More

    ಚಾಮುಂಡೇಶ್ವರಿ, ರಕ್ತೇಶ್ವರಿ ಜಾತ್ರೆ ಸಂಪನ್ನ

    ಸುಂಟಿಕೊಪ್ಪ : ಕೊಡಗರಹಳ್ಳಿಯ ಕುಂದೂರುಮೊಟ್ಟೆ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಮೂರು ದಿನಗಳ ಶ್ರೀ ಮಹಾವಿಷ್ಣು, ಶ್ರೀ ಚಾಮುಂಡೇಶ್ವರಿ, ರಕ್ತೇಶ್ವರಿ ಪರಿವಾರ ದೇವರುಗಳ 45ನೇ ವಾರ್ಷಿಕ ಮಹೋತ್ಸವದ ಪೂಜಾ ಕಾರ್ಯ ಬುಧವಾರ ಸಂಪನ್ನಗೊಂಡಿತು.
    ಏ.17ರಂದು ಆರಂಭವಾಗಿದ್ದ ಪೂಜಾ ಕಾರ್ಯ ಮೂರು ದಿನಗಳ ಕಾಲ ಅರ್ಥಪೂರ್ಣವಾಗಿ ಜರುಗಿತು. ಮೊದಲ ದಿನ ದೀಪಾರಾಧನೆ, ಏಳು ಸುತ್ತಿನ ಪ್ರದಕ್ಷ್ಷಿಣೆ, ಶ್ರೀ ಚಾಮುಂಡಿ ತಂಡದಿಂದ ಚಂಡೆ ಮೇಳ ಜರುಗಿತು. ಎರಡನೇ ದಿನ ಚಾಮುಂಡೇಶ್ವರಿ ದೇವಿಯ ಅಭಿಷೇಕ, ಪೂಜೆ, ಹರಕೆ ತೀರಿಸುವ ಕೈಂಕರ್ಯಗಳು ನೆರವೇರಿದವು. ಕೊನೇ ದಿನ ಅಜ್ಜಪ್ಪ ಕೋಲ ವಿಷ್ಣುಮೂರ್ತಿ ಕೋಲ, ರಕ್ತೇಶ್ವರಿ ಹಾಗೂ ಚಾಮುಂಡೇಶ್ವರಿ ಕೋಲದೊಂದಿಗೆ ನೈವೇದ್ಯದೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts