಮ್ ವಿಶ್ರಾಂತಿ ಪಡೆಯದೇ ಗ್ರಾಮದಲ್ಲಿ ಸಂಚರಿಸಿದರು. ನರೇಗಾ ಕೆಲಸದಲ್ಲಿ ಪಾಲ್ಗೊಂಡ ತೃತೀಯಲಿಂಗಿಗಳೊಂದಿಗೆ ಸಂವಾದ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts