More

    ಚಂಡಕಾಪುರದಲ್ಲೊಂದು ಮಾದರಿ ಗ್ರಾಮ ಸೌಧ

    ಮಾರ್ಥಂಡ ಜೋಶಿ ಬಸವಕಲ್ಯಾಣ
    ಆಕರ್ಷಕ ಕಟ್ಟಡ, ಅಚ್ಚುಕಟ್ಟಾದ ಕೋಣೆಗಳು, ಸಭಾಂಗಣ, ಸಿಸಿ ಕ್ಯಾಮರಾ ಮತ್ತು ಸೋಲಾರ್ ಅಳವಡಿಕೆ ಜತೆಗೆ ಹಚ್ಚ ಹರಿಸಿನಿಂದ ಕೂಡಿದ ಮನಸಿಗೆ ಮುದ ನೀಡುವಂಥ ಪರಿಸರ. ಇದು ಮಂಗಳವಾರ ಲೋಕಾರ್ಪಣೆಗೆ ಸಿದ್ಧಗೊಂಡಿರುವ ಚಂಡಕಾಪುರದ ಗ್ರಾಮ ಸೌಧ (ಗ್ರಾಮ ಪಂಚಾಯಿತಿ ಕಚೇರಿ) ಕಟ್ಟಡದ ಚಿತ್ರಣ.

    ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 24 ಲಕ್ಷ ಮತ್ತು 15ನೇ ಹಣಕಾಸು ಯೋಜನೆಯಡಿ 10 ಲಕ್ಷ ಸೇರಿ 34 ಲಕ್ಷ ರೂ. ವೆಚ್ಚದಲ್ಲಿ ಸಕಲ ಸೌಲಭ್ಯಗಳನ್ನು ಒಳಗೊಂಡಿರುವ ಸುಸಜ್ಜಿತ ಕಟ್ಟಡ ಇದಾಗಿದೆ. ಗ್ರಾಪಂ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿಧಿಗಳ ಕಾಳಜಿ ಮತ್ತು ಆಸಕ್ತಿಗೆ ಸಾಕ್ಷಿಯಾಗಿದೆ.

    ಅರ್ಧ ಎಕರೆ ಜಮೀನಿನಲ್ಲಿ ತಲೆ ಎತ್ತಿರುವ ಈ ಸೌಧದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಕೋಣೆ, ಪಿಡಿಒ ಮತ್ತು ಸಿಬ್ಬಂದಿಗೆ ಪ್ರತ್ಯೇಕ ಕೋಣೆ, ಸಭೆ ನಡೆಸಲು ಕಟ್ಟಡದ ಮೇಲ್ಭಾಗದಲ್ಲಿ ಸುಸಜ್ಜಿತ ಸಭಾಂಗಣ ನಿಮರ್ಿಸಲಾಗಿದೆ. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಹೈಟೆಕ್ ಶೌಚಗೃಹಗಳಿವೆ. ಕಟ್ಟಡದ ಮುಂಭಾಗದಲ್ಲಿ ಆಕರ್ಷಕ ಉದ್ಯಾನ, ಫುಟ್ಪಾತ್ ನಿಮರ್ಿಸಿದ್ದು, ಹಸಿರು ಪರಿಸರ ಕಣ್ಮನ ಸೆಳೆಯುತ್ತ್ತಿದೆ.

    ಅಧ್ಯಕ್ಷ-ಉಪಾಧ್ಯಕ್ಷರ ಕೋಣೆಯಲ್ಲಿ ಟಿವಿ, ಎಲ್ಲ ಕೋಣೆಗಳಲ್ಲೂ ಕಂಪ್ಯೂಟರ್ಗಳಿದ್ದು, ಡಿಜಿಟಲೀಕರಣಕ್ಕೆ ಆದ್ಯತೆ ನೀಡುವ ಜತೆಗೆ ಸೋಲಾರ್ ವ್ಯವಸ್ಥೆ ಅಳವಡಿಸಲಾಗಿದೆ. ಕಾಂಪೌಂಡ್, ಕೋಣೆ ಗೋಡೆಗಳಲ್ಲಿ ವಲರ್ಿ ಕಲೆ ಗಮನ ಸೆಳೆಯುತ್ತಿದೆ. ಸಭಾಂಗಣದಲ್ಲಿ ಐತಿಹಾಸಿಕ ಮತ್ತು ಪ್ರವಾಸಿ ತಾಣ ಚಿತ್ರಗಳ ಫ್ರೇಮ್ ಅಳವಡಿಸಿದ್ದು, ಕೋಣೆಗಳು ಸೇರಿ ಎಲ್ಲ ಭಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಿರುವುದು ಗಮನಾರ್ಹ. 20 ಸದಸ್ಯ ಬಲದ ಗ್ರಾಪಂ ವ್ಯಾಪ್ತಿಯಲ್ಲಿ ಹಳ್ಳಿ, ಉಮ್ಮಾಪುರ ಹಾಗೂ ರಾಮತೀರ್ಥ (ಕೆ) ಗ್ರಾಮಗಳು ಬರುತ್ತವೆ.

    ನೂತನ ಕಟ್ಟಡ ಉದ್ಘಾಟನೆ ಇಂದು: ಚಂಡಕಾಪುರದಲ್ಲಿ ನೂತನ ಮಾದರಿ ಗ್ರಾಪಂ ಕಟ್ಟಡದ ಉದ್ಘಾಟನೆ ಮಂಗಳವಾರ ಬೆಳಗ್ಗೆ 11.30ಕ್ಕೆ ಜರುಗಲಿದೆ. ಆಳಂದ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು ಸಾನ್ನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಲೋಕಾರ್ಪಣೆ ಮಾಡುವರು. ಕೇಂದ್ರ ಸಚಿವ ಭಗವಂತ ಖೂಬಾ, ವಿಧಾನ ಪರಿಷತ್ ಸಭಾಪತಿ ರಘುನಾಥರಾವ ಮಲ್ಕಾಪುರೆ, ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಉಪಸ್ಥಿತರಿರುವರು. ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸಲಿದ್ದು, ಎಂಎಲ್ಸಿಗಳಾದ ಅರವಿಂದಕುಮಾರ ಅರಳಿ, ಡಾ.ಚಂದ್ರಶೇಖರ ಪಾಟೀಲ್, ಶಶೀಲ್ ನಮೋಶಿ, ಭೀಮರಾವ ಪಾಟೀಲ್, ಕೆಎಸ್ಐಐಡಿಸಿ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಕನರ್ಾಟಕ ಹಜ್ ಸಮಿತಿ ಅಧ್ಯಕ್ಷ ರೌಫೋದ್ದೀನ್ ಕಛೇರಿವಾಲೆ, ರಾಜ್ಯ ಮರಾಠ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ.ಜಿ.ಮುಳೆ, ಗ್ರಾಪಂ ಅಧ್ಯಕ್ಷೆ ಪುತಳಾಬಾಯಿ ಬಿರಾದಾರ್, ಉಪಾಧ್ಯಕ್ಷೆ ಜಯಮಾಲಾ ದೇವಿದಾಸ ಭಾಗವಹಿಸಲಿದ್ದಾರೆ.

    ಬೀದರ್ ಜಿಲ್ಲೆಯಲ್ಲೇ ಮಾದರಿ ಗ್ರಾಪಂ ಕಟ್ಟಡ ನಿಮರ್ಾಣವಾಗಿದ್ದು, ಅಗತ್ಯಬಿದ್ದರೆ 10 ಲಕ್ಷ ರೂ.ಅನುದಾನ ಕಲ್ಪಿಸಲಾಗುವುದು. ಇದೇ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಮೃತ ಸರೋವರ ಯೋಜನೆಯಡಿ ಕೆರೆ ನಿಮರ್ಿಸಲಾಗಿದೆ. ಈ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಡಿಜಿಟಲ್ ಗ್ರಂಥಾಲಯ ನಿಮರ್ಿಸಿರುವುದು ಮಾದರಿ ಎನಿಸಿದೆ.
    | ಶರಣು ಸಲಗರ, ಶಾಸಕ

    ಚಂಡಕಾಪುರದಲ್ಲಿ ಹೊಸದಾಗಿ ಹೈಟೆಕ್ ಗ್ರಾಪಂ ಕಟ್ಟಡ ನಿಮರ್ಿಸಲಾಗಿದ್ದು, ಶಾಸಕ ಶರಣು ಸಲಗರ, ಅಧಿಕಾರಿಗಳು ಮತ್ತು ಗ್ರಾಪಂ ಸದಸ್ಯರ ಸಹಕಾರದಿಂದ ಇದು ಸಾಧ್ಯವಾಗಿದೆ. ಅಗತ್ಯ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಕಟ್ಟಡ ನಿಮರ್ಾಣ ಖುಷಿ ತಂದಿದೆ.
    | ಪುತಳಾಬಾಯಿ ಆರ್.ಬಿರಾದಾರ್, ಗ್ರಾಪಂ ಅಧ್ಯಕ್ಷೆ

    ಚಂಡಕಾಪುರದಲ್ಲಿ ಮೇಲಧಿಕಾರಿಗಳ ಮಾರ್ಗದರ್ಶನ, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರದಿಂದ ಮಾದರಿ ಗ್ರಾಪಂ ಕಟ್ಟಡ ನಿಮರ್ಾಣಗೊಂಡಿದ್ದು, ಇನ್ನಷ್ಟು ಅಭಿವೃದ್ಧಿಗೆ ಶಾಸಕರು ಹೆಚ್ಚಿನ ಅನುದಾನ ಕಲ್ಪಿಸುವ ಭರವಸೆ ನೀಡಿದ್ದಾರೆ.
    |ಚಂದ್ರಮ ಧೂಳಖೇಡ, ಪಿಡಿಒ ಚಂಡಕಾಪುರ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts