More

    ಚುನಾವಣೆ ಖರ್ಚಿಗೆ ಮಿತಿ ಹೇರಿ

    ಕಲಬುರಗಿ: ದೇಶದಲ್ಲಿ ಚುನಾವಣೆ ಖರ್ಚು ದಿನೇ ದಿನೇ ಹೆಚ್ಚಾಗುತ್ತಿದೆ. ರಾಜಕೀಯಕ್ಕೆ ಜನಸಾಮಾನ್ಯರು, ಜನಸೇವಕರು, ಜನರ ಮಧ್ಯೆ ಇರುವವರ ಪ್ರವೇಶವೇ ಸಾಧ್ಯವಾಗದ ಮಟ್ಟಿಗೆ ರಾಜಕೀಯ ವ್ಯವಸ್ಥೆ ಹದಗೆಟ್ಟಿದೆ. ಆದ್ದರಿಂದ ಚುನಾವಣೆ ಖರ್ಚಗೆ ಸಂಪೂರ್ಣ ಮಿತಿ ಹೇರಬೇಕು ಎಂದು ಫ್ಯಾಕ್ಟರ್ ಸಂಸ್ಥೆ ಸಂಚಾಲಕ ಅರುಣಕುಮಾರ ಶ್ರೀವಾಸ್ತವ ಮನವಿ ಮಾಡಿದರು.
    ಭಾರತೀಯ ಜನತಾ ಪಕ್ಷ ೨೦೧೪ರಲ್ಲಿ ೩೦ ಸಾವಿರ ಕೋಟಿ, ೨೦೧೯ರಲ್ಲಿ ೫೦ ಸಾವಿರ ಕೋಟಿ ರೂ. ಪ್ರಸ್ತುತ ಒಂದು ಲಕ್ಷ ಕೋಟಿ ರೂ. ಖರ್ಚು ಮಾಡುವ ಅನುಮಾನಗಳಿವೆ. ಇದು ಪ್ರಜಾಪ್ರಭುತ್ವ ಆತಂಕದತ್ತ ಸಾಗುತ್ತಿರುವ ಲಕ್ಷಣ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
    ಜಾತಿ, ಧರ್ಮಕ್ಕಿಂತ ಹಣ ಬಲದಿಂದ ಚುನಾವಣೆ ಎದುರಿಸುವುದು ಅಪಾಯಕಾರಿ ಬೆಳವಣಿಗೆ. ಆದ್ದರಿಂದ ಏಕಕಾಲಕ್ಕೆ ಲೋಕಸಭೆ, ವಿಧಾನಸಭೆ, ಜಿಲ್ಲಾ, ಗ್ರಾಪಂ ಚುನಾವಣೆಗಳು ನಡೆಯಲಿ. ಇದರಿಂದ ಸರ್ಕಾರಗಳು ಮತ್ತು ಪಕ್ಷಗಳ ಪ್ರಚಾರದ ಹಣವೂ ಉಳಿತಾಯವಾಗುತ್ತದೆ ಎಂದರು.
    ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಮರೆಯಾಗಿದೆ. ಪಕ್ಷಗಳಲ್ಲಿ ಪ್ರಜಾಪ್ರಭುತ್ವ ಇದ್ದಾಗ ಮಾತ್ರ ಸಾಮಾನ್ಯ ಜನರು ರಾಜಕೀಯದಲ್ಲಿ ಸೇವೆ ಮಾಡಲು ಬರಲು ಸಾಧ್ಯವಿದೆ. ಪಕ್ಷಗಳು ಒಂದು ಸಂವಿಧಾನ ರೂಪಿಸಿಕೊಂಡು ಅದರ ಆಧಾರದಲ್ಲಿಯೇ ನಡೆಯಬೇಕು. ಆದರೆ ವ್ಯವಸ್ಥೆಯೇ ಬೇರೆ ಆಗುತ್ತಿದೆ ಎಂದರು.
    ತಮಿಳುನಾಡು, ಆಂದ್ರಪ್ರದೇಶ, ಕರ್ನಾಟಕದಲ್ಲಿ ಓರ್ವ ಸಂಸದ ೨೦೦ ಕೋಟಿ ರೂ. ಖರ್ಚು ಮಾಡುವ ಸ್ಥಿತಿ ಬಂದಿದೆ. ಚುನಾವಣೆ ಆಯೋಗ ಇದೆಲ್ಲವನ್ನು ತಡೆಯುವಲ್ಲಿ ವಿಫಲವಾಗಿದೆ. ಪ್ರಚಾರಕ್ಕೆ ಒಬ್ಬ ಅಭ್ಯರ್ಥಿಗೆ ಒಂದು ನಾಲ್ಕು ಚಕ್ರದ ವಾಹನ, ಐದು ಜನರಿಗೆ ಮಾತ್ರ ಅವಕಾಶ ನೀಡಬೇಕು. ಕಲಬುರಗಿಯಲ್ಲಿ ರಮೇಶ ದುತ್ತರ್ಗಿ ಅವರು ಚುನಾವಣೆ ಸುಧಾರಣೆಗಳನ್ನು ಮಾಡಲು ಆಗ್ರಹಿಸಿ, ಎಂಟು ತಿಂಗಳಿAದ ಧರಣಿ ನಡೆಸುತ್ತಿದ್ದಾರೆ. ಅವರನ್ನು ಭೇಟಿ ಮಾಡಿ, ಬೆಂಬಲಕ್ಕೆ ನಿಂತ್ತಿz್ದೆÃನೆ. ಅವರ ಬೇಡಿಕೆಗಳು, ನಮ್ಮ ವಿಚಾರಗಳು ಒಂದೇ ಇವೆ ಎಂದರು.
    ಮುಖ್ಯಮAತ್ರಿ ಸಲಹೆಗಾರ ಬಿ.ಆರ್.ಪಾಟೀಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts