More

    ಚುನಾವಣಾ ಸಾಕ್ಷರತೆಗಾಗಿ ಶಾಲಾ ಸಂಸತ್ತಿಗೆ ಮತದಾನ

    ಚಿತ್ರದುರ್ಗ: ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ಸಂಸತ್‌ಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ವಿದ್ಯಾರ್ಥಿ ನಿಯರು ಅತ್ಯುತ್ಸಾಹದಿಂದ ಭಾಗವಹಿಸಿದ್ದರು.

    ಚುನಾವಣೆ-ಮತದಾನದ ಮಹತ್ವದೆಡೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸಲು ವಾಗಿ ಆಯೋಜಿಸಿದ್ದ ಕಲ್ಪಿತ ಸಂಸತ್ ಚುನಾವಣೆಗೆ ಶಿಕ್ಷಕರ ಮಾರ್ಗದರ್ಶನದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

    ಶಾಲೆಯ 8,9,10 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಆಧಾರ್‌ಕಾರ್ಡ್‌ನೊಂದಿಗೆ ಸರತಿಯಲ್ಲಿ ಮತ ಚಲಾಯಿಸಿದರು. ಮೂರು ತರಗತಿಗಳಿಂದ 18 ತರಗತಿ ಪ್ರತಿನಿಧಿಗಳ ಸ್ಥಾನಕ್ಕೆ 45 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

    ಎಚ್.ಟಿ.ಅನಿತಾ, ಜಿ.ಎಲ್.ಮುಕ್ತಾಯಿ,ಶ್ವೇತಾ ಆರ್‌ಭಟ್,ಫಹಿಮುನ್ನೀಸಾ,ಆರ್.ಎಂ.ಮಹಮೂದ್ ಖಾನ್,ಗಂಗೂಭಾರತಿ,ಆರ್.ದೀಪಾ,ಮೆಹತಾಬ್ ಬೇಗಂ,ಕೆ.ಎಸ್.ಯಶೋಧಮ್ಮ,ಸಿ.ಲೋಕೇಶ್,ಎಂ.ಸಿ ವೀಣಾ,ಎಂ.ಚಂದ್ರಪ್ಪ,ಸುವರ್ಣಮ್ಮ,ಫರ್ಕೂಂದಾ ಬತೂಲ್ ಹಾಗೂ ಎಚ್.ಕೆ. ವಿಜಯಕುಮಾರ್ ಶಿಕ್ಷಕ-ಶಿಕ್ಷಕಿಯರು ಚುನಾವಣೆ ಕರ್ತವ್ಯ ನಿರ್ವಹಿಸಿದರು. ಉಪ ಪ್ರಾಂಶುಪಾಲ ಎಂ. ಕರಿಯಪ್ಪ,ಶಿಕ್ಷಕ ಎನ್.ಕೃಷ್ಣಮೂರ್ತಿ ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts