More

    ಜನಪರ ಆಡಳಿತವೇ ಸಂಕನೂರ ಗೆಲುವಿಗೆ ಶ್ರೀರಕ್ಷೆ

    ಹಿರೇಕೆರೂರ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜನಪರ ಆಡಳಿತ ನಡೆಸುತ್ತಿರುವುದು ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

    ಪಟ್ಟಣದ ಗುರುಭವನದಲ್ಲಿ ತಾಲೂಕು ಬಿಜೆಪಿ ಘಟಕದಿಂದ ಮಂಗಳವಾರ ಏರ್ಪಡಿಸಿದ್ದ ಪದವೀಧರ ಮತದಾರರ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ಬಾರಿ 7 ಸಾವಿರ ಮತಗಳು ತಿರಸ್ಕೃತಗೊಂಡಿದ್ದವು. ಈ ಬಾರಿ ಅಂತಹ ತಪ್ಪನ್ನು ಮಾಡದೆ ಬಿಜೆಪಿ ಅಭ್ಯರ್ಥಿಯ ಹೆಸರಿನ ಮುಂದೆ 1 ಅಂಕಿ ಬರೆಯುವ ಮೂಲಕ ಮತ ಚಲಾಯಿಸಿ, ಬಾರಿ ಅಂತರದಿಂದ ಗೆಲ್ಲಿಸಬೇಕು ಎಂದರು.

    ಕೃಷಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಶಿಕ್ಷಕರ, ಶಿಕ್ಷಣ ಸಂಸ್ಥೆಗಳ, ಪದವೀಧರರ, ನೌಕರರ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಕನೂರ ಅವರ ಗೆಲವು ನಿಶ್ಚಿತ. ವಿಧಾನ ಪರಿಷತ್ತಿನಲ್ಲಿ ನಮಗೆ ಸ್ಪಷ್ಟ ಬಹುಮತ ಇರದ ಕಾರಣ ಕೆಲ ಮಸೂದೆಗಳು ಅಂಗಿಕಾರವಾಗಲಿಲ್ಲ. ವಿಧಾನ ಪರಿಷತ್ ಹಾಗೂ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದರು.

    ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ಚುನಾವಣೆಯನ್ನು ಹಗುರವಾಗಿ ಪರಿಗಣಿಸದೆ ಬಹು ಎಚ್ಚರಿಕೆಯಿಂದ ಮತ ಹಾಕಿಸುವ ಕಾರ್ಯ ಮಾಡಬೇಕು ಎಂದರು.

    ವಿಧಾನ ಪರಿಷತ್ ಮಾಜಿ ಸದಸ್ಯ ಶಿವರಾಜ ಸಜ್ಜನರ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ ಮಾತನಾಡಿದರು. ತಾಪಂ ಅಧ್ಯಕ್ಷ ರಾಜು ಬಣಕಾರ, ಜಿಪಂ ಸದಸ್ಯೆ ಸುಮಿತ್ರಾ ಪಾಟೀಲ, ಲಿಂಗರಾಜ ಚಪ್ಪರದಹಳ್ಳಿ, ಹನುಮಂತಗೌಡ ಭರಮಣ್ಣನವರ, ಆರ್.ಎನ್. ಗಂಗೋಳ, ಮಹೇಶ ಗುಬ್ಬಿ, ಎಸ್.ಆರ್. ಅಂಗಡಿ, ಶಂಕ್ರಗೌಡ ಚನ್ನಗೌಡ್ರ, ಸುಜಾತಾ ಕೊಟಗಿಮನಿ, ನಿರ್ಮಲಾ ಗುಬ್ಬಿ ಹಾಗೂ ಮತ್ತಿತರರು ಇದ್ದರು. ಷಣ್ಮುಖ ಮಳಿಮಠ, ಡಿ.ಸಿ. ಪಾಟೀಲ, ದೇವರಾಜ ನಾಗಣ್ಣನವರ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts