More

    ಚಿಕ್ಕೋಡಿ ನೂತನ ಜಿಲ್ಲೆಯಾಗಿ ಆದೇಶಿಸಲಿ

    ಚಿಕ್ಕೋಡಿ: ಪ್ರತ್ಯೇಕ ಜಿಲ್ಲೆಗಾಗಿ ಆಗ್ರಹಿಸಿ ಮಿನಿವಿಧಾನ ಸೌಧದ ಎದುರು ಜಿಲ್ಲಾ ಹೋರಾಟ ಸಮಿತಿ ಸದಸ್ಯರು ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಪದವಿ ಕಾಲೇಜಿನ ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರು ಬುಧವಾರ ಬೆಂಬಲ ಸೂಚಿಸಿದರು.

    ಅತಿಥಿ ಉಪನ್ಯಾಸಕ ಅಜಿತ ಕೋಳಿ ಮಾತನಾಡಿ, ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ 2 ದಶಕಗಳಿಂದ ಹೋರಾಟ ಮಾಡಲಾಗುತ್ತಿದೆ. ಆದ್ರೆ ಇಲ್ಲಿಯವರೆಗೆ ಸರ್ಕಾರಗಳು ಬೇಡಿಕೆ ಈಡೇರಿಸುತ್ತಿಲ್ಲ. ಶೀಘ್ರ ಚಿಕ್ಕೋಡಿ ಜಿಲ್ಲೆಆದೇಶಿಸಬೇಕು ಎಂದು ಆಗ್ರಹಿಸಿದರು.

    ಚಿಕ್ಕೋಡಿ ಸಂಪಾದನಾ ಮಠದ ಸಂಪಾದನಾ ಸ್ವಾಮೀಜಿ ಮಾತನಾಡಿ, ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಯಾಗಬೇಕು. ಚಿಕ್ಕೋಡಿ ಜಿಲ್ಲೆಯಾಗುವ ಕುರಿತು ನಿರ್ಣಯ ಕೈಗೊಳ್ಳಬೇಕು. ಅಲ್ಲದೆ ಉತ್ತರ ಕರ್ನಾಟಕದಲ್ಲಿ ನೀರಾವರಿ, ಶಿಕ್ಷಣ ಸೇರಿ ಹತ್ತು ಹಲವಾರು ಸಮಸ್ಯೆಗಳಿವೆ. ಇಲ್ಲಿನ ಶಾಸಕರು, ವಿಧಾನಪರಿಷತ್ ಸದಸ್ಯರು ಗಟ್ಟಿಯಾಗಿ ಧ್ವನಿ ಎತ್ತಿದರೆ ಮಾತ್ರ ಅಭಿವದ್ಧಿ ಸಾಧ್ಯ ಎಂದರು.

    ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಸಂಜು ಬಡಿಗೇರ, ಉಪಾಧ್ಯಕ್ಷ ಶ್ರೀಕಾಂತ ಅಸೋದೆ, ಕಾರ್ಯದರ್ಶಿ ಚಂದ್ರಕಾಂತ ಹುಕ್ಕೇರಿ, ಪುನೀತ ರಾಜಕುಮಾರ ಅಭಿಮಾನಿಗಳ ಸಂಘದ ಮುಖಂಡ ಅಮೂಲ ನಾವಿ, ಹೋರಾಟಗಾರರಾದ ರಾಜೇಂದ್ರ ಪಾಟೀಲ, ಶ್ರೀಕಾಂತ ಚೌಗಲಾ, ಬಾಳು ಕೋರೆ, ಖಾನಪ್ಪ ಬಾಡಕರ, ಸಾಗರ ಭೋಸಲೆ, ಯಲ್ಲಪ್ಪ ಖೋತ, ಶೇಖರ್ ಪ್ರಭಾತ, ಅಶೋಕ ಭಂಡಾರಕರ, ನಾಗವ್ವ ಕುರಣಿ, ಮಹಾದೇವ ಪೂಜಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts