More

    ಚನ್ನಮ್ಮಳ ವೀರಜ್ಯೋತಿಗೆ ಅದ್ದೂರಿ ಸ್ವಾಗತ

    ನಿಪ್ಪಾಣಿ, ಬೆಳಗಾವಿ: ಚನ್ನಮ್ಮನ ಕಿತ್ತೂರಿನಲ್ಲಿ ಅ.23ರಿಂದ ನಡೆಯಲಿರುವ ಕಿತ್ತೂರು ಉತ್ಸವದ ಹಿನ್ನೆಲೆಯಲ್ಲಿ ಸಂಚರಿಸುತ್ತಿರುವ ವೀರಜ್ಯೋತಿಯನ್ನು ಪಟ್ಟಣದಲ್ಲಿ ಸೋಮವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು.

    ಇಲ್ಲಿನ ಪಿ.ಬಿ. ರಸ್ತೆ ಮೂಲಕ ಆಗಮಿಸಿದ ವೀರಜ್ಯೋತಿಯನ್ನು ಮುನಿಸಿಪಲ್ ಪ್ರೌಢಶಾಲೆ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಮಠದ ಹಾಗೂ ಮಹಿಳೆಯರು ಆರತಿ ಬೆಳಗಿ ಸ್ವಾಗತ ಕೋರಿದರು.

    ನಂತರ ಬೆಳಗಾವಿ ನಾಕಾ, ನಗರಸಭೆ ಮಾರ್ಗದ ಮೂಲಕ ಇಲ್ಲಿನ ಅಶೋಕ ನಗರ ಕಿತ್ತೂರು ರಾಣಿ ಚನ್ನಮ್ಮ ವೃತ್ತದವರೆಗೆ ವೀರಜ್ಯೋತಿಯನ್ನು ಮೆರವಣಿಗೆ ಮೂಲಕ ಕರೆ ತರಲಾಯಿತು. ಮೆರವಣಿಗೆಯುದ್ದಕ್ಕೂ ವಿಎಸ್‌ಎಂ ಶಾಲಾ ವಿದ್ಯಾರ್ಥಿಗಳು ವಾದ್ಯ ನುಡಿಸಿದರು.

    ತಹಸೀಲ್ದಾರ್ ಪ್ರವೀಣ ಕಾರಂಡೆ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಸ್ಥಾಯಿ ಸಮಿತಿ ಚೇರ್ಮನ್ ರಾಜೇಂದ್ರ ಗುಂಡೇಶಾ ಅವರು ರಾಣಿ ಚನ್ನಮ್ಮನ ಪ್ರತಿಮೆಗೆ ಪುಷ್ಪಹಾರ ಹಾಕಿ ಗೌರವ ಸಲ್ಲಿಸಿದರು. ವೀರಜ್ಯೋತಿ ಮಂಗಳವಾರ ಚಿಕ್ಕೋಡಿಗೆ ತೆರಳಲಿದೆ.

    ಉಪತಹಸೀಲ್ದಾರ್ ಅಭಿಷೇಕ ಬೊಂಗಾಳೆ, ನಗರಸಭೆ ಪೌರಾಯುಕ್ತ ಜಗದೀಶ ಹುಲಿಗೆಜ್ಜೆ, ನಾಗೇಂದ್ರ ಬಹಾದ್ದೂರಿ, ಸದಸ್ಯ ದೀಪಕ ಪಾಟೀಲ, ದೈಹಿಕ ಶಿಕ್ಷಣ ಪರಿವೀಕ್ಷಕ ಶಾಂತಾರಾಮ ಜೋಗಳೆ, ಸಿಪಿಐ ಸಂಗಮೇಶ ಶಿವಯೋಗಿ, ಪಿಎಸ್‌ಐ ಕೃಷ್ಣವೇಣಿ ಗುರ್ಲಹೊಸೂರ, ಕನ್ನಡ ಹೋರಾಟಗಾರ ಅನಿಲ ನೇಷ್ಠಿ, ವಿದ್ಯಾವತಿ ಜನವಾಡೆ, ಈರಣ್ಣ ಶಿರಗಾವಿ, ಜ್ಯೋತಿ ಖಾನಾಪುರೆ, ವೀರಣ್ಣ ಗಿರಿಮಲ್ಲನ್ನವರ, ಗೀತಾ ಮುರ್ತಲೆ, ಶಿವಾನಂದ ಪುರಾಣಿಕಮಠ, ಶಾಂತಾ ತೇರಣೆ, ಮಾರುತಿ ಕೊಣ್ಣೂರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts