More

    ಗ್ರಾಮದೇವಿ ಜಾತ್ರೆ ಮುಂದಕ್ಕೆ

    ಹಳಿಯಾಳ: ಅದ್ದೂರಿ ಜಾತ್ರೆಗೆ ಹೆಸರುವಾಸಿಯಾಗಿರುವ ತಾಲೂಕಿನ ಬಿ.ಕೆ. ಹಳ್ಳಿಯ ಗ್ರಾಮದೇವಿ ಜಾತ್ರೆಗೆ ಕರೊನಾ ಅಡ್ಡಿಯಾಗಿದೆ. ಏ. 8ರಿಂದ 24ರವರೆಗೆ ನಡೆಯಬೇಕಿದ್ದ ಜಾತ್ರೆಯನ್ನು ಮುಂದಿನ ವರ್ಷಕ್ಕೆ ಮೂಂದೂಡಲಾಗಿದೆ.

    12 ವರ್ಷಗಳಿಗೊಮ್ಮೆ ಈ ಜಾತ್ರೆ ನಡೆಯುತ್ತದೆ. ಈ ವರ್ಷ ಜಾತ್ರೆ ನಡೆಯುವ ಹಿನ್ನೆಲೆಯಲ್ಲಿ ಬಿ.ಕೆ. ಹಳ್ಳಿ ಗ್ರಾಮಸ್ಥರು ಒಂದು ವರ್ಷದಿಂದಲೇ ಸಿದ್ಧತೆ ಆರಂಭಿಸಿದ್ದರು. ಗ್ರಾಮದೇವಿ ದೇವಸ್ಥಾನದ ದುರಸ್ತಿ ಮಾಡಿ ಬಣ್ಣ ಹಚ್ಚಿ ಶೃಂಗಾರ ಮಾಡಲಾಗುತ್ತಿತ್ತು. ದೇವಸ್ಥಾನದ ಪಕ್ಕವೇ ಶ್ರೀ ವಿಠ್ಠಲ ರುಕ್ಮಾಯಿ ನೂತನ ದೇವಸ್ಥಾನ ನಿರ್ಮಾಣ ಕಾರ್ಯ ಮುಗಿದು ಬಣ್ಣ ಹಚ್ಚುವ ಕಾರ್ಯ ಆರಂಭಗೊಂಡಿತ್ತು. ರಥದ ನಿರ್ಮಾಣ ಕಾರ್ಯ ಮುಗಿದು, ಅಲಂಕಾರ ಕಾರ್ಯ ಬಾಕಿ ಉಳಿದಿತ್ತು. ಜಾತ್ರೆ ಹಿನ್ನೆಲೆ ಗ್ರಾಮದ ನೂರಾರು ಮನೆಗಳ ನಿರ್ವಣ, ನವೀಕರಣ ಕಾರ್ಯಗಳು ಭರದಿಂದ ಸಾಗಿದ್ದವು.

    ಜನರ ಹಿತದೃಷ್ಟಿಯಿಂದ ಜಾತ್ರೆಯನ್ನು ಮುಂದೂಡಿದ್ದು, 2021 ಸಾಲಿನ ಫೆಬ್ರವರಿಯಲ್ಲಿ ಜಾತ್ರೆ ನಡೆಸಲು ಗ್ರಾಮಸ್ಥರೆಲ್ಲ ಸರ್ವಾನುಮತದಿಂದ ತೀರ್ವನಿಸಿದ್ದಾರೆ ಎಂದು ಗ್ರಾಮದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮಾರುತಿ ದೇಮಣ್ಣ ತೋರಸ್ಕರ ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.

    ವಾರ್ಡ್​ವಾರು ದಿನಸಿ: ಶುಕ್ರವಾರದಿಂದ ಪಟ್ಟಣದ ಎಲ್ಲ ವಾರ್ಡ್​ಗಳಲ್ಲಿ ದಿನಸಿ ಸಾಮಗ್ರಿಗಳನ್ನು ವಿತರಿಸುವ ಕಾರ್ಯ ಆರಂಭಿಸಲಾಗುತ್ತದೆ ಎಂದು ತಹಸೀಲ್ದಾರ್ ವಿದ್ಯಾಧರ ಗುಳಗುಳೆ ತಿಳಿಸಿದ್ದಾರೆ.

    ದಿನಸಿ ವಿತರಣೆಗೆ ಪುರಸಭೆಯವರು ಮುಂದಾಳತ್ವ ವಹಿಸಿದ್ದು, ಪಟ್ಟಣದ 44 ವರ್ತಕರ ಸಭೆ ಕರೆದು ದಿನಸಿ ವಿತರಣೆಗೆ ವಾರ್ಡ್​ಗಳನ್ನು ಹಂಚಿಕೆ ಮಾಡಲಾಗಿದೆ. ಪುರಸಭೆಯ 3 ವಾಹನಗಳ ಜೊತೆ ಹೆಚ್ಚುವರಿ 9 ವಾಹನಗಳನ್ನು ಬಾಡಿಗೆ ರೂಪದಲ್ಲಿ ಪಡೆಯಲಾಗಿದ್ದು, 12 ವಾಹನಗಳಲ್ಲಿ ದಿನಸಿ ವಿತರಿಸಲಾಗುವುದು. ಪ್ರತಿ ವಾಹನದ ಜೊತೆ ಪೊಲೀಸ್ ಸಿಬ್ಬಂದಿ, ನೋಡಲ್ ಅಧಿಕಾರಿ, ಪುರಸಭೆ ಸಿಬ್ಬಂದಿ ಮತ್ತು ದಿನಸಿ ಅಂಗಡಿಯ ಪ್ರತಿನಿಧಿ ಇರುತ್ತಾನೆ. ದಿನಸಿ ತಲುಪದವರು ಹಾಗೂ ಅಗತ್ಯವಿರುವವರು ಪುರಸಭೆಯ ಸಹಾಯವಾಣಿ ಕೇಂದ್ರಕ್ಕೆ ಸಂರ್ಪಸವೇಕು ಎಂದು ಮನವಿ ಮಾಡಿದ್ದಾರೆ.

    ಕರೊನಾ ನಿಯಂತ್ರಣಕ್ಕೆ ಔಷಧ ಸಿಂಪಡಣೆ: ಪಟ್ಟಣದಲ್ಲಿ ಕರೊನಾ ನಿಯಂತ್ರಣಕ್ಕಾಗಿ ರಾಸಾಯನಿಕ ಸಿಂಪಡಣೆ ಕಾರ್ಯ ಆರಂಭಿಸಲಾಗಿದೆ ಎಂದು ಮುಖ್ಯಾಧಿಕಾರಿ ಕೇಶವ ಚೌಗಲೆ ತಿಳಿಸಿದ್ದಾರೆ. ಇಲ್ಲಿಯ ಅಗ್ನಿಶಾಮಕ ದಳದವರ ನೆರವಿನಿಂದ ಪಟ್ಟಣದಲ್ಲಿ ಸೋಡಿಯಂ ಹೈಪೋ ಕ್ಲೋರೈಡ್ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದ್ದು, ಸಾರ್ವಜನಿಕರು ಮನೆಯಿಂದ ಹೊರಬರದೆ ಲಾಕ್ ಡೌನ್ ನಿಯಮ ಪಾಲಿಸಬೇಕು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts