More

    ಚಾತುರ್ಮಾಸ ವರ್ಷಾಯೋಗ ಮಂಗಲ ಕಳಶ ಸ್ಥಾಪನೆ

    ಹಾಸನ: ಚನ್ನರಾಯಪಟ್ಟಣ ಸಮೀಪದ ಶ್ರವಣಬೆಳಗೊಳ ಜೈನ ಮಠದ ಚಾವುಂಡರಾಯ ಸಭಾಮಂಟಪದಲ್ಲಿ ಭಾನುವಾರ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಶ್ರೀ 1008 ಸಿದ್ಧಚಕ್ರ ಮಹಾಮಂಡಲ ಆರಾಧನಾ ಮಹೋತ್ಸವದ ಈ ಸಾಲಿನ ಚಾತುರ್ಮಾಸ ವರ್ಷಾಯೋಗ ಮಂಗಲ ಕಳಶ ಸ್ಥಾಪನೆಯನ್ನು ಸಚಿವ ಡಿ.ಸುಧಾಕರ್ ನೆರವೇರಿಸಿದರು.

    ಮುನಿಶ್ರೀ ಪಾವನಕೀರ್ತಿ ಮಹಾರಾಜರು, ಮುನಿಶ್ರೀ ಅಮೋಘಕೀರ್ತಿ ಮಹಾರಾಜರು, ಮುನಿಶ್ರೀ ಅಮರಕೀರ್ತಿ ಮಹಾರಾಜರು, ಮುನಿಶ್ರೀ ಆದಿಸಾಗರ ಮಹಾರಾಜರು, ಮುನಿಶ್ರೀ ನಿರ್ದೋಷಸಾಗರ ಮಹಾರಾಜರು ಹಾಗೂ ಆರ್ಯಿಕ ಮತಾಜಿ ಸಾನ್ನಿಧ್ಯ ವಹಿಸಿದ್ದರು.

    ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್, ಶ್ರವಣಬೆಳಗೊಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುರಾಧಾ ಲೋಹಿತ್, ಸರಿತಾ ಎಂ.ಕೆ. ಜೈನ್, ನವೀನ್ ಕುಮಾರ್ ಜೈನ್ ಮುಂತಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts