More

    ಚೀಯಕ ಪೂವಂಡ, ಮಣವಟ್ಟಿರ, ಕೊಟ್ಟಂಗಡ, ಬಲ್ಲಚಂಡ ತಂಡ ಮುನ್ನಡೆ

    ನಾಪೋಕ್ಲು: ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ. ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಳೆಯಡ ಕಪ್ ಕ್ರಿಕೆಟ್ ನಮ್ಮೆ ಯ ಸೋಮವಾರದ ಪಂದ್ಯಗಳಲ್ಲಿ ಚೀಯಕ ಪೂವಂಡ, ಮಣವಟ್ಟಿರ, ಕೊಟ್ಟಂಗಡ, ಬಲ್ಲಚಂಡ ಸೇರಿದಂತೆ ಹಲವು ತಂಡಗಳು ಮುನ್ನಡೆ ಸಾಧಿಸಿದವು.


    ಮೊದಲ ಪಂದ್ಯದಲ್ಲಿ ಚೀಯಕಪೂವಂಡ ವಿರುದ್ಧ ಚೇರಂಡ ತಂಡ 6 ವಿಕೆಟ್ ನಷ್ಟಕ್ಕೆ 23 ರನ್ ಗಳಿಸಿತು. ರನ್ ಬೆನ್ನತ್ತಿದ ಚೀಯಕಪೂವಂಡ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 24 ರನ್ ಗಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ಮಣವಟ್ಟಿರ ತಂಡದ ವಿರುದ್ಧ ಮಾಳೆಯಂಡ ಸ್ಪರ್ಧಿಸಿತು. ಮಾಳೆಯಂಡ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 23 ರನ್ ಗಳಿಸಿದರೆ ಮಣವಟ್ಟಿರ ತಂಡ ಒಂದು ವಿಕೆಟ್ ನಷ್ಟಕ್ಕೆ 27 ರನ್ ಗಳಿಸಿ 9 ರನ್‌ಗಳ ಜಯ ಸಾಧಿಸಿತು. ಚೋನಿರ ವಿರುದ್ಧ ಕೊಟ್ಟಂಗಡ ಐದು ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿತು. ಚೋನಿರ ಮೂರು ವಿಕೆಟ್ ನಷ್ಟಕ್ಕೆ 46 ರನ್ ಗಳಿಸಿ ಸೋಲು ಅನುಭವಿಸಿತು. ಮುಂದಿನ ಪಂದ್ಯದಲ್ಲಿ ಚೀಯಕಪೂವಂಡ ತಂಡ ಮೂರು ವಿಕೆಟ್ ನಷ್ಟಕ್ಕೆ 48 ರನ್ ಗಳಿಸಿತು.


    ಅಟ್ರಂಗಡ ನಾಲ್ಕು ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿ ವಿಜಯ ಸಾಧಿಸಿತು. ಬಲ್ಲಚಂಡ ವಿರುದ್ಧ ಮಲ್ಲಜಿರ ತಂಡ ಸ್ಪರ್ಧಿಸಿತು. ಮಲ್ಲಜಿರ ಐದು ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿದರೆ ಬಲ್ಲಚಂಡ ಐದು ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ಮುಕ್ಕಾಟಿರ ( ಬೇತ್ರಿ) ತಂಡ ಪಾಸುರ ವಿರುದ್ಧ ಒಂದು ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿತು. ಉತ್ತರವಾಗಿ ಆಡಿದ ಪಾಸುರ ತಂಡ ಮೂರು ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿ ಸೋಲನ್ನು ಕಂಡಿತು. ಮುಕ್ಕಾಟಿರ (ಬೇತ್ರಿ) ತಂಡಕ್ಕೆ 24 ರನ್ ಗಳ ಜಯ ಲಭಿಸಿತು. ಮುಂದಿನ ಪಂದ್ಯದಲ್ಲಿ ಕಲ್ಕಂಡ ವಿರುದ್ಧ ಪಾರುವಂಡ ಮೂರು ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿದರೆ ಕಲ್ಲಂಡ ತಂಡ 56 ರನ್ ಗಳಿಸಿ ಜಯಸಾಧಿಸಿತು. ಮುಂದಿನ ಪಂದ್ಯದಲ್ಲಿ ಅಚ್ಚಪಂಡ ಎರಡು ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿತು. ಉತ್ತರವಾಗಿ ಆಡಿದ ಕುಂಜಿರ ತಂಡ 4 ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿ ಅಚ್ಚಪಂಡ ವಿರುದ್ಧ ಸೋಲನ್ನು ಅನುಭವಿಸಿತು.


    ಕುಟ್ಟಂಡ ತಂಡ 3 ವಿಕೆಟ್ ನಷ್ಟಕ್ಕೆ 20 ರನ್ ಗಳಿಸಿದರೆ ಉತ್ತರವಾಗಿ ಆಡಿದ ಬೊಜ್ಜಂಗಡ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 24 ರನ್ ಗಳಿಸಿ ಗೆಲುವು ಸಾಧಿಸಿತು ಮುಂದಿನ ಪಂದ್ಯದಲ್ಲಿ ಅನ್ನಳಮಾಡ ಎಂಟು ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿತು.ಉತ್ತರವಾಗಿ ಆಡಿದ ಕುಲ್ಲೇಟಿರ ತಂಡ ಎರಡು ವಿಕೆಟ್ ನಷ್ಟಕ್ಕೆ 32 ರನ್ ಗಳಿಸಿ ಗೆಲುವು ಸಾಧಿಸಿತು. ಅಮ್ಮಟಂಡ ತಂಡ ವಿರುದ್ಧ ಅಲ್ಲಂಗಡ ಎಂಟು ವಿಕೆಟ್ ಗಳ ಜಯ ಸಾಧಿಸಿತು. ಅರಮನೆ ಮಾಡ ತಂಡದ ವಿರುದ್ಧ ಕುಂಡ್ಯೋಳಂಡ ಗೆಲುವು ಸಾಧಿಸಿತು.ಚೊಟ್ಟೆಯಂಡಮಾಡ ತಂಡದ ವಿರುದ್ಧ ಮಾಲೇಟಿರ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts