More

    ಚಿಟಗಯ್ಯನಕೊಪ್ಪಲಿನಲ್ಲಿ ಶ್ರೀ ಶನೈಶ್ಚರಸ್ವಾಮಿ ಜಾತ್ರೆ

    ತಿ.ನರಸೀಪುರ: ತಾಲೂಕಿನ ಚಿಟಗಯ್ಯನಕೊಪ್ಪಲು ಗ್ರಾಮದಲ್ಲಿ 15ನೇ ವರ್ಷದ ಶ್ರೀ ಶನೈಶ್ಚರಸ್ವಾಮಿ ಜಾತ್ರಾ ಮಹೋತ್ಸವ ವೈಭವದಿಂದ ಜರುಗಿತು.


    ಶ್ರೀ ಶನೈಶ್ಚರಸ್ವಾಮಿ ದೇವಸ್ಥಾನದಲ್ಲಿ ಪುಣ್ಯಾಹ, ಗಣಪತಿ ಪೂಜೆ, ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಪವಮಾನ ಹೋಮ, ಪೂರ್ಣಾಹುತಿ ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು. ಶನಿವಾರ ಶ್ರೀ ಶನೈಶ್ಚರಸ್ವಾಮಿಗೆ ರುದ್ರಾಭಿಷೇಕ, ಸಹಸ್ರತುಳಸಿ ಅರ್ದನೆ, ರಾಜೋಪಚಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.


    ಬಾಲಕಿಯರಿಂದ ಹಾಲರವಿ ಉತ್ಸವ ಜರುಗಿತು. ಶ್ರೀ ಶನೈಶ್ಚರಸ್ವಾಮಿಗೆ ಬೆಣ್ಣೆ ಅಲಂಕಾರದೊಂದಿಗೆ ಬೆಳ್ಳಿ ಕಿರೀಟ ಧಾರಣೆ ಮಾಡಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಮಲಿಯೂರು ಬೀರೇಶ್ವರಸ್ವಾಮಿ, ಬಳ್ಳೆಕೆರೆ ಬೀರೇಶ್ವರ, ದೊಡ್ಡಮುಲಗೂಡು ಬೀರೇಶ್ವರಸ್ವಾಮಿ, ಗಾಮನಹಳ್ಳಿ ಬೀರೇಶ್ವರಸ್ವಾಮಿ, ಹೆಮ್ಮರಗಾಲ ಬೀರೇಶ್ವರಸ್ವಾಮಿ, ಹೊನಗನಹಳ್ಳಿ ಬೀರೇಶ್ವರಸ್ವಾಮಿ, ಚಿದರವಳ್ಳಿ ಬೀರೇಶ್ವರಸ್ವಾಮಿ, ಬೆನಕನಹಳ್ಳಿ ಹೊನ್ನುಹುಣಸೇ ಬೀರೇಶ್ವರಸ್ವಾಮಿ, ನಂಜಾಪುರದ ಊರದಮ್ಮ ಮತ್ತು ಬಸವಗಳ ಉತ್ಸವ ನಡೆಸಲಾಯಿತು. ಸ್ವಾಮಿಗೆ ಹೂವಿನ ಅಲಂಕಾರ ಗಮನ ಸೆಳೆಯಿತು.


    ಶ್ರೀ ಶನೈಶ್ಚರಸ್ವಾಮಿ ಚಿತ್ರಪಟದೊಂದಿಗೆ ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ, ದೇವರ ಕೂಟಗಳು ಗ್ರಾಮದಲ್ಲಿ ಮೆರವಣಿಗೆ ನಡೆಯಿತು. ದೇವಸ್ಥಾನ ಆವರಣದಲ್ಲಿ ಬದನವಾಳು ಶಿವಕುಮಾರ ಶಾಸ್ತ್ರಿ ಹಾಗೂ ತಂಡದ ಸದಸ್ಯರಿಂದ ಭಕ್ತಿಗೀತೆಗಳ ಕಾರ್ಯಕ್ರಮ, ರಾತ್ರಿ ಶ್ರೀ ಬೀರೇಶ್ವರ ಕಲಾ ಬಳಗ, ಚಿಟಿಗಯ್ಯನಜಕೊಪ್ಪಲು ಗ್ರಾಮಸ್ಥರಿಂದ ದಕ್ಷಯಜ್ಞ ಅಥವಾ ಬೃಗುಮುನಿಯ ಗರ್ವಭಂಗ ಪೌರಾಣಿಕ ನಾಟಕ ಪ್ರದರ್ಶಿಸಲಾಯಿತು. ಸಾವಿರಾರು ಭಕ್ತರಿಗೆ ಅನ್ನದಾಸೋಹ ಮಾಡಲಾಯಿತು.
    ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಭಕ್ತಿಗೀತೆಗಳ ಕಾರ್ಯಕ್ರಮದಲ್ಲಿ ವಾಟಾಳು ಸೂರ್ಯಸಿಂಹಾಸನ ಮಠಾಧೀಶ ಶ್ರೀ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಗುಡ್ಡಪ್ಪ ಚಿಟಗಯ್ಯನಕೊಪ್ಪಲು ಬಸವರಾಜು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts