More

    ಗ್ರಾಮೀಣ ಭಾಗಗಳಲ್ಲಿ ತಂಪೆರೆದ ಮಳೆ

    ಮಂಗಳೂರು: ಕಳೆದ ಒಂದೆರಡು ದಿನಗಳಿಂದ ಕರಾವಳಿಯ ಗ್ರಾಮೀಣ ಭಾಗದಲ್ಲಿ ಸಂಜೆ ವೇಳೆ ಮಳೆಯಾಗುತ್ತಿದ್ದು, ಭಾನುವಾರ ಸಂಜೆ ಜಿಲ್ಲೆಯ ಹಲವಡೆ ಗುಡುಗು ಸಹಿತ ಮಳೆಯಾಗಿದೆ.

    ಮಂಗಳೂರು, ಪುತ್ತೂರು, ಬೆಳ್ತಂಗಡಿ, ಸುಳ್ಯ ಭಾಗದ ಹಲವಡೆ ಮಳೆಯಾಗಿದೆ. ಪುತ್ತೂರು ನಗರ ವ್ಯಾಪ್ತಿಯಲ್ಲಿ ಭಾರೀ ಗಾಳಿ ಮಳೆಗೆ ಹಾನಿಯುಂಟಾಗಿದೆ. ಪುತ್ತೂರಿನ ಉಲಾರ್ಂಡಿ, ಸಿಂಗಾಣಿಯಲ್ಲಿ ಮರ ಬಿದ್ದು ಮನೆಗಳಿಗೆ ಹಾನಿಯಾಗಿದೆ. ಬಪ್ಪಳಿಗೆ ಎಂಬಲ್ಲಿ ಕಮಲ ಎಂಬವರ ಮನೆಯ ಶೀಟು ಗಾಳಿಗೆ ಹಾರಿ ಅವಘಡ, ಉಲಾರ್ಂಡಿಯಲ್ಲಿ ಶೋಭಾ ಹೆಗ್ಡೆ ಎಂಬವರ ಮನೆಯ ಮೇಲೆ ಮರ ಬಿದ್ದು ಹಾನಿಯುಂಟಾಗಿದೆ. ಸುಬ್ರಹ್ಮಣ್ಯ, ಕೊಕ್ಕಡ, ನೆಲ್ಯಾಡಿಯಲ್ಲಿ ಗಾಳಿ ಸಿಡಿಲು ಸಹಿತ ಉತ್ತಮ ಮಳೆಯಾಗಿದೆ. ಹವಾಮಾನ ಇಲಾಖೆ ಶುಕ್ರವಾರದಿಂದ ಕರಾವಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿತ್ತು. ಇದರಿಂದ ಮುಂದಿನ 1ವಾರ ಮಳೆಯ ಸಾಧ್ಯತೆ ಮತ್ತಷ್ಟು ದಟ್ಟವಾಗಿದೆ. ಒಂದೆರಡು ವಾರ ಕರಾವಳಿಯಲ್ಲಿ ಪೂರ್ಣ ರೂಪದಲ್ಲಿ ಮಳೆ ಕಾಣಿಸಿಕೊಳ್ಳಲಿದೆ ಎಂದು ಐಎಂಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ದ.ಕ ಜಿಲ್ಲೆಯಲ್ಲಿ ಭಾನುವಾರ ಸರಾಸರಿ 33.7 ಡಿಗ್ರಿ ಗರಿಷ್ಟ, 26.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ಸಂಜೆ 24.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಠಾಂಶ ದಾಖಲಾಗಿರುವುದರಿಂದ ರಾತ್ರಿ ಪೂರಾ ಒಣ ಚಳಿ ಮುಂದುವರಿದಿತ್ತು. ದ.ಕ, ಉಡುಪಿ ಹಾಗೂ ಉತ್ತರ ಕನ್ನಡ ಭಾಗದಲ್ಲಿ ಸರಾಸರಿ 34.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ರಾತ್ರಿ ಮಳೆ ಕಾಡು ಹಾಗು ಪಶ್ಚಿಮಘಟ್ಟದ ಹಲವಡೆ ಸಾಧಾರಣ ಮಳೆ ಸಹಿತ ಹೆಚ್ಚಿನ ಪ್ರಮಾಣದ ಮೋಡಕವಿದ ವಾತಾವರಣ ಕಂಡುಬಂದಿದೆ ಎಂದು ರಾಷ್ಟ್ರೀಯ ಹವಾಮಾನ ಮನ್ಸೂಚನಾ ಕೇಂದ್ರ ಮಾಹಿತಿ ನೀಡಿದೆ.

    ——————

    ಗುಡುಗು ಮಿಂಚಿನೊಂದಿಗೆ ಉತ್ತಮ ಮಳೆ ಸಾಧ್ಯತೆ

    ದ.ಕ, ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೇ 16 ರವರೆಗೆ ಗುಡುಗು ಮಿಂಚಿನೊಂದಿಗೆ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾನುವಾರ ಬೆಳಗ್ಗಿನಿಂದ ಸಮುದ್ರ ಪ್ರಕ್ಷುಬ್ದಗೊಂಡಿದ್ದು, ಬೃಹತ್ ಅಲೆಗಳು ಸಮುದ್ರದ ದಡಕ್ಕೆ ಅಪ್ಪಳಿಸುತ್ತಿದೆ. ಮಂಗಳೂರು, ಉಡುಪಿ, ಕಾರವಾರ ಬೀಚ್ ವ್ಯಾಪ್ತಿಯಲ್ಲೂ ಕಡಲಬ್ಬರ ಹೆಚ್ಚಳಗೊಳ್ಳುತ್ತಿದೆ. ಸಧ್ಯಕ್ಕೆ ಬಹುತೇಕ ಕಡೆ ಮೀನುಗಾರಿಕಾ ದೋಣಿಗಳು ಸಮುದ್ರಕ್ಕೆ ಇಳಿಯದೆ ದಡದಲ್ಲೇ ಲಂಗರು ಹಾಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts