More

    ಚಿನ್ನದ ಒಡವೆ ಕಳ್ಳರು ಅಂದರ್

    ಹುಬ್ಬಳ್ಳಿ: ಗ್ರಾಹಕರ ಸೋಗಿನಲ್ಲಿ ಹುಬ್ಬಳ್ಳಿ, ಬೆಳಗಾವಿ ಮತ್ತು ದಾವಣ ಗೆರೆಯ ಕಲ್ಯಾಣ ಜುವೆಲರಿ ಯಲ್ಲಿ ಲಕ್ಷಾಂತರ ರೂ. ಮೌಲ್ಯದ ಒಡವೆಗಳನ್ನು ಕದ್ದು ಪರಾರಿ ಯಾಗಿದ್ದ ಇಬ್ಬರು ಕಳ್ಳರನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅವರಿಂದ 8,27,367 ರೂ. ಮೌಲ್ಯದ 130.681 ಗ್ರಾಂ ಚಿನ್ನಾಭರಣ ವಶಪಡಿಸಿ ಕೊಂಡಿದ್ದಾರೆ.
    ವಿಜಯನಗರ ಗಣಪತಿ ಗುಡಿ ಬಳಿ ನಿವಾಸಿ ವಿರಕ್ತಾನಂದ ಅಲಿಯಾಸ್ ಸಂತೋಷ ಮಹದೇವಪ್ಪ ಕಟಗಿ ಹಾಗೂ ಗದಗ ಹಳೇ ಬಸ್ ನಿಲ್ದಾಣ ಬಳಿಯ ನಿವಾಸಿ ಶರತ್ ಶ್ರೀಕಾಂತ ಕಾರಂತ ಬಂಧಿತರು. ಇಲ್ಲಿನ ಸ್ಟೇಶನ್ ರೋಡ್ ಜುವೆಲರಿಗೆ ಆ.1ರಂದು ಗ್ರಾಹಕರಂತೆ ಚಿನ್ನಾಭರಣ ಖರೀದಿಗೆ ಬಂದು ಸಿಬ್ಬಂದಿಗೆ ಗೊತ್ತಾಗದಂತೆ 3,98,905 ರೂ. ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಆ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮತ್ತೋರ್ವ ಪ್ರಮುಖ ಆರೋಪಿ ಮಹೇಶ ಬಾಣದ ತಲೆಮರೆಸಿಕೊಂಡಿದ್ದಾನೆ.
    ಸಿಸಿಟಿವಿ ಕ್ಯಾಮರಾ ಸುಳಿವು: ಶಹರ ಠಾಣೆ ಇನ್ಸ್​ಪೆಕ್ಟರ್ ಎಂ.ಎಸ್. ಪಾಟೀಲ ನೇತೃತ್ವದ ತಂಡ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯದ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
    ವಂಚನೆ ಹೇಗೆ?: ಮಹೇಶ ಮತ್ತು ವಿರಕ್ತಾನಂದ ಚಿನ್ನದ ಮಳಿಗೆಗಳಲ್ಲಿ ಕಳ್ಳತನ ಮಾಡ ಲೆಂದು ಶರತ್ ಕಾರಂತನನ್ನು ಬಳಸಿಕೊಂಡಿದ್ದರು. ಆತನಿಗೆ ಶ್ರೀಮಂತನಂತೆ ವೇಷ ಹಾಕಿಸಿ ಶ್ರೀಮಂತ ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ತೆರಳುತ್ತಿದ್ದರು.
    ಕದ್ದ ಚಿನ್ನ ಕ್ಯಾಸಿನೊ ಪಾಲು!: ಮಹೇಶ ಬಾಣದ ಹಾಗೂ ವಿರಕ್ತಾನಂದ ಇಬ್ಬರೂ ಒಟ್ಟಾಗಿ ಕಳ್ಳತನ ಮಾಡಿ, ಅದರಲ್ಲಿ ಬಂದ ಹಣ ತೆಗೆದುಕೊಂಡು ಗೋವಾದ ಕ್ಯಾಸಿನೋಕ್ಕೆ ತೆರಳುತ್ತಿದ್ದರು ಹಣ ಖಾಲಿಯಾದ ಕೂಡಲೆ ಕಳ್ಳತನಕ್ಕೆ ಮುಂದಾಗುತ್ತಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts