More

    ಚಿಕ್ಕತಿರುಪತಿಯಲ್ಲಿ ಹುಂಡಿ ಎಣಿಕೆ ಕಾರ್ಯ

    ಲಕ್ಕೂರು: ಪ್ರಸಿದ್ಧ ಯಾತ್ರಾ ಸ್ಥಳವಾದ ಚಿಕ್ಕತಿರುಪತಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ ಹುಂಡಿ ಹಣವನ್ನು ಗುರುವಾರ ಎಣಿಕೆ ಮಾಡಿದ್ದು, 26.45 ಲಕ್ಷ ರೂ. ನಗದು ಹಾಗೂ ಆಭರಣ ಸಂದಾಯವಾಗಿದೆ.

    ಡಿ.29ರಿಂದ ಮಾ.2ರವರೆಗೂ ಭಕ್ತರು ದೇಗುಲಕ್ಕೆ ಅರ್ಪಿಸಿರುವ ನಗದು, ಚಿನ್ನ, ಬೆಳ್ಳಿ, ನೋಟುಗಳ ಎಣಿಕೆ ಕಾರ್ಯ ನಡೆಯಿತು. ಹುಂಡಿಯಲ್ಲಿ 59 ಗ್ರಾಂ ಚಿನ್ನ, 129 ಗ್ರಾಂ ಬೆಳ್ಳಿ ಹಾಗೂ ನಗದು 26,45,442 ರೂ. ಸಂಗ್ರಹವಾಗಿತ್ತು. ಹಣ ಎಣಿಕೆ ಬಳಿಕ ಇಂಡಿಯನ್​ ಓವರ್​ಸೀಸ್​ ಬ್ಯಾಂಕ್​ ಖಾತೆಗೆ ಜಮಾ ಮಾಡಲಾಯಿತು.

    ಹುಂಡಿಗಳನ್ನು ಜಿಲ್ಲಾ ಮುಜರಾಯಿ ತಹಸೀಲ್ದಾರ್​ ನಾಗವೇಣಿ ಹಾಗೂ ದೇವಾಲಯ ಕಾರ್ಯನಿರ್ವಹಣಾಧಿಕಾರಿ ಹಾಗೂ ತಹಸೀಲ್ದಾರ್​ ಕೆ.ರಮೇಶ್​ ಸಮ್ಮುಖದಲ್ಲಿ ತೆರೆದು ಎಣಿಕೆ ಮಾಡಲಾಯಿತು. ಎಣಿಕೆ ಕಾರ್ಯದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ, ದೇವಾಲಯ ಸಿಬ್ಬಂದಿ ಹಾಗೂ ಬ್ಯಾಂಕ್​ ಸಿಬ್ಬಂದಿ ಭಾಗವಹಿಸಿದ್ದರು.

    ಜಿಲ್ಲಾ ಮುಜರಾಯಿ ಇಲಾಖೆಯ ಸೂಪರ್​ಡೆಂಟೆಂಡ್​ ನವೀನ್​, ಗುಟ್ಟಹಳ್ಳಿ ದೇವಾಲಯ ಕಾರ್ಯನಿರ್ವಹಣಾಧಿಕಾರಿ ಎಂ.ಸುಬ್ರಮಣಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಟಿ.ಆರ್​.ವೆಂಕಟೇಶ್​ಗೌಡ, ನಂದನ್​ಗೌಡ, ಮಾಜಿ ಸದಸ್ಯ ಆಲಂಬಾಡಿ ಸುರೇಶ್​ಬಾಬು, ಪೇದೆ ವೆಂಕೋಬರಾವ್​ ಹಾಗೂ ಧಾರ್ಮಿಕ ಪರಿಷತ್​ ಸದಸ್ಯರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts