More

    ಚುನಾವಣೆ ಹೊತ್ತಿಗೆ ಜಾಗೃತರಾಗಲಿ ಜನ- ಮಂಜುಳಾ ಅಕ್ಕಿ

    ದಾವಣಗೆರೆ: ದೇಶದ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಸಿಗಬೇಕಾದರೆ ಮುಂಬರುವ ಚುನಾವಣೆ ಹೊತ್ತಿಗೆ ಜನರು ಜಾಗೃತರಾಗಬೇಕಿದೆ ಎಂದು ಹಾವೇರಿಯ ಹೋರಾಟಗಾರ್ತಿ ಮಂಜುಳಾ ಅಕ್ಕಿ ಹೇಳಿದರು.
    ಮೂರು ಕೃಷಿ ಕಾಯ್ದೆಗಳ ರದ್ದತಿ ಸೇರಿ ವಿವಿಧ ಹಕ್ಕೊತ್ತಾಯಗಳಿಗಾಗಿ ಕೂಡಲಸಂಗಮದಿಂದ ಆರಂಭವಾಗಿ ದಾವಣಗೆರೆಗೆ ಪ್ರವೇಶಿಸಿದ ಸಮಾಜ ಪರಿವರ್ತನಾ ಸತ್ಯಾಗ್ರಹ ಯಾತ್ರೆಯು ಜಯದೇವ ವೃತ್ತದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
    ಶೇ.13ರಷ್ಟು ಜನರೊಂದಿಗೆ ನಡೆದ ಸ್ವಾತಂತ್ರೃ ಹೋರಾಟ ಯಶಸ್ಸು ಗಳಿಸಿತು. ಹೀಗಾಗಿ ದೇಶ ವಿರೋಧಿ ನೀತಿಗಳ ವಿರುದ್ಧದ ನಮ್ಮ ಹೋರಾಟದಲ್ಲಿ ಜನಸಂಖ್ಯೆ ಕಡಿಮೆ ಇದ್ದರೂ ಬರುವ ದಿನಗಳಲ್ಲಿ ಫಲ ಸಿಗಲಿದೆ. ಕೂಲಿಕಾರ್ಮಿಕರು, ಕೃಷಿ ಕಾರ್ಮಿಕರು ಸೇರಿ ಎಲ್ಲರ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ನಡೆಸಲಾಗುತ್ತಿದೆ ಎಂದರು
    ದೇಶದಲ್ಲಿ ರಾಜಕೀಯ ವ್ಯವಸ್ಥೆ ಉತ್ತಮಗೊಳ್ಳಬೇಕಾದರೆ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಬಾರದು. ಜನರಿಗೆ ಅಗ್ಯವಿರುವ ಸೂರು, ನೀರು, ಶಿಕ್ಷಣ, ಆರೋಗ್ಯ ಮೊದಲಾದ ಸೌಲಭ್ಯಗಳನ್ನು ಉಚಿತವಾಗಿ ನೀಡುವವರಿಗೆ ಮತ ನೀಡಬೇಕು ಎಂದು ಆಶಿಸಿದರು.
    ವಕೀಲ ಅನೀಸ್ ಪಾಷಾ ಮಾತನಾಡಿ ಭ್ರಷ್ಟಾಚಾರ ಹಗರಣಗಳ ವಿಚಾರಗಳಲ್ಲಿ ಸರ್ಕಾರ ಹಾಗೂ ವಿಪಕ್ಷಗಳು ನಾಟಕ ಮಾಡುತ್ತಿವೆ. ಭ್ರಷ್ಟಾಚಾರ ವಿಚಾರಗಳನ್ನು ಹೊರಗೆಳೆಯದೆ ಪರಸ್ಪರ ಹೊಂದಾಣಿಕೆ ರಾಜಕೀಯ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
    ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ್ ಮಾತನಾಡಿ ಜನಾಂದೋಲನಗಳ ಮಹಾಮೈತ್ರಿ ಅನೇಕ ಹೋರಾಟಗಳನ್ನು ನಿರಂತರವಾಗಿ ಮಾಡುತ್ತ ಬಂದಿವೆ. ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ್ದರಿಂದ ಕೆಲವರಿಗೆ ಜೈಲು ಶಿಕ್ಷೆಯಾಯಿತು. ಇದೀಗ ಮೂರು ಕರಾಳ ಕಾಯ್ದೆಗಳನ್ನು ಹಿಂಪಡೆಯುವಂತೆ ನಿರ್ಣಾಯಕ ಹೋರಾಟಕ್ಕೆ ಇಳಿದಿದೆ. ಜ.11ರಂದು ಬೆಂಗಳೂರಲ್ಲಿ ವಿವಿಧ ಜಾಥಾಗಳ ಸಮಾಗಮವಾಗಿ ಸಮಾರೋಪ ನಡೆಸಲಾಗುವುದು ಎಂದರು.
    ಸಭೆಯಲ್ಲಿ ನುಲೆನೂರು ಶಂಕರಪ್ಪ, ಸಿದ್ದಣ್ಣ,ಶಿವನಕೆರೆ ಬಸವಲಿಂಗಪ್ಪ, ಬಲ್ಲೂರು ರವಿಕುಮಾರ್, ಇ.ಶ್ರೀನಿವಾಸ್, ನರೇಗಾ ರಂಗನಾಥ್, ಮಲ್ಲೇಶ್, ಬುಳ್ಳಾಪುರ ಹನುಮಂತಪ್ಪ, ಸುಧಾ ಇತರರಿದ್ದರು. ಐರಣಿ ಚಂದ್ರು ಜಾಗೃತಿ ಗೀತೆಗಳನ್ನು ಹಾಡಿದರು. ಸಭೆಗೂ ಮುನ್ನ ಅಂಬೇಡ್ಕರ್ ವೃತ್ತದಿಂದ ಜಯದೇವ ವೃತ್ತದವರೆಗೆ ಸಾಂಕೇತಿಕ ಜಾಥಾ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts