More

    ಚಿರತೆ ದಾಳಿಯಿಂದ ಕರು ಸಾವು


    ಹಾಸನ : ಆಲೂರು ತಾಲೂಕಿನ ಕುಂದೂರು ಹೋಬಳಿ ಕಣಿವೆ ಬಸವನಹಳ್ಳಿ ಗ್ರಾಮದಲ್ಲಿ ಗುರುವಾರ ಸಂಜೆ ಚಿರತೆ ದಾಳಿ ಮಾಡಿ ಕರುವನ್ನು ಕೊಂದುಹಾಕಿದೆ.


    ಕಣಿವೆ ಬಸವನಹಳ್ಳಿ ಗ್ರಾಮದ ಬಿ.ಆರ್.ಶಿವಪ್ಪ ಬಿನ್ ರಾಜಪ್ಪ ಎಂಬುವರು ಗುರುವಾರ ದನಕರುಗಳನ್ನು ಮಾದಿಹಳ್ಳಿ, ರಂಗನಾಥಸ್ವಾಮಿ ಬೆಟ್ಟದ ಕಡೆ ಮೇವಿಗಾಗಿ ಕರೆದುಕೊಂಡು ಹೋಗಿದ್ದಾರೆ. ಸಂಜೆ ವಾಪಸ್ ಮನೆಗೆ ಹಿಂದಿರುಗಿದ್ದಾರೆ. 3 ವರ್ಷದ ಕರು ಕಾಣದೇ ಇದ್ದಾಗ, ಶುಕ್ರವಾರ ಬೆಳಗ್ಗೆ ದನ ಮೇಯಿಸಲು ಹೋಗಿದ್ದ ಸ್ಥಳಗಳಲ್ಲಿ ಹುಡುಕಾಡಿದಾಗ ಯಾವುದೋ ಪ್ರಾಣಿ ದಾಳಿ ಮಾಡಿ ಅರ್ಧ ತಿಂದು ಬಿಟ್ಟಿರುವುದನ್ನು ಕಂಡು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು.


    ವಿಷಯ ತಿಳಿದ ವಲಯ ಅರಣ್ಯ ಅಧಿಕಾರಿ ಎಚ್.ಕೆ.ಮರಿಸ್ವಾಮಿ, ಸಿಬ್ಬಂದಿ ಪ್ರದೀಪ್‌ಕುಮಾರ್ ಹಾಗೂ ಜಯಪಾಲ್ ಅವರೊಂದಿಗೆ ಸ್ಥಳ ಪರಿಶೀಲನೆ ನಡೆಸಿದಾಗ ಕರುವಿನ ಕುತ್ತಿಗೆಯ ಭಾಗದಲ್ಲಿ ಚಿರತೆ ಹಲ್ಲುಗಳು ಹಾಗೂ ಕಾಲಿನ ಉಗುರಿನಿಂದ ಪರಚಿರುವುದು ಕಂಡು ಬಂದಿದೆ.


    ನಂತರ ರಾಯರಕೊಪ್ಪಲಿನ ಪಶು ವೈದ್ಯಾಧಿಕಾರಿಗಳಾದ ಡಾ.ಅನಿಲ್ ಅವರಿಗೆ ಮಾಹಿತಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮಾದಿಹಳ್ಳಿ ಭಾಗದಲ್ಲಿ ಬೋನನ್ನು ಇಡಲಾಗಿದೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಜಮೀನು ಮತ್ತು ಮನೆಯ ಹೊರ ಭಾಗಗಳಲ್ಲಿ ಕೆಲಸಗಳನ್ನು ಮಾಡಿಕೊಳ್ಳಲು ಪ್ರಚಾರ ಮಾಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
    ಕಳೆದ 3-4 ತಿಂಗಳ ಹಿಂದೆಯೂ ಕೂಡ ಇದೇ ರೀತಿ 1 ವರ್ಷದ ಕರುವೊಂದನ್ನು ಚಿರತೆ ದಾಳಿ ಮಾಡಿ ಕೊಂದಿರುವ ಘಟನೆ ನಡೆದಿರುತ್ತದೆ. ಈ ವಿಚಾರವಾಗಿ ವಲಯ ಅರಣ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಸೂಕ್ತ ಕ್ರಮ ವಹಿಸಬೇಕಾಗಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts