More

    ಜನಪರ ಕಾರ್ಯಗಳಿಂದ ಆತ್ಮತೃಪ್ತಿ ಸಾಧ್ಯ

    ಚಿಕ್ಕಬಳ್ಳಾಪುರ: ಜನಪರ ಅಭಿವೃದ್ಧಿ ಕೆಲಸಗಳಿಂದ ಮಾತ್ರ ಆತ್ಮತೃಪ್ತಿ ಲಭಿಸುತ್ತದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷೆ ರೂಪಾ ಲೋಕೇಶ್ ಅಭಿಪ್ರಾಯಪಟ್ಟರು.

    ತಾಲೂಕಿನ ನಂದಿ ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರಿಗೆ ಗುರುವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪರಸ್ಪರ ಸಹಕಾರ ಮನೋಭಾವನೆಯಿಂದ ಕೆಲಸಗಳನ್ನು ಕೈಗೊಂಡು ಜನರ ಸಮಸ್ಯೆಗಳನ್ನು ಬಗೆಹರಿಸಬೇಕು. ಇದರಿಂದ ಮನ್ನಣೆ ಸಿಗುವ ಜತೆಗೆ ಹೆಸರೂ ಸಹ ಉಳಿಯುತ್ತಿದೆ ಎಂದರು.

    ನಂದಿ ಗ್ರಾಮವು ಆಕರ್ಷಕ ಪ್ರವಾಸಿ, ಧಾರ್ಮಿಕ ತಾಣಗಳನ್ನು ಹೊಂದಿರುವುದರ ಜತೆಗೆ ಹೋಬಳಿ ಕೇಂದ್ರವಾಗಿರುವುದರಿಂದ ಜಿಲ್ಲೆಯ ಪ್ರಮುಖ ಪ್ರದೇಶ ಎನಿಸಿಕೊಂಡಿದೆ. ಪ್ರವಾಸಿಗರು ಮತ್ತು ಸ್ಥಳೀಯರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲು, ಅಭಿವೃದ್ಧಿ ಕೆಲಸ ಕೈಗೊಳ್ಳಲು ಸದಸ್ಯರು ಹೆಚ್ಚಿನ ಸಹಕಾರ ನೀಡಿದ್ದಾರೆ ಎಂದು ಪಿಡಿಒ ಮುನಿರಾಜು ಸ್ಮರಿಸಿದರು.

    ನಿರ್ಗಮಿತ ಗ್ರಾಪಂ ಸದಸ್ಯರಿಗೆ ಸನ್ಮಾನಿಸಿ ಬೀಳ್ಕೊಡಲಾಯಿತು. ಮಾಜಿ ಸದಸ್ಯರಾದ ಜಿ.ರಮೇಶ್, ಎನ್.ರಾಜಣ್ಣ, ವಿಜಯಲಕ್ಷ್ಮೀ, ಗೌರಮ್ಮ, ಎನ್.ಆರ್.ಮಂಜುನಾಥ್, ಮೊಮಿನಾ, ವಿ.ಎಂ.ಮಾನಿನಿ, ಬಿ.ಕೆ.ಸುರೇಶ್, ಮಮ್ತಾಜ್ ಉನ್ನಿಸಾ, ನಾಗವೇಣಿ, ಸಿ.ಕೆ.ಮಲ್ಲಪ್ಪ, ಎಂ.ಆರತಿ, ಆರ್.ಸೌಮ್ಯ, ಕಾರ್ಯದರ್ಶಿ ಕೆ.ಎಚ್.ಮುನಿರಾಜು ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts