More

    ಚಿರತೆ ಕಳ್ಳಾಟ, ಮಕ್ಕಳ ಶಿಕ್ಷಣಕ್ಕೆ ಚೆಲ್ಲಾಟ

    ಮೂಡಲಗಿ: ತಾಲೂಕಿನ ಧರ್ಮಟ್ಟಿ ಗ್ರಾಮದ ಮಂದ್ರೋಳಿಯವರ ತೋಟದಲ್ಲಿ ಆ.10 ರಂದು ಕಾಣಿಸಿಕೊಂಡ ಚಿರತೆ, ಇಲ್ಲಿಯವರೆಗೆ ಅರಣ್ಯ ಸಿಬ್ಬಂದಿ ಕಣ್ಣಿಗೆ ಕಾಣಿಸಿಕೊಂಡಿಲ್ಲ.

    ಮಂದ್ರೋಳಿಯವರೆ ತೋಟದ ಮನೆ ಮುಂದೆ ಕಟ್ಟಿದ ದನದ ಕರುವನ್ನು ಚಿರತೆ ಹೊತ್ತೊಯ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಸಿಕ್ಕ ಮೇಲೆ ಸಾರ್ವಜನಿರಲ್ಲಿ ಭಯ ಮೂಡಿತ್ತು. ಅಲ್ಲಿಂದ ಚಿರತೆ ಹಿಡಿಯುವ ಕಾರ್ಯ ಕೈಗೊಂಡ ಅರಣ್ಯ ಇಲಾಖೆಗೆ 17 ದಿನ ಕಳೆದರೂ ಚಿರತೆಯ ಸುಳಿವು ಸಿಕ್ಕಿಲ್ಲ.

    ತೋಟಪಟ್ಟಿಯ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿದ್ದರಿಂದ ಸುತ್ತಲಿನ ಜನರು ಮನೆ ಬಿಟ್ಟು ಹೊರ ಬರದ ಸ್ಥಿತಿ ನಿರ್ಮಾಣವಾಗಿದೆ. ಚಿರತೆ ಸಿಗುವವರೆಗೆ ಪಟ್ಟಣದ ಶಾಲೆಗಳಿಗೆ ರಜೆ ೋಷಿಸಿದ್ದರಿಂದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಚಿಂತೆ ಕಾಡತೊಡಗಿದೆ.

    ಕಳೆದ ಎರಡ್ಮೂರು ವರ್ಷಗಳಿಂದ ಅತಿವೃಷ್ಟಿ ಹಾಗೂ ಕರೊನಾದಿಂದ ಸಾರ್ವಜನಿಕರ ಬದುಕು ದುಸ್ತರವಾಗಿತ್ತು. ಅದರ ಜತೆಗೆ ಶಾಲಾ-ಕಾಲೇಜುಗಳು ಸರಿಯಾಗಿ ನಡೆಯದೆ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಚಿಂತೆ ಕಾಡ ತೊಡಗಿತ್ತು. ಕಲಿಕಾ ಚೇತರಿಕೆ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ತೋಟಪಟ್ಟಿಯಲ್ಲಿ ಚಿರತೆ ಲಗ್ಗೆ ಇಟ್ಟ ಪರಿಣಾಮ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಸಾರ್ವಜನಿಕರ ದೈನಂದಿನ ಕಾರ್ಯಗಳಿಗೆ ಅಡ್ಡಿಯನ್ನುಂಟು ಮಾಡಿವೆ.
    ಚಿರತೆ ಕಾಣಿಸಿಕೊಂಡ ಭಾಗದಲ್ಲಿ ಸರ್ಕಾರಿ ಶಾಲೆಗಳಾದ ಉಪವೀರ ತೋಟ, ಬೋಳಿ ತೋಟ, ವಿಠ್ಠಪ್ಪನಕೋಡಿ ಹಾಗೂ ಬಡ್ಡಿ ಖಾಸಗಿ ಶಾಲೆಗಳು ಮಕ್ಕಳ ಹಿತದೃಷ್ಟಿಯಿಂದ ಶೈಕ್ಷಣಿಕ ಕಾರ್ಯ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಕಲಿಕೆಗೆ ಸಹಾಯವಾಗುವ ನಿಟ್ಟಿನಲ್ಲಿ ಆನ್‌ಲೈನ್ ತರಗತಿಗಳನ್ನು ನಡೆಸಲು ತೋಟಪಟ್ಟಿಯ ವಿದ್ಯಾರ್ಥಿಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿರುವುದು ವಿದ್ಯಾರ್ಥಿಗಳು ಚಿಂತೆಯಲ್ಲಿದ್ದಾರೆ.

    ಸದ್ಯ ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಧರ್ಮಟ್ಟಿ ಗ್ರಾಮದ ತೋಟದ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಐದು ಶಾಲೆಗಳಲ್ಲಿ ಕಲಿಕೆ ಸ್ಥಗಿತಗೊಳಿಸಲಾಗಿದೆ. ಈ ಕಲಿಕಾ ಕೊರತೆಯನ್ನು ಮುಂಬರುವ ರಜಾ ದಿನಗಳಲ್ಲಿ ಹಾಗೂ ದಸರಾ ರಜೆಯ ದಿನಗಳನ್ನು ಬಳಸಿಕೊಂಡು ಕಲಿಕಾ ಕೊರತೆ ಸರಿಪಡಿಸಿ, ಕಲಿಕಾ ನಷ್ಟವನ್ನು ಸರಿದೂಗಿಸುತ್ತೇವೆ.
    | ಅಜಿತ ಮನ್ನಿಕೇರಿ, ಬಿಇಒ ಮೂಡಲಗಿ

    ಸಾರ್ವಜನಿಕರಿಗೆ ತೊಂದರೆಯಾಗದ ನಿಟ್ಟಿನಲ್ಲಿ ಅಗತ್ಯ ಮುಂಜಾಗೃತ ಕ್ರಮಗಳನ್ನು ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಕೈಗೊಳ್ಳಲಾಗಿದೆ. ಸಾರ್ವಜನಿಕರು ಭಯ ಹಾಗೂ ಸುಳ್ಳು ವದಂತಿಗಳಿಗೆ ಕಿವಿಗೊಡದೆ ಇಲಾಖೆಗೆ ಸಹಕಾರ ನೀಡುವ ಮೂಲಕ ಮುನ್ನೆಚ್ಚರಿಕೆ ಕ್ರಮ ಅನುಸರಿಸಿ.
    | ಸಂಜೀವ ಸವಸುದ್ದಿ, ವಲಯ ಅರಣ್ಯಾಧಿಕಾರಿ ಗೋಕಾಕ

    | ಮಲ್ಲು ಬೋಳನವರ ಮೂಡಲಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts