More

    ಚುನಾವಣೆಯಲ್ಲಿ ಅರ್ಹರನ್ನು ಆರಿಸಿ

    ನಂಜನಗೂಡು: ಸಂವಿಧಾನ ನೀಡಿರುವ ಓಟಿನ ಹಕ್ಕನ್ನು ಪ್ರತಿಯೊಬ್ಬರು ಚಲಾಯಿಸುವ ಮೂಲಕ ಅರ್ಹ ವ್ಯಕ್ತಿಯನ್ನು ಆರಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಅನುಪಮಾ ಲಕ್ಷ್ಮೀ ಹೇಳಿದರು.
    ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    1950ರ ಜನವರಿ 25ರಂದು ದೇಶದಲ್ಲಿ ಚುನಾವಣಾ ಆಯೋಗ ಸ್ಥಾಪನೆಯಾದ ದಿನವನ್ನು ಮತದಾರರ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ರಕ್ತದಾನ ಮಾದರಿಯಲ್ಲೇ ಮತದಾನವೂ ಶ್ರೇಷ್ಠವಾದುದು. ನಿಮ್ಮ ಒಂದು ಓಟು ಚಲಾಯಿಸದಿದ್ದರೆ ನಿಮಗೆ ಇಷ್ಟವಿಲ್ಲದ ವ್ಯಕ್ತಿ ಚುನಾಯಿತರಾಗಿ ಆರಿಸಿಬರಬಹುದು. ಮತದಾನದ ದಿನ ರಜೆ ಸಿಗುತ್ತದೆ ಎಂಬ ಕಾರಣಕ್ಕಾಗಿ ಪ್ರವಾಸಕ್ಕೆ ತೆರಳುವವರೂ ಇದ್ದಾರೆ. ಸಂವಿಧಾನಿಕ ಹಕ್ಕಾಗಿರುವ ಮತದಾನವನ್ನು ಪ್ರತಿಯೊಬ್ಬರೂ ಚಲಾಯಿಸುವ ಮೂಲಕ ತಮ್ಮ ಜವಾಬ್ದಾರಿ ತೋರಬೇಕು ಎಂದು ತಿಳಿಸಿದರು.

    ಒಂದನೇ ಅಪರ ಸಿವಿಲ್ ನ್ಯಾಯಧೀಶ ಕಿಶೋರ್‌ಕುಮಾರ್ ಮಾತನಾಡಿ, ಪ್ರಜಾಸತ್ತಾತ್ಮಕ ಗಣರಾಜ್ಯ ಉಳಿಯಬೇಕಾದರೆ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯಬೇಕು. ಯಾವ ದೇಶದಲ್ಲಿ ನ್ಯಾಯಸಮ್ಮತ ಚುನಾವಣೆಯ ನಡೆಯದಿಲ್ಲವೋ, ಅಲ್ಲಿ ಪ್ರಜಾಸತ್ತಾತ್ಮಕ ಗಣರಾಜ್ಯ ಸ್ಥಾಪನೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ನನ್ನ ಮತದಾನ ನನ್ನ ಹಕ್ಕು ಎಂಬ ಅರಿವು ಪ್ರತಿಯೊಬ್ಬರಿಗೂ ಇರಬೇಕು. 18 ವರ್ಷ ವಯಸ್ಸಿನ ಯುವಕರಿಗೆ ಪ್ರಾಪಂಚಿಕ ಜ್ಞಾನವಿರುತ್ತದೆ ಎಂಬ ಕಾರಣಕ್ಕೆ 1989ರಲ್ಲಿ ಮತದಾನಕ್ಕೆ ನಿಗದಿಯಾಗಿದ್ದ 21 ವಯಸ್ಸನ್ನು 18ಕ್ಕೆ ಇಳಿಕೆ ಮಾಡಲಾಯಿತು ಎಂದರು.

    ಕಾರ್ಯಕ್ರಮದಲ್ಲಿ ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಪ್ರಧಾನ ಸಿವಿಲ್ ನ್ಯಾಯಾಧೀಶ ರಘುರಾಮ, ಎರಡನೇ ಅಪರ ನ್ಯಾಯಧೀಶೆ ಶಶಿಕಲಾ, ತಹಸೀಲ್ದಾರ್ ಎಂ.ಶಿವಮೂರ್ತಿ, ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಎಂ.ರಾಮೇಗೌಡ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಸುರೇಶ್, ಸರ್ಕಾರಿ ಅಭಿಯೋಜಕ ಪುರುಷೋತ್ತಮ್, ಕಂದಾಯ ಅಧಿಕಾರಿ ಪ್ರಕಾಶ್ ಗೌಡ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts