More

    ಜಗತ್ತಿಗೆ ಕನ್ನಡ ಪರಿಚಯಿಸಿದ ಕೀರ್ತಿ ಕಲ್ಯಾಣಕ್ಕಿದೆ

    ಹುಲಸೂರು: ಯಾವುದೇ ಭಾಷೆಯನ್ನು ಪ್ರೀತಿಸಿ. ಆದರೆ ಕನ್ನಡವನ್ನು ಮರೆಯಬಾರದು. ಇಡೀ ಜಗತ್ತಿಗೆ ಕನ್ನಡವನ್ನು ಪರಿಚಯ ಮಾಡಿದ ಕೀತರ್ಿ ಬಸವಕಲ್ಯಾಣಕ್ಕೆ ಸಲ್ಲಿಸುತ್ತದೆ. 12ನೇ ಶತಮಾನದಲ್ಲಿ ಕಲ್ಯಾಣ ಕನ್ನಡದ ತವರು ಮನೆ ಆಗಿತ್ತು ಎಂದು ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿದರು.

    ಪಟ್ಟಣದ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಅತ್ಯುತ್ತಮ ಉಪನ್ಯಾಸಕಿ ಪ್ರಶಸ್ತಿ ಪಡೆದ ಮಲ್ಲಮ್ಮ ಆರ್.ಪಾಟೀಲ್ ಅವರಿಗೆ ಸನ್ಮಾನ ಮತ್ತು ಸಂವಾದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಮಕ್ಕಳ ಜೀವನ ಪರಿವರ್ತನೆ ಮಾಡಿದ ಕೀತರ್ಿ ಮಲ್ಲಮ್ಮ ಪಾಟೀಲ್ ಅವರಿಗೆ ಸಲ್ಲುತ್ತದೆ. ತಮ್ಮ ಜೀವನವನ್ನೇ ವಿದ್ಯಾಥರ್ಿಗಳ ಕಲಿಕೆಗಾಗಿ ಮುಡುಪಾಗಿಟ್ಟಿರುವ ಅವರಿಗೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಲಿ ಎಂದರು.

    ಉಪನ್ಯಾಸಕಿ ಮಲ್ಲಮ್ಮ ಆರ್.ಪಾಟೀಲ್ ಮಾತನಾಡಿ, ವಿದ್ಯಾಥರ್ಿಗಳಿಗೆ ಪಾಠ ಮಾಡುವುದೇ ನನ್ನ ಪ್ರಥಮ ಆದ್ಯತೆಯಾಗಿದೆ. ನಾನು ಹೇಳುವ ಅರ್ಥಶಾಸ್ತ್ರ ವಿದ್ಯಾಥರ್ಿಗಳಿಗೆ ಕಠಿಣ. ಆದರೆ ನನ್ನ ಪಾಠ ಆಲಿಸಿದ ನಂತರ ಸರಳವೆನಿಸಿ ಹೆಚ್ಚು ಅಂಕ ಪಡೆಯುತ್ತಾರೆ ಎಂದು ಹೇಳಿದರು.

    ಪರಿಷತ್ ತಾಲೂಕು ಅಧ್ಯಕ್ಷ ನಾಗರಾಜ ಹಾವಣ್ಣ, ಡಾ.ರುದ್ರಮಣಿ ಮಠಪತಿ, ರಮೇಶ ಕಾಮಣ್ಣ, ಧಮರ್ೇಂದ್ರ ಬೋಸ್ಲೆ ಮಾತನಾಡಿದರು. ಪಿಡಿಒ ಸಂದೀಪ ಬಿರಾದಾರ್, ರವೀಂದ್ರ ಕುಲಕಣರ್ಿ, ಗಣಪತರಾವ ಖಾರಾತ, ಪೂಜಾ ಮೋರೆ, ಬಸವಕುಮಾರ ಕವಟೆ, ಬಸವರಾಜ ಪೊಲೀಸ್ಪಾಟೀಲ್ ಇತರರಿದ್ದರು. ಗ್ರಾಪಂ ಸದಸ್ಯ ನಾಗೇಶ ಮೇತ್ರೆ ನಿರೂಪಣೆ ಮಾಡಿದರು.

    ಶಿಕ್ಷಕರು ಪಾಠ ಬೋಧನೆಯಲ್ಲಿ ನಿರ್ಲಕ್ಷೃ ಮಾಡಬಾರದು. ಇದು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ವೇತನಕ್ಕೆ ತಕ್ಕಂತೆ ಮಕ್ಕಳಿಗೆ ಬೋಧನೆ ಮಾಡಿದರೆ ನಮ್ಮ ಜೀವನ ಸಾರ್ಥಕವಾಗುತ್ತದೆ. ಅವರ ಭವಿಷ್ಯ ಉಜ್ವಲವಾಗುತ್ತದೆ.
    | ಮಲ್ಲಮ್ಮ ಆರ್.ಪಾಟೀಲ್, ಅತ್ಯುತ್ತಮ ಉಪನ್ಯಾಸಕಿ ಪ್ರಶಸ್ತಿ ಪುರಸ್ಕೃತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts