More

    ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಕಟ್ಟಡ ಶಿಥಿಲ

    ಮಲ್ಲು ಕಳಸಾಪುರ ಲಕ್ಷೆ್ಮೕಶ್ವರ

    ಪಟ್ಟಣದ ಕೇಂದ್ರ ಭಾಗದ ಭಾನು ಮಾರ್ಕೆಟ್​ನಲ್ಲಿರುವ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಯ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಅಧಿಕಾರಿಗಳು ಭಯದಲ್ಲೇ ದಿನ ದೂಡುವಂತಾಗಿದೆ.

    ಕಟ್ಟಡ ಹಳೆಯದಾಗಿದ್ದು, ಮೇಲೆಲ್ಲ ಹುಲ್ಲು, ಕಸ ಬೆಳೆದುಕೊಂಡಿದೆ. ಮಳೆ ಬಂದರಂತೂ ನೀರು ಸೋರಲಾರಂಭಿಸುತ್ತದೆ. ಹೀಗಾಗಿ, ಕಡತಗಳನ್ನು ಸಂರಕ್ಷಿಸುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಗ್ರಾಮ ಲೆಕ್ಕಾಧಿಕಾರಿಗಳು ಅನೇಕ ವರ್ಷಗಳಿಂದ ಜೀವ ಭಯದಲ್ಲೇ ಕಾರ್ಯನಿರ್ವಹಿಸುತ್ತಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.

    ಅಂದಾಜು 75 ವರ್ಷಗಳಷ್ಟು ಹಳೆಯದಾದ ಮಣ್ಣಿನ ಕಟ್ಟಡ ಇದಾಗಿದೆ. ಇಲ್ಲಿ ಪಟ್ಟಣದ ಹಿರೇಬಣ, ಪೇಠಬಣ, ದೇಸಾಯಿಬಣ, ಬಸ್ತಿಬಣ ಹಾಗೂ ಹುಲಗೇರಿ ಬಣಗಳ ವ್ಯಾಪ್ತಿಯ 5 ಜನ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿರುವ ಧೂಳು ತಿಂದ ಭೂದಾಖಲೆಗಳು ಮಳೆಗೆ ನೆನೆದು ಹಾಳಾಗುತ್ತಿವೆ. ಇಡೀ ಕಟ್ಟಡ ಮಳೆಯಿಂದ ತಂಪಾದಾಗ ಇಲ್ಲಿನ ಸಿಬ್ಬಂದಿಗೆ ಆಗಾಗ ವಿದ್ಯುತ್ ಶಾಕ್ ಅನುಭವವವೂ ಆಗಿದೆ.

    ತಹಸೀಲ್ದಾರ್, ನಾಡ ಕಚೇರಿಯಲ್ಲೂ ಸಮಸ್ಯೆ: ಪಟ್ಟಣದ ತಹಸೀಲ್ದಾರ್ ಕಚೇರಿ ಹಾಗೂ ನಾಡ ಕಚೇರಿ ಕೂಡ ಮಳೆ ಬಂದರೆ ಸೋರುತ್ತವೆ. ಇದರಿಂದ ಸಿಬ್ಬಂದಿ ಪರದಾಡುವಂತಾಗಿದೆ, ಕಡತಗಳನ್ನು ಮಳೆ ನೀರಿಗೆ ನೆನೆಯದಂತೆ ಕಾಪಾಡಿಕೊಂಡು, ಸಾರ್ವಜನಿಕರಿಗೆ ಸೇವೆ ಒದಗಿಸಲು ಹೆಣಗಾಡುವಂತಾಗಿದೆ. ಕಚೇರಿ ಕಟ್ಟಡದ ಮೇಲ್ಛಾವಣಿ ಬಿರುಕು ಬಿಟ್ಟಿದೆ. ಎಪಿಎಂಸಿಗೆ ಸೇರಿದ ಕಟ್ಟಡದಲ್ಲಿ ತಹಸೀಲ್ದಾರ್ ಕಚೇರಿ ಇದ್ದು, ಎಪಿಎಂಸಿಯವರೇ ದುರಸ್ತಿ ಮಾಡಿಸಿಕೊಡಬೇಕು ಎಂದು ತಹಸೀಲ್ದಾರರು ಹೇಳುತ್ತಾರೆ.

    ಗ್ರಾಮ ಲೆಕ್ಕಾಧಿಕಾರಿಗಳ ಕಟ್ಟಡ, ನಾಡಕಚೇರಿ, ತಹಸೀಲ್ದಾರ್ ಕಚೇರಿ ಸೋರುತ್ತಿದ್ದು, ಸಮಸ್ಯೆ ಹೆಚ್ಚಾಗಿದೆ. ಮುಂದಾಗಬಹುದಾದ ಅನಾಹುತ ತಡೆಯಲು ಈಗಲೇ ಕ್ರಮಕ್ಕೆ ಮುಂದಾಗಬೇಕು.

    | ಸೋಮನಗೌಡ ಪಾಟೀಲ, ಪುರಸಭೆ ಮಾಜಿ ಸದಸ್ಯ

    ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ನೂತನ ಕಟ್ಟಡ ನಿರ್ವಣಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ಕಳುಹಿಸಲಾಗಿದೆ. ಅಲ್ಲಿಯವರೆಗೂ ಗ್ರಾಮ ಲೆಕ್ಕಾಧಿಕಾರಿಗಳು ಸಿಬ್ಬಂದಿಯ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗುವುದು.

    | ಭ್ರಮರಾಂಬ ಗುಬ್ಬಿಶೆಟ್ಟಿ, ತಹಸೀಲ್ದಾರ್, ಲಕ್ಷೆ್ಮೕಶ್ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts