More

    ಗ್ರಹಣ ನಿಮಿತ್ತ ವಿವಿಧೆಡೆ ಹೋಮ

    ಕಲಬುರಗಿ: ಸೂರ್ಯಗ್ರಹಣ ನಿಮಿತ್ತ ಜಿಲ್ಲೆಯ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಭಾನುವಾರ ನವಗ್ರಹ, ಮೃತ್ಯುಂಜಯ ಹೋಮ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.
    ಭಾನುವಾರ ಇರುವುದರಿಂದ ನಗರ ಸೇರಿ ಜಿಲ್ಲೆಯ ವಿವಿಧೆಡೆ ಜನ ಸಂಚಾರ ಕಡಿಮೆ ಇತ್ತು. ಮಧ್ಯಾಹ್ನದವರೆಗೆ ಹೆಚ್ಚಿನ ಜನರು ಮನೆಯಿಂದ ಹೊರಬರಲಿಲ್ಲ. ಮಧ್ಯಾಹ್ನ 1.38ಕ್ಕೆ ಗ್ರಹಣ ಮೋಕ್ಷದ ನಂತರ ಎಲ್ಲರೂ ಸ್ನಾನ ಮಾಡಿ ಫೂಜಾದಿ ಕಾರ್ಯ ಮಾಡಿದರು.
    ಗ್ರಹಣ ಸ್ಪರ್ಶ ಮತ್ತ ಮೋಕ್ಷದ ನಡುವೆ ಹೋಮ, ಜಪ ತಪಾನುಷ್ಠಾನ ಮಾಡಿದರು. ಧಾರ್ಮಿಕ ತಾಣಗಳಾದ ದೇವಲಗಾಣಗಾಪುರ, ಸನ್ನತಿ, ಮಳಖೇಡ ಕ್ಷೇತ್ರಗಳಿಗೆ ಭಕ್ತರು ತೆರಳಿ ನದಿಗಳಲ್ಲಿ ಪುಣ್ಯ ಸ್ನಾನ ಮಾಡಿದರು.
    ಗ್ರಹಣ ಸಮಯದಲ್ಲಿ ಧಾರ್ಮಿಕ ಆಚರಣೆ, ದೇವರ ಪೂಜೆ, ಜಪ, ಧ್ಯಾನಕ್ಕೆ ಮೊರೆ ಹೋಗಿದ್ದು ಸಾಮಾನ್ಯವಾಗಿತ್ತು. ಗ್ರಹಣದ ಸಂದರ್ಭದಲ್ಲಿ ಜನ ನೀರು, ಊಟೋಪಹಾರ ಸೇವಿಸಲಿಲ್ಲ. ಆದರೆ ಕೆಲವರು ಇದನ್ನು ಮೂಢನಂಬಿಕೆ ಎಂದು ಹೇಳಿ ಗ್ರಹಣದ ವೇಳೆ ಊಟ ಮಾಡಿದರು.
    ಜೇವರ್ಗಿ ಕಾಲನಿ ರಾಯರ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಧವರಾವ ತಾವರಗೇರಾ, ವಾಸುದೇವ ಮುಂಡರಗಿ, ಪ್ರಶಾಂತ ಕೊರಳ್ಳಿ, ರಘುರಾಮ ದೋಟಿಹಾಳ, ಪಂ.ಗಿರೀಶಾಚಾರ್ಯ ಅವಧಾನಿ, ಸಂಜೀವಾಚಾರ್ಯ, ಬಿದ್ದಾಪುರ ಕಾಲನಿ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನವಗ್ರಹ ಹೋಮ ಸೇರಿ ಇತರೆ ಧಾರ್ಮಿಕ ಕಾರ್ಯಕ್ರಮ ಜರುಗಿದವು. ನವಲಿ ಕೃಷ್ಣಾಚಾರ್ಯ, ಗುರುರಾಜಾಚಾರ್ಯ, ರಾಮಾಚಾರ್ಯ, ಪದ್ಮನಾಭಾಚಾರ್ಯ, ಶ್ರೀಹರಿ ಆಚಾರ್ಯ ಇತರರು ಇದ್ದರು. ಬ್ರಹ್ಮಪುರದ ಉತ್ತರಾದಿ ಮಠ, ಜಯತೀರ್ಥ ನಗರದ ಶ್ರೀ ಲಕ್ಷ್ಮೀ ನಾರಾಯಣ ಮಂದಿರ, ವಿದ್ಯಾನಗರ ಶ್ರೀಕೃಷ್ಣ ಮಂದಿರದಲ್ಲಿ ವಿಶೇಷ ಹೋಮ ಮಾಡಲಾಯಿತು. ಕರೊನಾ ಕಂಟಕ ತೊಲಗಲಿ ಎಂದು ಲೋಕ ಕಲ್ಯಾಣಕ್ಕಾಗಿ ಹೋಮ ಮತ್ತು ಧಾರ್ಮಿಕ ಕಾರ್ಯಗಳು ಜರುಗಿದವು.
    ಕಲಬುರಗಿ ಜಿಲ್ಲೆಯ ಪುರೋಹಿತರ ವತಿಯಿಂದ ಶ್ರೀಕ್ಷೇತ್ರ ದೇವಲಗಾಣಗಾಪುರ ಅನ್ನಕ್ಷೇತ್ರದಲ್ಲಿ ಸೂರ್ಯಗ್ರಹಣದ ಅಂಗವಾಗಿ ಪಂ.ಪ್ರದ್ಯುನ್ಮಾಚಾರ್ಯ ಜೋಶಿ ನೇತೃತ್ವದಲ್ಲಿ ಭಾರತೀಯರಿಗೆ ಸುಖ, ಶಾಂತಿ ಹಾಗೂ ವೈರಾಣು ರೋಗ ನಿಯಂತ್ರಣ, ಹಾಗೂ ರಾಶಿ ಗೋಚಾರ ಫಲ ದೋಷ ನಿವಾರಣೆಗೆ ರಾಹೂ ಜಪ ಕೇತು ಜಪ ಕರೊನಾ ವೈರಸ್ ನಿಯಂತ್ರಣಕ್ಕೆ ಸೂರ್ಯ ನಾರಾಯಣ ನಮಸ್ಕಾರ, ಗಂಗಾ ಸ್ನಾನ ಶುದ್ಧಿ, ಪವಿತ್ರ ಪಂಚಗವ್ಯ ಪ್ರಾಶನ, ಆಯುಷ್ಯ ಸಂಜೀವಿನಿ ಹೋಮ ಹವನ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಾನುವಾರ ಜರುಗಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts