More

    ಛಬ್ಬಿಯಲ್ಲಿ ಕೆಂಪು ಗಣಪತಿ ಉತ್ಸವ

    ಹುಬ್ಬಳ್ಳಿ : ತಾಲೂಕಿನ ಛಬ್ಬಿ ಗ್ರಾಮದಲ್ಲಿ ಆ. 31 ರಿಂದ ಸೆ. 2ರವರೆಗೆ ಕೆಂಪು ಗಣಪತಿ ಉತ್ಸವ ಆಚರಿಸಲಾಗುತ್ತಿದೆ.
    ಬಲಗೈಯಲ್ಲಿ ಮುರಿದ ದಂತ, ಎಡಗೈಯಲ್ಲಿ ಈಶ್ವರ ಲಿಂಗು ಹಾಗೂ ಉಳಿದೆರೆಡು ಕೈಗಳಲ್ಲಿ ಆಯುಧಗಳನ್ನು ಈ ಕೆಂಪು ಗಣಪತಿ ಮೂರ್ತಿ ಹೊಂದಿರುತ್ತಾನೆ. ಇಂತಹ ಗಣಪತಿ ಮೂರ್ತಿಗಳನ್ನು ಮೈಸೂರು ಹಾಗೂ ಇಂದೋರಿನ ಅರಮನೆಗಳಲ್ಲಿ ಮಾತ್ರ ಕಾಣಬಹುದು. ಕರ್ನಾಟಕದ ವಿವಿಧೆಡೆಯ ಜತೆಗೆ ಸುತ್ತಲಿನ ರಾಜ್ಯಗಳ ಭಕ್ತರು ಸಹ ಈ ಗಣೇಶ ಮೂರ್ತಿ ದರ್ಶನ ಪಡೆಯುತ್ತಾರೆ.
    ಆ. 31ರ ರಾತ್ರಿ 8.30 ರ ನಂತರ ಸಾರ್ವಜನಿಕರಿಗೆ ದರ್ಶನದ ವ್ಯವಸ್ಥೆ ಲಭ್ಯ. ಛಬ್ಬಿ ಗ್ರಾಮಕ್ಕೆ ಗಣೇಶ ಮೂರ್ತಿಗಳ ದರ್ಶನಕ್ಕಾಗಿ ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ ವ್ಯವಸ್ಥೆ ಒದಗಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts