More

    ಜನರ ಜೇಬಿನಿಂದ ಕಳ್ಳತನ ಮಾಡುತ್ತಿರುವ ಸರ್ಕಾರಗಳು

    ಶಿರಸಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಜೇಬಿನಿಂದ ಕಳ್ಳತನ ಮಾಡುತ್ತಿವೆ. ಇದರ ವಿರುದ್ಧ ಐದು ದಿನಗಳ ಕಾಲ ಐದು ಸಾವಿರ ಕಡೆ ಹೋರಾಟ ನಡೆಸಲಾಗಿದೆ. ಬಿಜೆಪಿ ವಿರುದ್ಧ ಹೋರಾಟ ನಿರಂತರವಾಗಿರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.
    ತೈಲಬೆಲೆ ಹಾಗೂ ಬೆಲೆ ಏರಿಕೆ ವಿರುದ್ಧ ಪ್ರತಿಭಟನಾರ್ಥವಾಗಿ ಹಮ್ಮಿಕೊಂಡ ಸೈಕಲ್ ಜಾಥಾಕ್ಕೆ ಇಲ್ಲಿನ ಮಾರಿಕಾಂಬಾ ದೇವಾಲಯದಲ್ಲಿ ಬುಧವಾರ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
    ಈ ಹಿಂದೆ ತೈಲ ಬೆಲೆ ಏರಿಕೆಯಾದಾಗ ಅನಂತಕುಮಾರ ಹೆಗಡೆ, ಶೋಭಾ ಕರಂದ್ಲಾಜೆ, ಯಡಿಯೂರಪ್ಪ ಮಾತನಾಡುತ್ತಿದ್ದರು. ಈಗ ಇವರು ಎಲ್ಲಿಗೆ ಹೋಗಿದ್ದಾರೆ? ಎಂದು ಪ್ರಶ್ನಿಸಿದ ಅವರು, ಅತಿ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದ ಜಿಲ್ಲೆ ಉತ್ತರ ಕನ್ನಡ. ಹಾಗಾಗಿ ಬ್ರಿಟಿಷರನ್ನು ಓಡಿಸಿದಂತೆ ಬಿಜೆಪಿಯನ್ನು ಇಲ್ಲಿಂದ ಮೊದಲು ತೊಲಗಿಸಬೇಕಿದೆ. ಜೈಲು, ಬೇಲ್​ಗೆ ನಾವು ಹಾಗೂ ನಮ್ಮ ಕಾರ್ಯಕರ್ತರು ಹೆದರುವುದಿಲ್ಲ. ಸಾಮಾನ್ಯ ಜನರ ಬದುಕಿಗೆ ತೊಂದರೆಯಾಗುತ್ತಿರುವುದನ್ನು ಕಾಂಗ್ರೆಸ್ ಅದನ್ನು ಖಂಡಿಸುತ್ತದೆ ಎಂದರು.
    ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಇಷ್ಟು ಭ್ರಷ್ಟ ಸರ್ಕಾರ ನೋಡಿರಲಿಲ್ಲ. ಬೆಲೆ ಏರಿಕೆಯಿಂದ ಸೈಕಲ್ ಸಾಮಾನ್ಯ ಜನರ ವಾಹನವಾಗಿದೆ. ಕೆಪಿಸಿಸಿ ಅಧ್ಯಕ್ಷರು ಇಡೀ ರಾಜ್ಯದ ಜನರ ಸಮಸ್ಯೆ ಆಲಿಸಲು ರಾಜ್ಯ ಸುತ್ತುತ್ತಿದ್ದಾರೆ. ಯುವಜನತೆ ಯೋಚಿಸಿ ತೀರ್ವನಿಸಬೇಕು ಎಂದರು.
    ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ ಮಾತನಾಡಿ, ಮೋದಿ ಸರ್ಕಾರದ ದಬ್ಬಾಳಿಕೆ ವಿರುದ್ಧ ಸ್ವಾತಂತ್ರ್ಯ ಹೋರಾಟದ ನೆಲವಾದ ಉತ್ತರ ಕನ್ನಡದಲ್ಲಿ ಚಾಲನೆ ನೀಡಲಾಗಿದೆ. ಪ್ರಧಾನಿಯ ಬೇಜವಾಬ್ದಾರಿಯಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಕೇವಲ ಪ್ರಚಾರ ಗಿಟ್ಟಿಸುವ ನರೇಂದ್ರ ಮೋದಿ ದೇಶದ ಜನ ತಲೆತಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
    ಈ ವೇಳೆ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಮಾಜಿ ಶಾಸಕರಾದ ಮಂಕಾಳ ವೈದ್ಯ, ಸತೀಶ ಸೈಲ್, ಪ್ರಮುಖರಾದ ಪ್ರಶಾಂತ ದೇಶಪಾಂಡೆ ಇತರರಿದ್ದರು.
    ಕರೊನಾ ಲಸಿಕೆ ವಿಷಯದಲ್ಲಿ ಸುಳ್ಳಿನ ಕಂತೆ: ಕರೊನಾ ಲಸಿಕೆ ವಿಷಯದಲ್ಲಿ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರು ನಾಡಿನ ಜತೆಯೆದುರು ಸುಳ್ಳಿನ ಕಂತೆ ಕಟ್ಟುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಟೀಕಿಸಿದರು.
    ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕರೊನಾ ಲಸಿಕೆ ಕೊರತೆಯಿದೆ. ಸರ್ಕಾರ ಲಸಿಕೆ ನೀಡುವುದರಲ್ಲಿ ಸಂಪೂರ್ಣ ವಿಫಲವಾಗಿದೆ. ಇದನ್ನು ಮುಚ್ಚಿಕೊಳ್ಳಲು ಮುಖ್ಯಮಂತ್ರಿ ಸೇರಿದಂತೆ ಆರೋಗ್ಯ ಸಚಿವರು ಕೂಡ ಸುಳ್ಳಿನ ಕಂತೆ ಹೇಳುತ್ತಿದ್ದಾರೆ. ಆರೋಗ್ಯ ಸಚಿವರು ದೆಹಲಿಗೆ ಹೋಗಿ ಒಂದೂವರೆ ಲಕ್ಷದಷ್ಟು ಲಸಿಕೆ ಬೇಕು ಎಂದು ಅರ್ಜಿ ಕೊಟ್ಟಿದ್ದು ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.
    ಮೇಕೆದಾಟು ಯೋಜನೆ ವಿಚಾರದಲ್ಲಿ ರಾಜ್ಯ ಸರ್ಕಾರ ತನ್ನ ಸ್ವಾಭಿಮಾನವನ್ನು ಕಳೆದುಕೊಳ್ಳಬಾರದು ಹಾಗೂ ಮಾರಬಾರದು. ಮುಖ್ಯಮಂತ್ರಿ ತಮಿಳುನಾಡಿಗೆ ಪತ್ರ ಬರೆದಿದ್ದೇ ತಪ್ಪು. ಮಹಾದಾಯಿ, ಕಾವೇರಿ ವಿಚಾರ ಇರಬಹುದು, ಇದು ನಮ್ಮ ಜಮೀನಿನಲ್ಲಿದ್ದು ನಮ್ಮ ಹಕ್ಕಾಗಿದೆ. ಸುಪ್ರೀಂ ಕೋರ್ಟ್ ತೀರ್ಪು ಕೂಡಾ ನೀಡಿದೆ. ನಮಗೆ ಕೇಂದ್ರ ಸರ್ಕಾರ, ತಮಿಳುನಾಡು, ಗೋವಾ ಸರ್ಕಾರದ ಅನುಮತಿ ಬೇಕಾಗಿಲ್ಲ. ಯಾರ ಅನುದಾನ ತೆಗೆದುಕೊಳ್ಳಬೇಕಿಲ್ಲ. ರಾಜಕೀಯ ಇಚ್ಛಾಶಕ್ತಿ ಬೇಕು ಎಂದರು.
    ಕೇಂದ್ರ ಸರ್ಕಾರದ ಸಚಿವ ಸಂಪುಟ ಬದಲಾವಣೆ ಅವರ ಸರ್ಕಾರದ ತೀರ್ವನವಾಗಿದೆ. ಆದರೆ, ರಾಜ್ಯದ ಬಿಜೆಪಿ ಸಂಸದರು ಹೆಚ್ಚಿನ ಅನುದಾನ ತಂದು, ಅಭಿವೃದ್ಧಿ ಮಾಡಬೇಕು ಎಮನದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts