More

    ಗ್ರಾಪಂ ಸಿಬ್ಬಂದಿಯಿಂದ ಜಾನುವಾರು ಆರೈಕೆ



    ಲಕ್ಷ್ಮೇಶ್ವರ: ತಾಲೂಕಿನ ಪು. ಬಡ್ನಿಯಲ್ಲಿ ಕರೊನಾ ಸೋಂಕಿತ ಕುಟುಂಬದವರು ಚಿಕಿತ್ಸೆಗೊಳಗಾಗಿದ್ದರಿಂದ ಅವರ ದನಕರುಗಳನ್ನು ಗ್ರಾಪಂ ಸಿಬ್ಬಂದಿ ಜೋಪಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಗ್ರಾಮದಲ್ಲಿ ಕಳೆದ 4-5 ದಿನಗಳ ಹಿಂದೆ ಕುಟುಂಬವೊಂದರ 8 ಜನರಿಗೆ ಕರೊನಾ ಸೋಂಕು ದೃಢಪಟ್ಟಿತ್ತು. ಆದರೆ, ದನಕರುಗಳನ್ನು ನೋಡಿಕೊಳ್ಳುವ ಉದ್ದೇಶದಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತೇವೆ ಎಂದು ಸೋಂಕಿತರು ಪಟ್ಟು ಹಿಡಿದರು. ಆದರೆ, ಗ್ರಾಪಂ ಸಿಬ್ಬಂದಿ ದನಕರುಗಳನ್ನು ನೋಡಿಕೊಳ್ಳುವ ಭರವಸೆ ನೀಡಿದ್ದರಿಂದ ಅವರೆಲ್ಲರೂ ಶಿರಹಟ್ಟಿ ತಾಲೂಕಿನ ವರವಿ ಗ್ರಾಮದ ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆಯ ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಂಚಾಯಿತಿಯ ಮೂವರು ಮತ್ತು ಕಂದಾಯ ಇಲಾಖೆ ಒಬ್ಬ ನೌಕರ ದನಕರುಗಳ ಆರೈಕೆ ಮಾಡುತ್ತಿದ್ದಾರೆ.

    ದನಕರುಗಳನ್ನು ನೋಡಿಕೊಳ್ಳುವುದು ಗ್ರಾಪಂ ಸಿಬ್ಬಂದಿಯ ಕರ್ತವ್ಯವಲ್ಲ. ಸಿಬ್ಬಂದಿ ಇಂಥ ಕೆಲಸದಲ್ಲಿ ತೊಡಗಿಕೊಂಡರೆ ಪಂಚಾಯಿತಿ ಕಾರ್ಯಗಳಿಗೆ ತೊಂದರೆಯಾಗಲಿದೆ. ಮಾನವೀಯತೆ ದೃಷ್ಟಿಯಿಂದ ಈ ಕೆಲಸ ಮಾಡುತ್ತಿದ್ದಾರೆ. ಗ್ರಾಮದ ಜನರು, ಮುಖಂಡರು ಈ ಬಗ್ಗೆ ತೀರ್ವನಿಸಿ ಬೇರೆ ಪರ್ಯಾಯ ಮಾಗೋಪಾಯ ಕಂಡುಕೊಳ್ಳಬೇಕು. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಗ್ರಾಮದ ಜನರ ಸಹಕಾರ ಅವಶ್ಯ

    | ಡಾ.ಎನ್.ಎಚ್. ಓಲೇಕಾರ, ತಾಪಂ ಇಒ ಲಕ್ಷ್ಮೇಶ್ವರ

    ಎಲ್ಲೆಡೆ ಕರೊನಾ ಭೀತಿ ಹೆಚ್ಚಾಗುತ್ತಿದೆ. ಇಡಿ ಕುಟುಂಬವೇ ಸೋಂಕಿಗೆ ಒಳಗಾದಾಗ ಮತ್ತು ಮುಂಜಾಗ್ರತೆಗಾಗಿ ಹೋಂ ಕ್ವಾರಂಟೈನ್ ಇರಬೇಕಾದ ವೇಳೆ ಕೃಷಿ ಮೂಲದ ಕುಟುಂಬಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ತಾಲೂಕು ವ್ಯಾಪ್ತಿಯಲ್ಲಿ ತಾತ್ಕಾಲಿಕ ಗೋಶಾಲೆ ಪ್ರಾರಂಭಿಸುವುದು ಹೆಚ್ಚು ಅನುಕೂಲವಾಗಲಿದೆ. ಈಗಾಗಲೇ ಶೆಟ್ಟಿಕೇರಿಯಲ್ಲಿ ಗೋಶಾಲೆ ಶೆಡ್, ನೀರಿನ ವ್ಯವಸ್ಥೆ ಇದೆ ಆದ್ದರಿಂದ ತಾಲೂಕಾಡಳಿತ ಮತ್ತು ಜಿಲ್ಲಾಡಳಿತ ಸೂಕ್ತ ನಿರ್ಧಾರ ಕೈಗೊಳ್ಳಬೇಕು

    | ಮುತ್ತಣ್ಣ ಚೋಟಗಲ್, ಪು.ಬಡ್ನಿ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts