More

    ಚವ್ಹಾಣ್ ರಾಜೀನಾಮೆ ಪಡೆಯಲಿ

    ಔರಾದ್: ಆಪ್ತ ಕಾರ್ಯದಶರ್ಿ ಜ್ಞಾನದೇವ ಜಾಧವ್ ವಿರುದ್ಧ ನಕಲಿ ಸಹಿ ಪ್ರಕರಣ ದಾಖಲಾಗಿದ್ದರಿಂದ ಮುಖ್ಯಮಂತ್ರಿಗಳು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರ ರಾಜೀನಾಮೆ ಪಡೆಯಬೇಕು ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದಶರ್ಿ ಮೀನಾಕ್ಷಿ ಸಂಗ್ರಾಮ್ ಒತ್ತಾಯಿಸಿದರು. ಸಕರ್ಾರಿ ಕೆಲಸದಲ್ಲಿದ್ದವರಿಗೆ ಮಾತ್ರ ಆಪ್ತ ಸಹಾಯಕರಾಗಿ ನೇಮಿಸಿಕೊಳ್ಳಬೇಕೆಂಬ ನಿಯಮ ಇದ್ದರೂ ಭ್ರಷ್ಟಾಚಾರ ಮಾಡುವ ಉದ್ದೇಶದಿಂದ ಸಚಿವ ಚವ್ಹಾಣ್ ಖಾಸಗಿ ಶಾಲೆ ಶಿಕ್ಷಕ ಜ್ಞಾನದೇವಗೆ ಆಪ್ತ ಸಹಾಯಕರಾಗಿ ನೇಮಿಸಿಕೊಂಡಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ಜ್ಞಾನದೇವ ಅವರು ಪಶು ಸಂಗೋಪನೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಹೇಳಿ ಸಿ ಮತ್ತು ಡಿ ಗ್ರೂಪ್ನ 93 ಹುದ್ದೆಗಳಲ್ಲಿ 63 ಹುದ್ದೆಗಳಿಗೆ ನೇಮಕ ಮಾಡಿಕೊಂಡಿದ್ದಾರೆ. ಒಂದು ಹುದ್ದೆಗೆ 8-10 ಲಕ್ಷ ರೂ. ಪಡೆದಿದ್ದಾರೆ ಎಂದು ಆರೋಪಿಸಿದರು. ಆಪ್ತ ಕಾರ್ಯದಶರ್ಿ ಸಚಿವರ ಕೆಲಸ ಮಾತ್ರ ಮಾಡಬೇಕು. ಅದರ ಹೊರತು ಇಲಾಖೆ ಕೆಲಸ ಮಾಡಲು ಸಾಧ್ಯವಿಲ್ಲ. ದುಡ್ಡು ಕೊಳ್ಳೆ ಹೊಡೆಯುವ ಕೆಲಸ ಮಾಡಿದ್ದು ಕಂಡುಬಂದಿದೆ. ಇದಕ್ಕೆ ಸಚಿವರೇ ಹೊಣೆ. ಕೂಡಲೇ ಇವರನ್ನು ಸಚಿವ ಸ್ಥಾನದಿಂದ ವಜಾ ಮಾಡಿ, ತನಿಖೆ ನಡೆಸಿ ತಪ್ಪಿತಸ್ಥರನ್ನು ಜೈಲಿಗೆ ಕಳಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರಮುಖರಾದ ಆನಂದ ಚವ್ಹಾಣ್, ಬಂಟಿ ದಬರ್ಾರೆ, ಶಿವರಾಜ ದೇಶಮುಖ,ರಾಮಣ್ಣ ವಡಿಯಾರ,ಸುಧಾಕರ ಕೊಳ್ಳುರ್, ವಿಶ್ವನಾಥ ದೀನೆ, ರಾಜಕುಮಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts