More

    ಚಟುವಟಿಕೆಯುಕ್ತ ಬೋಧನೆ ಅನುಸರಿಸಿ

    ಬೆಳಗಾವಿ: ಕಲಿಕಾ ಚೇತರಿಕೆ ಕಾರ್ಯಕ್ರಮದಡಿ ಕಲಿಕಾ ಲಗಳನ್ನು ಸಾಸುವುದಕ್ಕಾಗಿ ಕಡ್ಡಾಯವಾಗಿ ಚಟುವಟಿಕೆಯುಕ್ತ ಬೋಧನಾ ವಿಧಾನ ಅನುಸರಿಸಬೇಕು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಭಾರಿ ಪ್ರಾಚಾರ್ಯ ರುದ್ರಗೌಡ ಜುಟ್ಟನ್ನವರ ಹೇಳಿದರು.

    ತಾಲೂಕಿನ ಮಣ್ಣೂರಿನಲ್ಲಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಜಿಲ್ಲೆಯ ಶೈಕ್ಷಣಿಕ ಜಿಲ್ಲೆಯ ಡಿಇಎಲ್ಇಡಿ ಕಾಲೇಜಿನ ಪ್ರಾಚಾರ್ಯರಿಗೆ ಕಲಿಕಾ ಚೇತರಿಕೆ ಕುರಿತು ಸೋಮವಾರ ಆಯೋಜಿಸಿದ್ದ ವಿಶೇಷ ಕಾರ್ಯಗಾರದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿನ ಕಲಿಕಾ ಕೊರತೆ ಸರಿದೂಗಿಸುವುದಕ್ಕಾಗಿ ಈ ವರ್ಷ ಕಲಿಕಾ ಚೇತರಿಕೆ ಉಪಕ್ರಮ ವರ್ಷವೆಂದು ಸರ್ಕಾರ ಘೋಷಿಸಿರುವುದರಿಂದ ಪ್ರಶಿಕ್ಷಣಾರ್ಥಿಗಳಿಗೆ ಚಟುವಟಿಕೆಯಾಧಾರಿತ ಬೋಧನೆ ಮಾಡುವಂತೆ ಸೂಚಿಸಿದರು.

    ಕಲಿಕಾ ಚೇತರಿಕೆಯ ಜಿಲ್ಲಾ ನೋಡಲ್ ಅಕಾರಿ ಪ್ರಕಾಶ ಪಾಟೀಲ ಮಾತನಾಡಿದರು. ಹಿರಿಯ ಉಪನ್ಯಾಸಕರಾದ ಎನ್.ಆರ್.ಪಾಟೀಲ, ಎಸ್.ಪಿ.ಪಿ ದಾಸಪ್ಪನವರ, ಉದಯ ಹುಣಕುಪ್ಪಿ, ಬಿ.ಬಿ.ದಾಸೋಗ, ರಾಜು ಭಂಡಾರಿ, ಎಂ.ಎ್.ಪಾಟೀಲ, ದಿಲೀಪ್ ಕಾಳೆ, ಜ್ಯೋತಿ ತಬಜಿ, ಪ್ರಕಾಶ ಪಾಟೀಲ, ಮಂಗಲ ಕೊರಬು ಸೇರಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts