More

    ಚನ್ನಮ್ಮಳ ಶೌರ್ಯ, ಸಾಹಸ ಸ್ಮರಣೆ

    ಚಿಕ್ಕೋಡಿ, ಬೆಳಗಾವಿ: ಚನ್ನಮ್ಮಳ ಶೌರ್ಯ, ಸಾಹಸ ಯುವಪೀಳಿಗೆಗೆ ಆದರ್ಶವಾಗಿದೆ ಎಂದು ಚಿಕ್ಕೋಡಿ ಸದಲಗಾ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಶಕುಂತಲಾ ಡೊನವಾಡೆ ಹೇಳಿದರು.
    ಪಟ್ಟಣದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಭಾನುವಾರ ಕಿತ್ತೂರು ಚನ್ನಮ್ಮ ವಿಜಯೋತ್ಸವ ಅಂಗವಾಗಿ ಚನ್ನಮ್ಮಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಚಿಕ್ಕೋಡಿ ಸದಲಗಾ ಮಂಡಲ ಮಹಿಳಾ ಮೋರ್ಚಾ ಕಾರ್ಯದರ್ಶಿ ಸುವರ್ಣಾ ಹಂಪಣ್ಣವರ ಇದ್ದರು.

    ಐಗಳಿ ವರದಿ: ವೀರವನಿತೆ ಚನ್ನಮ್ಮಳ ಹೋರಾಟ ಸ್ಫೂರ್ತಿದಾಯಕವಾಗಿದೆ ಎಂದು ಗ್ರಾಪಂ ಅಧ್ಯಕ್ಷೆ ರಾಜಶ್ರೀ ಪಾಟೀಲ ಹೇಳಿದರು.
    ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ವೀರರಾಣಿ ಚನ್ನಮ್ಮ ವಿಜಯೋತ್ಸವ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಗ್ರಾಪಂ ಸದಸ್ಯರಾದ ರವಿ ಹಾಲಳ್ಳಿ, ಸುರೇಶ ಬಿಜ್ಜರಗಿ, ಶ್ರೀಶೈಲ ಮಿರ್ಜಿ, ಹಿರಿಯರಾದ ಶಂಕರಗೌಡ ಪಾಟೀಲ, ಶಿವಾನಂದ ಸಿಂಧೂರ, ಎಂ.ಬಿ. ನೇಮಗೌಡ, ಅಪ್ಪಾಸಾಬ ತೆಲಸಂಗ, ಜಗದೀಶ ತೆಲಸಂಗ, ಅಜಿತ ಜತ್ತಿ, ಹೇಮಂತ ಜತ್ತಿ, ಮಲ್ಲಿಕಾರ್ಜುನ ಹಿಪ್ಪರಗಿ, ಶಿವನಿಂಗ ಅರಟಾಳ, ಅಪ್ಪಾಸಾಬ ಮದಬಾವಿ, ಬಸವರಾಜ ಸುರಪಲ್ಲಿ, ಅಪ್ಪು ಅರಟಾಳ, ಚನ್ನಪ್ಪ ಅರಟಾಳ, ಭೀಮು ತೊವಿ, ಚೇತನ ನೇಮಗೌಡ ಇದ್ದರು.

    ಅಥಣಿ ಗ್ರಾಮೀಣ ವರದಿ: ಚನ್ನಮ್ಮ ವಿಜಯೋತ್ಸವ ಕಾರ್ಯಕ್ರಮಕ್ಕೆ ಹಾಜರಾಗದ ಸ್ಥಳೀಯ ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳನ್ನು ಬೇರೆಡೆಗೆ ವರ್ಗಾಯಿಸಬೇಕು ಎಂದು ಗ್ರಾಮದ ಮುಖಂಡ ಮಹಾಂತೇಶ ಅಥಣಿ ಆಗ್ರಹಿಸಿದರು.

    ತಾಲೂಕಿನ ಶಿರಹಟ್ಟಿ ಗ್ರಾಪಂ ಕಾರ್ಯಲಯದಲ್ಲಿ ಭಾನುವಾರ ಕಿತ್ತೂರು ರಾಣಿ ಚನ್ನಮ್ಮ ವಿಜಯೋತ್ಸವ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಇಲ್ಲಿಗೆ ನಿಯೋಜನೆಗೊಂಡು 6 ತಿಂಗಳು ಕಳೆದರೂ ಪಿಡಿಒ ಶಂಕರಾನಂದ ಗುಂಡವಾನ್ ಹಾಗೂ ಕಾರ್ಯದರ್ಶಿ ಅಶಿಕ ಫಲಸಮಠ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಇದರಿಂದ ಅಗತ್ಯ ಕೆಲಸಗಳಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ, ಇಂತಹ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.
    ಗ್ರಾಪಂ ಸದಸ್ಯರಾದ ರಾಮಗೌಡ ಜಿಂಗಿ, ನಿತಿನ ಜಕನೂರ, ಶ್ರೀಶೈಲ ಅಂಬಿ, ಪರಶುರಾಮ ಶಿಂಗೆ, ಜಾಫರ್ ಮುಲ್ಲಾ, ಮಹಾದೇವ ಗಸ್ತಿ, ಬಾಳಾಸಾಬ ನಿಸ್ಪತಿ ಇತರರಿದ್ದರು.
    ಅಥಣಿ ಗ್ರಾಮೀಣ ವರದಿ: ವೀರವನಿತೆ ಕಿತ್ತೂರು ರಾಣಿ ಚನ್ನಮ್ಮಳ ಅವರ ಹೋರಾಟದ ಮನೋಭಾವವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಪಂಚಮಸಾಲಿ ಸಮುದಾಯದ ಮುಖಂಡ ಅರುಣ ಕೋಹಳ್ಳಿ ಹೇಳಿದರು.

    ತಾಲೂಕಿನ ಅಡಹಳ್ಳಿ ಗ್ರಾಮದ ಚನ್ನಮ್ಮ ವೃತ್ತದಲ್ಲಿ ಭಾನುವಾರ ಜರುಗಿದ ಚನ್ನಮ್ಮ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ರಾಣಿ ಚನ್ನಮ್ಮ ಭಾವಚಿತ್ರಕ್ಕೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಈರಗೌಡ ಪಾಟೀಲ, ಸೂರ್ಯಕಾಂತ ಡಂಬಳಕರ, ಸುನಿಲ ಕೆಂಚಣ್ಣವರ ಪೂಜೆ ಸಲ್ಲಿಸಿದರು.
    ರಾಮು ಕೋಳಿ, ಆನಂದ ಧೂಳಶೆಟ್ಟಿ, ಮಹಾದೇವ ಪಾಟೀಲ, ದಾನಪ್ಪ ಪಾಟೀಲ, ಸಿದ್ದಪ್ಪ ಕೆಂಚಣ್ಣವರ, ಸತ್ಯಪ್ಪ ಸನದಿ, ಮೋಹನ ಸೂರ್ಯವಂಶಿ, ಸುರೇಶ ಅಥಣಿ, ಕಲ್ಮೇಶ ಕಲಮಡಿ, ಅಪ್ಪುಗೌಡ ಪಾಟೀಲ, ಈರಪ್ಪ ಪತ್ತಾರ, ಶಿವು ನಾವಿ, ಬಸಗೌಡ ಪಾಟೀಲ ಇದ್ದರು.

    ಕಕಮರಿ ವರದಿ: ಚನ್ನಮ್ಮಳ ಇತಿಹಾಸ ಕನ್ನಡಿಗರಿಗೆ ಸ್ಫೂರ್ತಿಯ ಸೆಲೆಯಾಗಿದೆ ಎಂದು ಶ್ರೀ ಅಮ್ಮಾಜೇಶ್ವರಿ ದೇವಸ್ಥಾನದ ಅಧ್ಯಕ್ಷ ಅಪ್ಪುಗೌಡ ಪಾಟೀಲ ಹೇಳಿದರು.
    ಇಲ್ಲಿನ ಗ್ರಾಮದ ಹೊರವಲಯದ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ಕಿತ್ತೂರು ವಿಜಯೋತ್ಸವ ಆಚರಿಸಲಾಯಿತು. ಭಾವಚಿತ್ರಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತ ಕಾಂಬಳೆ ಪೂಜೆ ನೆರವೇರಿಸಿದರು.

    ಪಿಕೆಪಿಎಸ್ ಅಧ್ಯಕ್ಷ ಸಿದ್ದಾರಾಮ ಬಿಳ್ಳೂರ, ಗ್ರಾಮ ಪಂಚಾಯಿತಿ ಸದಸ್ಯರಾದ ಕಲ್ಲಪ್ಪ ತಂಗಡಿ, ಈರಣ್ಣ ಕನ್ನಾಳ, ಮಲ್ಲಿಕಾರ್ಜುನ ಶೇಡ್ಯಾಳ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಪ್ಪ ಭಜಂತ್ರಿ, ಮಲ್ಲಿಕಾರ್ಜುನ ಜನಗೌಡ, ಗಿರಮಲ್ಲ ಅಡಹಳ್ಳಿ, ಸಂಜೀವ ಬಿಳ್ಳೂರ, ಬಾಳಪ್ಪ ಒಡೆಯರ, ಮಹಾಂತೇಶ ಮಠಪತಿ, ಭೀಮು ಜನಗೌಡ, ಮಲ್ಲಪ್ಪ ತಂಗಡಿ, ಮಹಾಂತೇಶ ಮಠಪತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts