More

    ಚುನಾವಣಾ ನೀತಿ ಸಂಹಿತಿ ಹಿನ್ನೆಲೆ / ಜಿಲ್ಲೆಯಾದ್ಯಂತ ಬಿಗಿಗೊಂಡಿರುವ ಚೆಕ್‌ಪೋಸ್ಟ್ಗಳು / ಮುಖ್ಯಮಂತ್ರಿಗಳ ಕಾರನ್ನು ತಪಾಸಣೆಗೆ ಒಳಪಡಿಸಿದ ಎಂ.ಸಿ.ಸಿ. ಮತ್ತು ಎಸ್.ಎಸ್.ಟಿ. ತಂಡ

    ವಿಜಯವಾಣಿ ಸುದ್ದಿಜಾಲ ಕೋಲಾರ
    ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಿಲ್ಲಾ ಎಂ.ಸಿ.ಸಿ. ಮತ್ತು ಎಸ್.ಎಸ್.ಟಿ. ತಂಡ ಹದ್ದಿನ ಕಣ್ಣಿಟ್ಟಿದ್ದು, ಗಡಿಯಿಂದ ಜಿಲ್ಲೆಗೆ ಬರುವ ಎಲ್ಲಾ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಬಂಗಾರಪೇಟೆಯ ಚುನಾವಣಾ ಪ್ರಚಾರಕ್ಕೆಂದು ಭಾನುವಾರ ಆಗಮಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಹಾಗೂ ಅವರ ಮಂತ್ರಿ ಮಂಡಲದ ಕೆಲವು ಸಚಿವರ ಕಾರುಗಳನ್ನು ಬೆಂಗಳೂರು ಚನೈ ರಸ್ತೆಯ ಕೋಲಾರ ತಾಲ್ಲೂಕಿನ ರಾಮಸಂದ್ರ ಚೆಕ್‌ಪೋಸ್ಟ್ ಬಳಿ ತಪಾಸಣೆ ನಡೆಸಲಾಯಿತು.

    ಮುಖ್ಯಮಂತ್ರಿಗಳು ಕಾರನ್ನು ತಪಾಸಣೆ ಮಾಡಲು ಎಂ.ಸಿ.ಸಿ. ಮತ್ತು ಎಸ್.ಎಸ್.ಟಿ. ತಂಕ್ಕೆ ಅಧಿಕಾರಿಗಳಿಗೆ ಸಹಕರಿಸಿದರು. ಅವರ ಜೊತೆಯಲ್ಲಿ ಬಂದ ಹತ್ತಾರು ಕಾರುಗಳನ್ನು ಸಹ ತಪಾಸಣೆಯನ್ನು ನಡೆಸಲಾಯಿತು. ಕೋಲಾರ ಜಿಲ್ಲೆಗೆ ಚುನಾವಣಾ ಪ್ರಚಾರಕ್ಕಾಗಿ ಇತ್ತೀಚೆಗೆ ರಾಷ್ಟç ಮತ್ತು ರಾಜ್ಯ ನಾಯಕರು ಎಲಿಫ್ಯಾಡ್ ಮತ್ತು ಕಾರುಗಳಲ್ಲಿ ಬರುತ್ತಿದ್ದಾರೆ. ಜಿಲ್ಲಾ ಎಂ.ಸಿ.ಸಿ. ಮತ್ತು ಎಸ್.ಎಸ್.ಟಿ. ತಂಡ ಎಲ್ಲವನ್ನೂ ತಪಾಸಣೆಗೆ ಒಳಪಡಿಸುತ್ತಿದ್ದಾರೆ.

    ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೊದಲ ಬಾರಿಗೆ ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದಲ್ಲಿ ಪ್ರಚಾರ ನಡೆಸಲು ಎಲಿಫ್ಯಾಡ್ ಮೂಲಕ ಕೋಲಾರದ ಜಾಲಪ್ಪ ಆಸ್ಪತ್ರೆ ಆವರಣಕ್ಕೆ ಆಗಮಿಸಿದ್ದಾಗ ಮುಖ್ಯಮಂತ್ರಿಗಳು ಬಂದ ಎಲಿಫ್ಯಾಡ್‌ನ್ನು ಎಂ.ಸಿ.ಸಿ. ಮತ್ತು ಎಸ್.ಎಸ್.ಟಿ. ತಂಡದ ಅಧಿಕಾರಿಗಳು ಪರಿಶೀಲನೆ ನಡೆಸಿದರು.

    ಜಿಲ್ಲಾ ಎಂ.ಸಿ.ಸಿ. ಮತ್ತು ಎಸ್.ಎಸ್.ಟಿ. ತಂಡದ ಜೊತೆಗೆ ಎಫ್.ಎಸ್.ಟಿ. ವಿ.ಎಸ್.ಟಿ. ವಿ.ವಿ.ಟಿ ಈ ತಂಡಗಳು ಜಿಲ್ಲೆಯಾದ್ಯಂತ ಎಲ್ಲಾ ಚೆಕ್‌ಪೋಸ್ಟ್ಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಚೆಕ್‌ಪೋಸ್ಟ್ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳ ಚಲನ ವಲನಗಳ ಮೇಲೆ ನಿಗಾ ವಹಿಸುತ್ತಿದ್ದಾರೆ.

    ಎಲ್ಲಾ ಚೆಕ್ ಪೋಸ್ಟ್ಗಳನ್ನು ವೆಬ್ ಕ್ಯಾಸ್ಟಿಂಗ್‌ಗೆ ಅಳವಡಿಸಲಾಗಿದ್ದು, ಜಿಲ್ಲಾಧಿಕಾರಿಗಳ ಕಛೇರಿಯಲ್ಲಿರುವ ಎಂ.ಸಿ.ಸಿ. ತಂಡ ಪರಿಶೀಲನೆ ನಡೆಸುತ್ತಿರುತ್ತದೆ. ಜಿಲ್ಲಾಧಿಕಾರಿಗಳು ಕಛೇರಿಯಲ್ಲಿಯೇ ಕುಳಿತು ಚೆಕ್‌ಪೋಸ್ಟ್ಗಳ ಕಾರ್ಯವೈಖರಿಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.

    ಜಿಲ್ಲೆಯಾದ್ಯಂತ ಚೆಕ್‌ಪೋಸ್ಟ್ಗಳನ್ನು ಬಿಗಿಗೊಳಿಸಿರುವುದರಿಂದ ಹೊರ ರಾಜ್ಯಗಳಿಂದ ಹಾಗೂ ಹೊರ ಗಡಿಗಳಿಂದ ಜಿಲ್ಲೆಗೆ ಬರುವ ಅಕ್ರಮಗಳಿಗೆ ಬ್ರೇಕ್ ಬಿದ್ದಂತೆ ಆಗಿದೆ.

    ಕಳೆದ ವಿಧಾನಸಭಾ ಚುನಾವಣೆಯಷ್ಟು ಪ್ರಚಾರದ ಕಾವು ಹಾಗೂ ಜಿದ್ದಿನ ರಾಜಕಾರಣಿ ಲೋಕಸಭಾ ಚುನಾವಣೆಯಲ್ಲಿ ಅಷ್ಟೇನು ಕಂಡು ಬರದೇ ಇರುವುದರಿಂದ ಮಧ್ಯ ಸೇರಿದಂತೆ ಚುನಾವಣೆಗೆ ಬಳಸುವ ಅಕ್ರಮ ಚಟುವಟಿಕೆಗಳನ್ನು ಸದ್ಯಕ್ಕೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಂಡುಬರುತ್ತಿಲ್ಲ.

    ಶಾಂತಿಯುತವಾಗಿ ಚುನಾವಣೆ ನಡೆಯುವಂತೆ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಜಿಲ್ಲಾಧಿಕಾರಿ ಅಕ್ರಂಪಾಷ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಚುನಾವಣೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಿಬ್ಬಂದಿಗೂ ಸಹ ಸಲಹೆ ಸೂಚನೆಗಳನ್ನು ನೀಡುತ್ತಿರುವ ಚುನಾವಣಾ ಅಧಿಕಾರಿಯಾಗಿಕರುವ ಅಕ್ರಂಪಾಷ ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಂತಿಯುತ ಚುನಾವಣೆಯನ್ನು ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆಗಳನ್ನು ನೀಡುತ್ತಲೇ ಇದೆ.

    ಚುನಾವಣಾ ದಿನಾಂಕ ಘೋಷಣೆಯಾದ ಪ್ರಾರಂಭದಲ್ಲಿ ನಿರ್ಮಿಸಲಾಗಿದ್ದ ಚೆಕ್‌ಪೋಸ್ಟ್ಗಳಲ್ಲಿ ನಗದು ಹಣ, ಮದ್ಯ ಸೇರಿದಂತೆ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಎಂ.ಸಿ.ಸಿ. ಮತ್ತು ಎಸ್.ಎಸ್.ಟಿ. ತಂಡ ಬಿಗಿಯಾಗುತ್ತಿದ್ದಂತೆ ಚೆಕ್‌ಪೋಸ್ಟ್ಗಳಿಂದ ನುಸುಳಿ ಬರುತ್ತಿದ್ದ ಅಕ್ರಮಗಳಿಗೆ ಕಡಿವಾಣ ಬಿದ್ದಂತಾಗಿದೆ.

    ಚಿತ್ರ ೨೧ ಕೆ.ಎಲ್.ಆರ್. ೦೨ : ಬೆಂಗಳೂರು ಚೆನೈ ರಸ್ತೆಯ ಕೋಲಾರ ಗಡಿಯ ರಾಮಸಂದ್ರ ಚೆಕ್‌ಪೋಸ್ಟ್ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಕಾರನ್ನು ತಪಾಸಣೆಗೆ ಒಳಪಡಿಸಿದ ಎಂ.ಸಿ.ಸಿ. ಮತ್ತು ಎಸ್.ಎಸ್.ಟಿ. ತಂಡ.

    ಚುನಾವಣಾ ನೀತಿ ಸಂಹಿತಿ ಹಿನ್ನೆಲೆ / ಜಿಲ್ಲೆಯಾದ್ಯಂತ ಬಿಗಿಗೊಂಡಿರುವ ಚೆಕ್‌ಪೋಸ್ಟ್ಗಳು / ಮುಖ್ಯಮಂತ್ರಿಗಳ ಕಾರನ್ನು ತಪಾಸಣೆಗೆ ಒಳಪಡಿಸಿದ ಎಂ.ಸಿ.ಸಿ. ಮತ್ತು ಎಸ್.ಎಸ್.ಟಿ. ತಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts