More

    ಗ್ರಾಪಂಗಳಿಗೆ ಪವರ್ ಸ್ಪ್ರೇ ಯಂತ್ರ ವಿತರಣೆ

    ಬ್ಯಾಡಗಿ: ಪಟ್ಟಣ ಸೇರಿ ಗ್ರಾಮೀಣ ಪ್ರದೇಶದಲ್ಲಿ ಕರೊನಾ ವೈರಸ್ ತಡೆಗಟ್ಟುವಲ್ಲಿ ವಿವಿಧ ಇಲಾಖೆಗಳು ಶ್ರಮಿಸುತ್ತಿವೆ. ವೈರಸ್ ನಿಯಂತ್ರಣಕ್ಕೆ ಕ್ರಿಮಿನಾಶಕ ಸಿಂಪಡಿಸಲು ಪವರ್ ಸ್ಪ್ರೇ ಯಂತ್ರ ವಿತರಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ತಿಳಿಸಿದರು.

    ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಪವರ್ ಸ್ಪ್ರೇ ಯಂತ್ರಗಳನ್ನು ಮಂಗಳವಾರ ವಿತರಿಸಿ ಅವರು ಮಾತನಾಡಿದರು.

    ತಾಲೂಕಿನ 21 ಗ್ರಾಮ ಪಂಚಾಯಿತಿಗಳು, ಪುರಸಭೆಗೆ ಯಂತ್ರ ನೀಡಲಾಗಿದೆ ಎಂದರು.

    ನಂತರ ಕೋಳೂರು ಕ್ಯಾಂಪ್​ಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಬಸವೇಶ್ವರ ನಗರ ನಿವಾಸಿಗಳ ನಿವೇಶನ ಸಮಸ್ಯೆ ಕುರಿತು ಸಚಿವ ಸಂಪುಟದಲ್ಲಿ ಹೊರಡಿಸಿದ ಆದೇಶ ಹಾಗೂ ಸೂಚನೆಗಳ ಮಾಹಿತಿ ಪಡೆದು, ಸ್ಥಳೀಯರೊಂದಿಗೆ ರ್ಚಚಿಸಿದರು. ಸರ್ಕಾರದ ಆದೇಶದಂತೆ ಇಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಹಣ ತುಂಬಿಸಿಕೊಂಡು ಹಕ್ಕುಪತ್ರ ನೀಡಬೇಕಿದೆ. ಈ ಕುರಿತು ಪೌರಾಡಳಿತ ಇಲಾಖೆ ಕಾರ್ಯದರ್ಶಿಯೊಂದಿಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.

    ಜೈವಿಕ ಇಂಧನ ಮಂಡಳಿ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಲಾಕ್​ಡೌನ್ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳಿನಿಂದ ಕೂಲಿಕಾರರು ತೀವ್ರ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಸರ್ಕಾರ ಕೇವಲ ಕಟ್ಟಡ ಕಾರ್ವಿುಕರು, ನೋಂದಾಯಿತ ಕಾರ್ವಿುಕರಿಗೆ ವಿವಿಧ ಅಗತ್ಯ ನೆರವು ಕಲ್ಪಿಸಿದೆ. ಅಸಂಘಟಿತ ಕಾರ್ವಿುಕರಿಗೆ ಅನ್ಯಾಯ ಮಾಡಿದೆ. ಇಂತಹ ವೃತ್ತಿಯಲ್ಲಿರುವರ ಬದುಕು ದುಸ್ಥಿತಿಯಲ್ಲಿದ್ದು, ಅವರಿಗೂ ಸಹಾಯ ಮಾಡಬೇಕು ಎಂದು ಒತ್ತಾಯಿಸಿದರು.

    ತಾ.ಪಂ. ಅಧ್ಯಕ್ಷೆ ಸವಿತಾ ಸುತ್ತಕೋಟಿ, ಉಪಾಧ್ಯಕ್ಷೆ ಶಾಂತವ್ವ ದೇಸಾಯಿ, ಎಪಿಎಂಸಿ ಅಧ್ಯಕ್ಷ ಕರಬಸಪ್ಪ ನಾಯ್ಕರ, ಉಪಾಧ್ಯಕ್ಷ ಉಳಿವೆಪ್ಪ ಕುರುವತ್ತಿ, ತಾ.ಪಂ. ಇಒ ಅಬೀದ್ ಗದ್ಯಾಳ, ವ್ಯವಸ್ಥಾಪಕ ಪ್ರಕಾಶ ಹಿರೇಮಠ, ತಾಲೂಕು ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಬೀರಪ್ಪ ಬಣಕಾರ, ಬಸವೇಶ್ವರ ನಗರ ಅಭಿವೃದ್ಧಿ ಸಮಿತಿ ಸದಸ್ಯ ಮೃತ್ಯುಂಜಯ ಕಾಯಕದ, ಕಾಂಗ್ರೆಸ್ ಮುಖಂಡರು ಇದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts