More

    ಚರಂಡಿ ಕಾಮಗಾರಿ ಬೇಗ ಮುಗಿಸುವಂತೆ ಒತ್ತಾಯ

    ಶಿರಸಿ: ಇಲ್ಲಿನ ಬಸವೇಶ್ವರ ನಗರದಲ್ಲಿ ಪುನರಾರಂಭಗೊಂಡ ನಗರೋತ್ಥಾನ ಕಾಮಗಾರಿಯ ಬೃಹತ್ ಚರಂಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎನ್ನುವುದಾಗಿ ಸ್ಥಳೀಯರು ಭಾನುವಾರ ನಗರಾಡಳಿತದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

    ಇಲ್ಲಿನ ಆರ್​ಟಿಒ ಕಚೇರಿ ಬಳಿಯ ಬಸವೇಶ್ವರ 2019ರಲ್ಲಿ ನಗರೋತ್ಥಾನ ಯೋಜನೆಯಡಿ ಬೃಹತ್ ಚರಂಡಿ ಕಾಮಗಾರಿ ಮಂಜೂರಾಗಿ ಕಾಮಗಾರಿ ನಡೆದಿತ್ತು. ಕಳೆದ ಮಳೆಗಾಲದ ವೇಳೆ ಈ ಭಾಗದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಮಳೆಯ ಕಾರಣಕ್ಕೆ ಅರ್ಧಕ್ಕೆ ನಿಂತ ಪರಿಣಾಮ ಸ್ಥಳೀಯರು ತೀರಾ ಸಂಕಷ್ಟ ಅನುಭವಿಸಿದ್ದರು.

    ಈಗ ಪುನಃ ಚರಂಡಿ ಕಾಮಗಾರಿ ಆರಂಭವಾಗಿದ್ದು, ಕಳೆದೆರಡು ದಿನಗಳ ಹಿಂದೆ ಬಿದ್ದ ಮಳೆಗೆ ಚರಂಡಿಯಲ್ಲಿ ಕಸ ಕಟ್ಟಿ ಮನೆಗಳಿಗೆ ತೊಂದರೆಯಾಗಿತ್ತು. ಹೀಗಾಗಿ ಚರಂಡಿ ಅಧ್ವಾನದಿಂದ ಮಳೆಗಾಲದಲ್ಲಿ ತೊಂದರೆ ಆಗದಂತಾಗಲು ತ್ವರಿತವಾಗಿ ಕಾಮಗಾರಿ ಮುಗಿಸಬೇಕು. ಜತೆ, ಪಕ್ಕದ ಕೆಎಚ್​ಬಿ ಕಾಲನಿಯಿಂದ ಬರುವ ನೀರನ್ನು ಈ ಚರಂಡಿಗೆ ಬಿಡಬಾರದು ಎಂದು ನಗರಸಭೆಗೆ ಆಗಮಿಸಿ ಮನವಿ ಮಾಡಿದರು.

    ಈ ಹಿನ್ನೆಲೆಯಲ್ಲಿ ನಗರಸಭೆ ಎಇಇ ಎಸ್. ಉಮೇಶ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸ್ಥಳೀಯರು ಕಾಮಗಾರಿಯಲ್ಲಿನ ದೋಷಗಳ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರು. ಕಾಮಗಾರಿ ತ್ವರಿತವಾಗಿ ಮತ್ತು ಗುಣಮಟ್ಟ ಕಾಪಾಡಿಕೊಂಡು ಸಮರ್ಪಕವಾಗಿ ಮುಗಿಸಬೇಕು ಎಂದು ನಗರೋತ್ಥಾನ ಇಂಜಿನಿಯರ್ ಅವರನ್ನು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts