More

    ಚೌಡೇನಹಳ್ಳಿಯಲ್ಲಿ ಆರೋಗ್ಯ ತಪಾಸಣೆ ಶಿಬಿರ

    ಕಿಕ್ಕೇರಿ: ಸಕಾಲಕ್ಕೆ ಆರೋಗ್ಯ ತಪಾಸಣೆ ಹಾಗೂ ಉತ್ತಮ ಜೀವನಶೈಲಿಯೇ ಆರೋಗ್ಯಯುತ ಬದುಕಿಗೆ ಮದ್ದು ಎಂದು ಕೋರಮಂಡಲ್ ಸಕ್ಕರೆ ಕಾರ್ಖಾನೆ ಹಿರಿಯ ಉಪಾಧ್ಯಕ್ಷ ವಿ.ಜೆ.ರವಿರೆಡ್ಡಿ ತಿಳಿಸಿದರು.
    ಹೋಬಳಿಯ ಚೌಡೇನಹಳ್ಳಿ ಗ್ರಾಮದಲ್ಲಿ ಕೋರಮಂಡಲ್ ಸಕ್ಕರೆ ಕಾರ್ಖಾನೆ ವತಿಯಿಂದ ಮೈಸೂರಿನ ಮಣಿಪಾಲ್ ಆಸ್ಪತ್ರೆ, ಅಗರವಾಲ್ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
    ಪ್ರಸ್ತುತ ಹಣಕ್ಕಿಂತ ಆರೋಗ್ಯ ಮುಖ್ಯವಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಬಿಪಿ, ಶುಗರ್‌ನಂತಹ ಹತ್ತಾರು ಸಮಸ್ಯೆಗಳು ಕಾಡುತ್ತಿದ್ದು, ಪ್ರತಿಯೊಬ್ಬರೂ ಆಗಿಂದಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಕಾಯಿಲೆ ಬರುವ ಮುನ್ನ ಎಚ್ಚರಿಕೆ ವಹಿಸಿದರೆ ಮುಂದಾಗುವ ಅಪಾಯದಿಂದ ತಪ್ಪಿಸಿಕೊಳ್ಳಬಹುದಾಗಿದೆ ಎಂದು ನುಡಿದರು.
    ಚೌಡೇನಹಳ್ಳಿ, ರಾಮನಹಳ್ಳಿ, ಬೀಚೇನಹಳ್ಳಿ ಸುತ್ತಮುತ್ತಲ ಗ್ರಾಮಗಳ ನಾಗರಿಕರು ಆರೋಗ್ಯ ತಪಾಸಣೆಗೆ ಒಳಗಾದರು. ಹೃದ್ರೋಗ ತಜ್ಞ, ಸ್ತ್ರೀರೋಗ ತಜ್ಞ, ಮಕ್ಕಳ ತಜ್ಞ, ಮೂಳೆ ತಜ್ಞ, ಮಧುಮೇಹ ತಜ್ಞ, ಕಣ್ಣಿನ ತಜ್ಞ ಸಾಮಾನ್ಯ ರೋಗ ತಜ್ಞರು ಶಿಬಿರದಲ್ಲಿ ಪಾಲ್ಗೊಂಡಿದ್ದರು.
    ಗ್ರಾಪಂ ಅಧ್ಯಕ್ಷೆ ಹೇಮಾವತಿ ಲಕ್ಷ್ಮೀರಾಜು, ಉಪಾಧ್ಯಕ್ಷೆ ಜಯಲಕ್ಷ್ಮಮ್ಮ, ಹಿರಿಯ ವ್ಯವಸ್ಥಾಪಕ ಬಾಬುರಾಜ್, ಪಿಎಸ್‌ಎನ್ ರೆಡ್ಡಿ, ಮ್ಯಾನೇಜರ್ ನವೀನ್, ಪಿಡಿಒ ಶಿವಕುಮಾರ್, ಸದಸ್ಯರಾದ ರವಿಕುಮಾರ್, ಸೋಮಶೇಖರ್, ವಿನೋದ, ಧನಲಕ್ಷ್ಮೀ, ರಾಧಾ, ಡಾ.ನಾಗೇಂದ್ರ, ಡಾ.ವಿನಯ್, ಡಾ.ತಿಮ್ಮಯ್ಯ, ಡಾ.ಹರ್ಷಿತಾ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts