More

    ಛತ್ರಪತಿ ಶಿವಾಜಿ ಮಹಾರಾಜರಿಂದ ಧಾರ್ಮಿಕ ಸ್ವಾತಂತ್ರೃ

    ಸಂಕೇಶ್ವರ: ಸ್ವರಾಜ್ಯ ಸ್ಥಾಪನೆಗಾಗಿ ಮೊಘಲರ ಆಡಳಿತಕ್ಕೆ ಸಿಂಹ ಸ್ವಪ್ನವಾಗಿ ದೇಶದ ಸಂಸ್ಕೃತಿ ಹಾಗೂ ಪರಂಪರೆ ಕಾಪಾಡಿ ಎಲ್ಲ ಧರ್ಮದವರಿಗೂ ಛತ್ರಪತಿ ಶಿವಾಜಿ ಮಹಾರಾಜರು ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯ ನೀಡಿದ್ದರು ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

    ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪ್ರತಿಮೆ ಪ್ರತಿಷ್ಠಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ದಿ.ಉಮೇಶ ಕತ್ತಿ ಅವರ ಆಶಯದಂತೆ ಎರಡು ತಿಂಗಳಲ್ಲಿ ಪಟ್ಟಣದಲ್ಲಿ ನಾಲ್ವರು ರಾಷ್ಟ್ರ ಪುರುಷರ ಪುತ್ಥಳಿ ಪ್ರತಿಷ್ಠಾಪಿಸಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿವೆ ಎಂದು ತಿಳಿಸಿದರು.

    ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಪಟ್ಟಣದಲ್ಲಿ ಅನಾವರಣಗೊಳ್ಳುತ್ತಿರುವ ಬಸವಣ್ಣ, ಛತ್ರಪತಿ ಶಿವಾಜಿ, ವೀರರಾಣಿ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಅವರು ಯಾವುದೇ ಸಮುದಾಯಕ್ಕೆ ಸೀಮಿತರಲ್ಲ ಎಂದರು.

    ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಸಂಶೋಧಕ ಡಾ. ಅಮರ ಅಡಕೆ, ಮಾಜಿ ಸಚಿವ ಎ.ಬಿ.ಪಾಟೀಲ, ವಿ.ಪ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಆರ್‌ಎಸ್‌ಎಸ್ ವರಿಷ್ಠ ಅರವಿಂದ ದೇಶಪಾಂಡೆ, ಹಿರಾ ಶುಗರ್ಸ್‌ ಅಧ್ಯಕ್ಷ ನಿಖಿಲ್‌ಕತ್ತಿ ಹಾಗೂ ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ಉಪಾಧ್ಯಕ್ಷ ಅಮರ ನಲವಡೆ ಮಾತನಾಡಿದರು. ವಿದ್ಯಾರನಸಿಂಹ ಭಾರತಿ ಸ್ವಾಮೀಜಿ, ಮಂಜುನಾಥ ಶ್ರೀ, ಭಗವಾನಗರಿ ಮಹಾರಾಜರು ಸಾನಿಧ್ಯ ವಹಿಸಿದ್ದರು. ಸಮಿತಿ ಅಧ್ಯಕ್ಷ ಶ್ರೀಕಾಂತ ಹತನೂರಿ, ಶಾಸಕ ರಾಜೇಶ ಪಾಟೀಲ, ವೀರಶೈವ ಲಿಂಗಾಯತ ಸಮುದಾಯದ ಅಧ್ಯಕ್ಷ ಅಪ್ಪಾಸಾಹೇಬ ಶಿರಕೋಳಿ, ಸಂಗಮ ಶುಗರ್ಸ್‌ ಅಧ್ಯಕ್ಷ ರಾಜೇಂದ್ರ ಪಾಟೀಲ, ಉತ್ತಮ ಪಾಟೀಲ, ಸಂಜೀವ ಒಡೆಯರ, ಜಯವಂತ ಭಾಟಲೆ, ಬಾಳಕೃಷ್ಣ ಹತನೂರಿ, ಸಂಕೇಶ್ವರ ಪುರಸಭೆ ಅಧ್ಯಕ್ಷೆ ಸೀಮಾ ಹತನೂರಿ, ಉಪಾಧ್ಯಕ್ಷ ಅಜಿತ ಕರಜಗಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಕ್ವಳ್ಳಿ, ಶಿವಾನಂದ ಮುಡಶಿ, ಸುನೀಲ ಪರ್ವತರಾವ, ಸಂಜಯ ಶಿರಕೋಳಿ, ರೋಹನ ನೇಸರಿ ತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts