More

    ಚೆಕ್ ಡ್ಯಾಂ ತಡೆಗೋಡೆ ಒಡೆದ ಗುತ್ತಿಗೆದಾರ, ಸಂಗ್ರಹವಾಗಿದ್ದ ನೀರು ಪೋಲು, ಸುಬ್ರಹ್ಮಣ್ಯ ಘಾಟಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ವೇಳೆ ಅವಘಡ

    ತೂಬಗೆರೆ: ದಶಕಗಳ ನಂತರ ಅತ್ಯುತ್ತಮ ಮಳೆಯಾಗಿ ತಾಲೂಕಿನ ಕೆರೆ-ಕುಂಟೆಗಳು ಭರ್ತಿಯಾಗಿದ್ದವು. ಇದರಿಂದಾಗಿ ಅಂತರ್ಜಲ ಹೆಚ್ಚಾಗಿ ಕೃಷಿ ಚಟುವಟಿಕೆಗೆ ಅನುಕೂಲವಾಗುತ್ತದೆ ಎಂದು ರೈತರು ಸಂಭ್ರಮಿಸಿದ್ದರು. ಆದರೆ, ಘಾಟಿಯ ವಿಶ್ವೇಶ್ವರಯ್ಯ ಪಿಕಪ್ ಡ್ಯಾಂನ ತಡೆಗೋಡೆ ಒಡೆದು, ರೈತರ ಸಂಭ್ರಮಕ್ಕೆ ಕೊಳ್ಳಿ ಇಡಲಾಗಿದೆ.

    ಚೆಕ್‌ಡ್ಯಾಂನ ಅನತಿ ದೂರದಲ್ಲಿರುವ ಗೋಶಾಲೆಗೆ ರಸ್ತೆ ನಿರ್ಮಿಸುವ ಕಾಮಗಾರಿ ವೇಳೆ ಗುತ್ತಿಗೆದಾರ ಡ್ಯಾಂನ ಮಣ್ಣಿನ ದಿಬ್ಬವನ್ನು ಒಡೆಸಿದ್ದು, ಇದರಿಂದ ಚೆಕ್‌ಡ್ಯಾಂನಲ್ಲಿದ್ದ ನೀರು ವ್ಯರ್ಥವಾಗಿ ಹರಿದಿದೆ.

    ಗುರುವಾರ ಮಧ್ಯಾಹ್ನ ಡ್ಯಾಂ ಕೆಳಗಿನ ಹಳ್ಳಗಳಿಗೆ ಏಕಾಏಕಿ ನೀರು ಹರಿಯಿತ್ತು. ಇದನ್ನು ಗಮನಿಸಿದ ರೈತರು ಕೂಡಲೇ ಡ್ಯಾಂ ಬಳಿ ಹೋಗಿ ಪರಿಶೀಲಿಸಿದಾಗ, ತಡೆಗೋಡೆ ಒಡೆದು ಕಾಲುವೆ ತೋಡಿ ನೀರು ಬಿಟ್ಟಿರುವುದು ಕಂಡು ಬಂದಿತು. ಇದರಿಂದ ಕೆರಳಿದ ರೈತರು ಜೆಸಿಬಿ ಚಾಲಕನನ್ನು ತರಾಟೆ ತೆಗೆದುಕೊಂಡರು. ಇದರಿಂದ ಎಚ್ಚೆತ್ತುಕೊಂಡ ಆತ, ಕಾಲುವೆ ಮುಚ್ಚಿ ಸಂಪೂರ್ಣ ನೀರು ವ್ಯರ್ಥವಾಗುವುದನ್ನು ತಪ್ಪಿಸಿದ ಎಂದು ರೈತ ಗಜೇಂದ್ರ ತಿಳಿಸಿದರು.

    ಸ್ಥಳಕ್ಕೆ ಅಧಿಕಾರಿಗಳ ದೌಡು: ಡ್ಯಾಂ ಏರಿ ಒಡೆದು, ರೈತರ ಆಕ್ರೋಶಗೊಂಡಿರುವ ಮಾಹಿತಿ ಸಿಗುತ್ತಲೇ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬಂದರು. ಅಲ್ಲಿನ ಪರಿಸ್ಥಿತಿ ಅವಲೋಕಿಸಿ, ಹೆಚ್ಚಿನ ಅನಾಹುತ ತಪ್ಪಿಸಲು ಸೂಕ್ತ ಕ್ರಮ ಕೈಗೊಂಡರು. ಆದರೆ, ಚೆಕ್‌ಡ್ಯಾಂಗೆ ಹಾನಿ ಮಾಡಿದ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳದೆ, ಆತನೊಂದಿಗೆ ಸಂಧಾನ ಮಾತುಕತೆ ನಡೆಸಿದರು ಎಂದು ರೈತರು ಆರೋಪಿಸಿದರು.

    ರೈತ ಸಂಘದವರು ಮತ್ತು ಸ್ಥಳೀಯರ ಸಮಯ ಪ್ರಜ್ಞೆಯಿಂದ ಡ್ಯಾಂ ಉಳಿದಿದೆ. ಈ ಕುರಿತು ಪರಿಶೀಲಿಸಿದ್ದು, ತಪ್ಪಿತಸ್ಥರ ಕಾನೂನು ಕ್ರಮ ಜರುಗಿಸುತ್ತೇವೆ. ಡ್ಯಾಂ ದುರಸ್ತಿ ಮಾಡಲು ನೀರಾವರಿ ಇಲಾಖೆ ಶಿಾರಸು ಮಾಡಿದ್ದೇನೆ.
    ಮೋಹನಾ ಕುಮಾರಿ, ತಹಸೀಲ್ದಾರ್

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts