More

    ಜನನ-ಮರಣ ನೋಂದಣಿ ಶೇ.100 ಗುರಿಗೆ ಎಡಿಸಿ ತಾಕೀತು

    ಚಿತ್ರದುರ್ಗ: ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜನನ-ಮರಣ ನೋಂದಣಿಗೆ ಕ್ರಮ ವಹಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಡಿಸಿ ಕಚೇರಿಯಲ್ಲಿ ಮಂಗಳವಾರ ಜನನ-ಮರಣ ನೋಂದಣಿ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವ ರು, ಜನನ-ಮರಣ ಪ್ರಮಾಣ ಪತ್ರಗಳು ಅತ್ಯಂತ ಅಗತ್ಯವಿದ್ದು, ಶೇ.100 ನೋಂದಣಿಗೆ ವಿವಿಧ ಇಲಾಖೆಗಳ ನೆರವು ಪಡೆದು ಗುರಿ ಸಾಧಿಸ ಬೇಕೆಂದರು.
    ಹೆರಿಗೆ ವಿಚಾರದಲ್ಲಿ ಜಿಲ್ಲಾಸ್ಪತ್ರೆಗೆ ಹೆಚ್ಚು ಹೊರೆಯಾಗುತ್ತಿದೆ. ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ ,ಸಮುದಾಯ ಆರೋಗ್ಯ ಕೇಂದ್ರಗ ಳು ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸಲಾಗಿದ್ದು, ಸ್ಥಳೀಯ ಆಸ್ಪತ್ರೆಗಳಲ್ಲಿ ಹೆರಿಗೆಗೆ ಕ್ರಮವಹಿಸಬೇಕು.

    ಅಧಿಕಾರಿಗಳಿಗೆ ನೋಟಿಸ್
    ತಹಸೀಲ್ದಾರ್ ಅಧ್ಯಕ್ಷತೆಯ ತಾಲೂಕು ಮಟ್ಟದ ಜನನ-ಮರಣ ಸಮಿತಿ ಸಮಿತಿ ಸಭೆಗಳನ್ನು ಸಮರ್ಪಕವಾಗಿ ನಡೆಸದ ಅಧಿಕಾರಿ ಗಳಿಗೆ ನೋಟಿಸ್ ನೀಡುವಂತೆ ಎಡಿಸಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಚ್.ಶಶಿರೇಖಾ ಅವರಿಗೆ ಸೂಚಿಸಿದರು. ಪ್ರತಿ ಮಾಹೆ ಒಂದ ರಂತೆ ವರ್ಷಕ್ಕೆ 12 ಸಭೆಗಳನ್ನು ನಡೆಸಬೇಕು.

    ಚಳ್ಳಕೆರೆ ತಾಲೂಕಿನಲ್ಲಿ 7, ಚಿತ್ರದುರ್ಗ 4, ಹೊಳಲ್ಕೆರೆ-7, ಹೊಸದುರ್ಗ-5, ಮೊಳಕಾಲ್ಮೂರು ತಾಲೂಕಿನಲ್ಲಿ 6 ಸಭೆ ನಡೆಸಲಾಗಿದೆ. ಹಿರಿಯೂರಲ್ಲಿ ಯಾವುದೇ ಸಭೆ ನಡೆಸಿಲ್ಲವೆಂದು ಶಶಿರೇಖಾ ಹೇಳಿದರು. 2023ನೇ ಸಾಲಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ 1163 ಹಾಗೂ ನಗರ ಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ 1176, ಸರ್ಕಾರಿ ಆಸ್ಪತ್ರೆಯಲ್ಲಿ 102 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 41 ನೋಂದಣಿ ಘಟಕಗಳಿವೆ ಎಂದರು.

    ಕಳೆದ ಜನವರಿಯಿಂದ ಅಕ್ಟೋಬರ್‌ವರೆಗೆ 15821 ಜನನ ನೋಂದಣಿಯಾಗಿದೆ. 13434 ಮರಣ ನೋಂದಣಿಯಾಗಿದೆ. ಒಂದು ವರ್ಷದೊಳಗಿನ 138 ಶಿಶುಗಳ ಮರಣ ಹಾಗೂ ಐದು ವರ್ಷದೊಳಗಿನ 21 ಮಕ್ಕಳ ಶಿಶು ಮರಣ ನೋಂದಣಿಯಾಗಿದೆ. ಚಿತ್ರದುರ್ಗ ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಸೇರಿದಂತೆ ಜನನ ದರ ಶೇ.13.57 ಹಾಗೂ ಮರಣ ದರ ಶೇ.9.31 ಇದೆ ಎಂದರು.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್,ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎನ್.ಕಾಶಿ, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಜಿಲ್ಲಾಸ್ಪತ್ರೆ ಆರ್‌ಎಂಒ ಡಾ.ಆನಂದಪ್ರಕಾಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts