More

    ಚನ್ನಮ್ಮ ಕಿತ್ತೂರು ಪಪಂಗೆ ನಿವೇಶನ ಮಂಜೂರು

    ಚನ್ನಮ್ಮನ ಕಿತ್ತೂರು: ಪಪಂ ಕಾರ್ಯಾಲಯಕ್ಕಾಗಿ ಮಿನಿವಿಧಾನ ಸೌಧ ಪಕ್ಕದಲ್ಲಿ 1 ಎಕರೆ ಜಮೀನು ಮಂಜೂರಾಗಿದ್ದು ಬಹುದಿನಗಳ ಬೇಡಿಕೆ ಈಡೇರಿದೆ ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು. ಪಪಂ ಸದಸ್ಯರು 5 ವರ್ಷ ಅಧಿಕಾರಾವಧಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪಪಂ ಕಾರ್ಯಾಲಯಕ್ಕೆ ನಿವೇಶನ ದೊರೆತಿದ್ದು, ಕಟ್ಟಡ ನಿರ್ಮಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಪಪಂ ಸದಸ್ಯರು ಚುನಾಯಿತರಾದ ನಂತರ ಹಲವು ತೊಂದರೆ ಎದುರಾದ ಪರಿಣಾಮ ಸುಗಮ ಅಧಿಕಾರ ನಡೆಸಲು ಸಾಧ್ಯವಾಗಲಿಲ್ಲ. ಆದರೂ, ದೊರೆತ ಅಲ್ಪ ಅವಧಿಯಲ್ಲಿ ಎಲ್ಲ ಸದಸ್ಯರು ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ ಎಂದರು.

    ತಹಸೀಲ್ದಾರ್ ಸೋಮಲಿಂಗಪ್ಪ ಹಾಲಗಿ ಮಾತನಾಡಿ, ಪಪಂನ ಎಲ್ಲ ಸದಸ್ಯರು ಸಾರ್ವಜನಿಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಮುಂದಿನ ದಿನಗಳಲ್ಲೂ ಅಭಿವೃದ್ಧಿಗೆ ಎಲ್ಲರ ಸಹಕಾರ ಬೇಕು ಎಂದರು. ಕಿರಣ ವಾಳದ, ಹನೀಫ್, ನಾಮನಿರ್ದೆಶಿತ ಸದಸ್ಯ ಸಂದೀಪ ದೇಶಪಾಂಡೆ, ಪಪಂ ಅಧ್ಯಕ್ಷ ಹನುಮಂತ ಲಂಗೋಟಿ, ಉಪಾಧ್ಯಕ್ಷೆ ಶೋಭಾ ದರ್ಶಿ, ಪಪಂ ಮುಖ್ಯಾಧಿಕಾರಿ ಪಿ.ಬಿ. ಮಠದ, ಆರ್.ಬಿ. ಗಡಾದ, ಸುರೇಶಗೌಡರ, ಎಸ್.ಎಸ್. ಮ್ಯಾಗೇರಿ ಇದ್ದರು.ಪಿ.ಬಿ. ಮಠದ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts