More

    ಗ್ರಾಮೀಣರಲ್ಲಿ ಸಾಕ್ಷರತೆ ಪ್ರಜ್ಞೆ ಮೂಡಿಸಿ

    ಯಾದಗಿರಿ : ಗ್ರಂಥಾಲಯಗಳು ಕಲಿಕೆಯ ಕೇಂದ್ರಗಳನ್ನಾಗಿ ಪರಿವರ್ತಿಸುವ ಮೂಲಕ ಗ್ರಾಮೀಣ ಭಾಗದ ಜನರಲ್ಲಿ ಸಾP್ಷÀರತೆ ಪ್ರಜ್ಞೆ ಮೂಡಿಸಲು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಡಾ.ಟಿ.ರೋಣಿ ಸಲಹೆ ನೀಡಿದರು.

    ಸೋಮವಾರ ನಗರದ ತಾಪಂ ಕಚೇರಿಯಲ್ಲಿ ತಾಲೂಕಿನ ಗ್ರಾಪಂ ಗ್ರಂಥಪಾಲಕರಿಗಾಗಿ ಆಯೋಜಿಸಿದ್ದ ಮೂರು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಮಕ್ಕಳು ಪುಸ್ತದೊಂದಿಗೆ ತೊಡಗಿಸಿಕೊಳ್ಳಲು ಅಗತ್ಯ ಸೃಜನಾತ್ಮಕ ಚಟುವಟಿಕೆಗಳನ್ನು ಕೈಗೊಳ್ಳಬೇಕು ಗ್ರಂಥಾಲಯಗಳು ಮಕ್ಕಳನ್ನು ಆಹ್ವಾನಿಸುವ ರೀತಿಯಲ್ಲಿ ಸುತ್ತಮುತ್ತ ವಾತಾವರಣ ನಿರ್ಮಿಸಬೇಕು. ಪ್ರತಿ ಗ್ರಂಥಾಲಯದಲ್ಲಿ ಮಕ್ಕಳ ಕೈಗೆಟುವಂತೆ ಪುಸ್ತಕಗಳನ್ನು ಜೋಡಿಸಿಡಬೇಕು ಎಂದು ಸೂಚಿಸಿದರು.

    ತಾಪಂ ಇಒ ಬಸವರಾಜ ಶರಬೈ ಮಾತನಾಡಿ, ಗ್ರಂಥಾಲಯ ಕೇವಲ ಪುಸ್ತಕ ಸಂಗ್ರಹಣ ಕೊಠಡಿಗಳಾಗದೆ ಓದುವ ಹವ್ಯಾಸ ಬೆಳಸುವ ಕೇಂದ್ರಗಳಾಗಬೇಕು. ಸ್ವಚ್ಛ ಪರಿಸರ, ಶುದ್ಧ ಕುಡಿವ ನೀರು, ಒಳ್ಳೆಯ ಗಾಳಿ ಹೀಗೆ ಮೂಲಸೌಲಭ್ಯ ಹೊಂದಿರಬೇಕು. ಒಮ್ಮೆ ಗ್ರಂಥಾಲಯ ಪ್ರವೇಶಿಸಿದರೆ, ಕನಿಷ್ಠ ಒಂದು ಗಂಟೆಯಾದರೂ ಅಲ್ಲೇ ಕಳೆಯುವಂತಿರಬೇಕು ಎಂದರು.

    ಗುರುಮಠಕಲ್ ತಾಪಂ ಇಒ ಶಿವಸುಂದರ ಕದ್ರೊಳ್ಳಿ, ಈಗಿನ ಮಕ್ಕಳಿಗೆ ಓದಿನ ಹವ್ಯಾಸ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪಾಲಕರು ಸಹ ಪ್ರೋತ್ಸಾಹ ನೀಡುವ ಅಗತ್ಯವಿದೆ. ಮೋಬೈಲ್, ಇಂಟರ್‌ನೆಟ್ ವ್ಯಾಮೋಹÀದಿಂದ ಹೊರ ತರುವ ಅವಶ್ಯಕತೆ ಇದೆ ಎಂದು ತಿಳಿಸಿದರು.

    ಸಹಾಯಕ ನಿರ್ದೇಶಕ ಖಾಲೀದ್ ಅಹ್ಮದ್, ತಾಲೂಕು ಯೋಜನಾ ನಿರ್ದೇಶಕ ಶಿಶಧರ ಹಿರೇಮಠ, ಭಾರತಿ ಸಜ್ಜನ್, ವ್ಯವಸ್ಥಾಪಕ ಶಿವರಾಯ ಗುಂಡಗುರ್ತಿ, ಅನಸರ್ ಪಟೇಲ್, ಭೀಮರೆಡ್ಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts