More

    ಚೈನೀಸ್ ತಿನಿಸುಗಳ ಮೊರೆ ಹೋಗದಿರಿ


    ಯಾದಗಿರಿ: ಸಿರಿಧಾನ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕ ಸತ್ವಗಳಾದ ಮೆಗ್ನಿಷಿಯಂ, ತಾಮ್ರ, ಪಾಸ್ಪರಸ್ ಸೇರಿ ಹತ್ತಾರು ಆರೋಗ್ಯಕ್ಕೆ ಉಪಯುಕ್ತವಾದ ಅಂಶವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.


    ಶಹಾಪುರದ ಸಿಪಿಎಸ್ ಶಾಲಾ ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ, ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ರೋಡ್ ಶೋಗೆ ಚಾಲನೆ ನೀಡಿ ಅವರು ಮಾತನಾಡಿ, ಸಿರಿಧಾನ್ಯಗಳು ಔಷಧವಿದ್ದಂತೆ ಎಲ್ಲರೂ ಸೇವಿಸಬೇಕು. ಇದರಿಂದ ನಮ್ಮ ಆರೋಗ್ಯ ಸದೃಢವಾಗುತ್ತದೆ. ಇಂದಿನ ತಂತ್ರಜ್ಞಾನದ ದಿನದಲ್ಲಿ ಬೆಳೆಯುವ ಬೆಳೆಗಳಿಗೆ ಅತ್ಯಧಿಕ ಪ್ರಮಾಣದಲ್ಲಿ ರಾಸಾಯನಿಕ ಅಂಶವುಳ್ಳ ಕ್ರಿಮಿನಾಶಕ ಬಳಸುತ್ತಿರುವ ಕಾರಣ ತಿನ್ನುವ ಆಹಾರ ಸಹ ಸತ್ವ ಕಳೆದುಕೊಳ್ಳುತ್ತಿದೆ ಎಂದರು.

    ನಮ್ಮ ಪೂರ್ವಜರು ಹೆಚ್ಚಾಗಿ ಸಿರಿಧಾನ್ಯ ಬೆಳೆದು ಸೇವಿಸುತ್ತಿದ್ದರ ಪರಿಣಾಮ ಬಹಳ ಆರೋಗ್ಯವಾಗಿರುತ್ತಿದ್ದರು. ಆದರೆ, ಇಂದಿನ ಯುವ ಪೀಳಿಗೆ ಪಾಶ್ಚಾತ್ಯ ಮತ್ತು ಚೈನೀಸ್ ತಿನಿಸುಗಳ ಮೊರೆ ಹೋಗಿತ್ತಿರುವ ಕಾರಣ ಆರೋಗ್ಯದಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅಲ್ಲದೆ ಸಣ್ಣ ವಯಸ್ಸಿನಲ್ಲಿ ಮಾರಕ ಕಾಯಿಲೆ ಆವರಿಸಿಕೊಳ್ಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

    ಸರಕಾರ ಸಿರಿಧಾನ್ಯಗಳ ಬೆಳೆಗೆ ಪ್ರೋತ್ಸಾಹ ಧನ ಸಹಾಯ ನೀಡುತ್ತಿದ್ದು, ಫಲಾನುಭವಿಗಳು ಸದುಪಯೋಗ ಪಡೆದುಕೊಂಡು ಆಥರ್ಿಕವಾಗಿ ಸದೃಢರಾಗಿ, ಆರೋಗ್ಯವಂತ ಕರ್ನಾಟಕ ನಿಮರ್ಿಸುವಂತೆ ಸಲಹೆ ಮಾಡಿದರು.

    ರೋಡ್ ಶೋ ಸಿಪಿಎಸ್ ಶಾಲಾ ಮೈದಾನದಿಂದ ಹಳೆ ಬಸ್ನಿಲ್ದಾಣ, ಬಸವೇಶ್ವರ ವೃತ್ತ, ಮೋಚಿಗಡ್ಡ, ಮಹಾತ್ಮಾ ಗಾಂಧಿ ವೃತ್ತದ ಮೂಲಕ ನಡೆದು ಎಲ್ಲರ ಗಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts