More

    ಗ್ರೀನ್ ಸಿಟಿಯಾಗಲಿ ಶಿವಮೊಗ್ಗ

    ಶಿವಮೊಗ್ಗ: ಸ್ಮಾರ್ಟ್ ಸಿಟಿಯಾಗಿ ರೂಪುಗೊಳ್ಳುತ್ತಿರುವ ಶಿವಮೊಗ್ಗ ಮಹಾನಗರ ಗ್ರೀನ್ ಸಿಟಿಯಾಗಿ ಪರಿವರ್ತನೆಯಾಗಲಿ. ಅಭಿವೃದ್ಧಿ ಜತೆಗೆ ನಗರದ ಹಸಿರೀಕರಣಕ್ಕೂ ಒತ್ತು ನೀಡಿ ಎಂದು ನಗರ ಪಾಲಿಕೆ ಅಧಿಕಾರಿಗಳಿಗೆ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸೂಚಿಸಿದರು.

    ಶುಕ್ರವಾರ ನಗರಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಸಭೆ ನಡೆಸಿದ ಅವರು, ಕೇವಲ ನಗರದ ಅಭಿವೃದ್ಧಿಯನ್ನಷ್ಟೇ ಗಮನಿಸುವುದಲ್ಲ. ಅರಣ್ಯ ಬೆಳೆಸುವುದು, ಪಾರ್ಕ್ ಅಭಿವೃದ್ಧಿಪಡಿಸುವುದು ಪಾಲಿಕೆಯ ಜವಾಬ್ದಾರಿ ಎಂದರು.

    ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪರಿಸರ ಸ್ವಚ್ಛತೆ, ಜೀವ ವೈವಿಧ್ಯಕತೆ ಕಾಯ್ದುಕೊಳ್ಳಬೇಕು. ಪ್ರತಿ 3 ತಿಂಗಳಿಗೊಮ್ಮೆ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಸಭೆ ನಡೆಸಬೇಕು. ಪರಿಸರಕ್ಕೆ ಪೂರಕವಾದ ಕೆಲಸಗಳಿಗೆ ಇಂದು ಅನುದಾನದ ಕೊರತೆಯಿಲ್ಲ. ಸರ್ಕಾರಿ ಕಚೇರಿ, ಶಾಲೆ, ದೇವಾಲಯಗಳ ಆವರಣಗಳಲ್ಲಿ ಗಿಡಗಳನ್ನು ಬೆಳೆಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

    ಈ ಹಿಂದೆ ಪ್ಚಶಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷನಾಗಿದ್ದಾಗ ಮಂಗಳೂರು, ಹá-ಬ್ಬಳ್ಳಿ ಮುಂತಾದ ಮಹಾನಗರ ಪಾಲಿಕೆಗಳಲ್ಲಿ ಸಭೆ ನಡೆಸಿದ್ದೆ. ಅಂದು ಅಲ್ಲಿನ ಸ್ಥಳೀಯ ಸಂಸ್ಥೆಗಳು ಅರಣ್ಯ ಸಂರಕ್ಷಣೆ ನಮ್ಮ ಕೆಲಸವಲ್ಲ ಎಂದು ಹೇಳಿದ್ದವು. ಆದರೆ ಈಗ ಸ್ಥಳೀಯ ಸಂಸ್ಥೆಗಳು ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕೆಂದು ಅನೇಕ ಆದೇಶಗಳಿವೆ ಎಂದರು.

    ನೈರ್ಸಕ ಸಂಪನ್ಮೂಲಗಳ ಸಂರಕ್ಷಣೆ ಬಗ್ಗೆ ಕ್ರಮ ಕೈಗೊಳ್ಳಬೇಕು. ಕೆರೆಗಳು ಮತ್ತು ಜಲಮೂಲಗಳ ಸಂರಕ್ಷಣೆ ಮಾಡಬೇಕು. ಒತ್ತುವರಿ ತೆರವುಗೊಳಿಸಬೇಕು. ಪರಿಸರದ ಪರವಾಗಿ ಅನೇಕ ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳನ್ನು ಸ್ಥಳೀಯ ಸಂಸ್ಥೆಗಳು ಸಮಪರ್ಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು.

    ಈ ಬಾರಿ ಗ್ರೀನ್ ಬಜೆಟ್: ರಾಜ್ಯ ಬಜೆಟ್​ನಲ್ಲಿಯೂ ಜೀವವೈವಿಧ್ಯತೆ ರಕ್ಷಣೆಗೆ ಆದ್ಯತೆ ನೀಡಲು ಮá-ಖ್ಯಮಂತ್ರಿಗಳನ್ನು ಕೋರಲಾಗಿದ್ದು ಸ್ಪಂದಿಸಿದ್ದಾರೆ. ಕೃಷಿ ಬಜೆಟ್​ನಂತೆ ಪರಿಸರಕ್ಕೆ ಪೂರಕವಾಗಿ ಪ್ರತ್ಯೇಕವಾಗಿ ಗ್ರೀನ್ ಬಜೆಟ್ ಮಂಡಿಸುವಂತೆ ಸಿಎಂಗೆ ಮನವಿ ಮಾಡಲಾಗಿದೆ ಎಂದು ಅನಂತ ಹೆಗಡೆ ಅಶೀಸರ ತಿಳಿಸಿದರು.

    ಮಾಲಿನ್ಯ ನಿಯಂತ್ರಿಸಿ: ಒತ್ತುವರಿ ತೆರವಿನ ಜತೆಗೆ ಪಾಳá-ಬಿದ್ದಿರುವ ಸರ್ಕಾರಿ ಕಟ್ಟಡಗಳ ಸುತ್ತ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು. ಅವಕಾಶವಿರುವ ಕಡೆಗಳಲ್ಲಿ ಹಣ್ಣಿನ ಗಿಡಗಳನ್ನು ಹೆಚ್ಚಾಗಿ ನೆಡಬೇಕು. ತರಕಾರಿ ಕೈ ತೋಟಕ್ಕೆ ಪ್ರೋತ್ಸಾಹ ನೀಡಬೇಕು. ಸಸ್ಯ ಸಂತೆ ಜಾಥಾ ಏರ್ಪಡಿಸಿ ಮನೆ ಬಾಗಿಲಲ್ಲಿ ಕಡಿಮೆ ದರದಲ್ಲಿ ಗಿಡಗಳ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು. ಬಫರ್ ಝೋನ್​ಗಳನ್ನು ಹಸಿರು ವಲಯವನ್ನಾಗಿ ರೂಪಿಸಬೇಕೆಂದು ಅನಂತ ಹೆಗಡೆ ಅಶೀಸರ ಸಲಹೆ ನೀಡಿದರು. ದೇಶದ ಪ್ರಮುಖ ನದಿಗಳಲ್ಲಿ ಒಂದಾಗಿರುವ ತುಂಗಾ ನದಿ ಮಾಲಿನ್ಯ ಕಳವಳಕಾರಿ ನದಿಗೆ ಕಿಮೀ ಗಟ್ಟಲೆ ಗೋಡೆ ಕಟ್ಟಿ, ಕೋಟ್ಯಂತರ ರೂ. ಖರ್ಚು ಮಾಡಿದ್ದರೂ ಮಾಲಿನ್ಯ ತಡೆ ಸಾಧ್ಯವಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

    ಶಿಷ್ಟಾಚಾರ ಉಲ್ಲಂಘನೆ: ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರದ್ದು ಸಚಿವ ಸಂಪುಟ ದರ್ಜೆಯ ಸ್ಥಾನಮಾನ. ಬೆಳಗ್ಗೆ 11.30ಕ್ಕೆ ಅನಂತ ಹೆಗಡೆ ಅಶೀಸರ ಸಭೆ ನಿಗದಿಯಾಗಿತ್ತು. ಮೇಯರ್ ಹಾಗೂ ಉಪಮೇಯರ್ ಮಾರಿಜಾತ್ರೆಗೆ ತೆರಳಿದ್ದ ಕಾರಣ ಸಭೆಯನ್ನು ಕಡೇ ಕ್ಷಣದಲ್ಲಿ 12ಕ್ಕೆ ಮುಂದೂಡಲಾಯಿತು. ಸರಿಯಾಗಿ 12ಕ್ಕೆ ಆಗಮಿಸಿದ ಅಶೀಸರ ಅವರನ್ನು ಸ್ವಾಗತಿಸುವವರೇ ಇರಲಿಲ್ಲ. 5 ನಿಮಿಷದ ಬಳಿಕ ಆಯುಕ್ತರು ಬಂದರು. ಅದಾದ 10 ನಿಮಿಷದ ನಂತರ ಮೇಯರ್, ಉಪಮೇಯರ್ ಆಗಮಿಸಿದರು. ಇದರ ಮಧ್ಯ ಅಧಿಕಾರಿಯೊಬ್ಬರು ಮೊಬೈಲ್​ನಲ್ಲಿ ಹೂಗುಚ್ಛ ಎಲ್ಲಿ ಎಂದು ಪ್ರಶ್ನೆ ಮಾಡುತ್ತಿದ್ದರು. ಕಡೆಗೂ ಹೂಗುಚ್ಛ ಬರಲೇ ಇಲ್ಲ.

    ಹಸಿರು ಬಜೆಟ್ ನಮ್ಮದು: ಈ ಹಿಂದೆ ನಗರಸಭೆ ಅಧಿಕಾರಾವಧಿಯಲ್ಲಿ ಮೊದಲ ಬಾರಿಗೆ ಹಸಿರು ಬಜೆಟ್ ಮಂಡಿಸಿದ್ದು ಬಿಜೆಪಿ ಸಾಧನೆ. ಅಂದು ನಾವು ನೆಟ್ಟ ಗಿಡಗಳು ಇಂದು ನಮ್ಮ ಕಾರ್ಯಕ್ಕೆ ಉತ್ತರವಾಗಿ ನಿಂತಿವೆ. ಶಿವಮೊಗ್ಗದಲ್ಲಿ 400ಕ್ಕೂ ಹೆಚ್ಚು ಪಾರ್ಕ್​ಗಳಿವೆ. ಈ ಪೈಕಿ 100 ಪಾರ್ಕ್​ಗಳನ್ನು ಈ ವರ್ಷ ಅಭಿವೃದ್ಧಿಪಡಿಸಲಾಗುತ್ತಿದೆ. ಗೋಪಾಳದಲ್ಲಿ 5 ಎಕರೆ ಖಾಲಿ ಜಾಗವಿದೆ. ಅದನ್ನು ಅರಣ್ಯೀಕರಿಸುವ ಬಗ್ಗೆಯೂ ಚಿಂತನೆ ನಡೆಯಬೇಕಿದೆ ಎಂದು ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ ಅಭಿಪ್ರಾಯಪಟ್ಟರು.

    ಮೇಯರ್ ಸುವರ್ಣಾ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಎಡಿಸಿ ಜಿ.ಅನುರಾಧಾ, ಆಯುಕ್ತ ಚಿದಾನಂದ ವಟಾರೆ, ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಪರಿಸರ ಅಭಿಯಂತರಾದ ಮದಕರಿ ನಾಯಕ, ಸುಧಾರಾಣಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts