More

    ಗ್ರಂಥಾಲಯಗಳು ಮುಂದಿನ ಜನಾಂಗದ ಆಸ್ತಿ – ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ


    ಬೆಳಗಾವಿ: ಗ್ರಂಥಾಲಯಗಳು ಚಾರಿತ್ರೃ ರೂಪಿಸುವ ಕೇಂದ್ರಗಳಾಗಿ ಪ್ರಭಾವ ಬೀರುತ್ತವೆ. ಹೀಗಾಗಿ, ಗ್ರಂಥಾಲಯಗಳು ಮುಂದಿನ ಜಡಿನಾಂಗದ ದೊಡ್ಡ ಆಸ್ತಿಯಾಗಿವೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅಭಿಮತ ವ್ಯಕ್ತಪಡಿಸಿದರು.

    ರಾಮತೀರ್ಥ ನಗರದಲ್ಲಿ ಮಂಗಳವಾರ ಸ್ನೇಹ ಸಮಾಜ ಸೇವಾ ಸಂಘದ ವತಿಯಿಂದ ಬುಧವಾರ ನೂತನ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿ, ನನ್ನ ವಿದ್ಯಾರ್ಥಿ ಜೀವನದಲ್ಲಿ ನಗರದ ಚವ್ಹಾಟಗಲ್ಲಿ ಸಾರ್ವಜನಿಕ ಗ್ರಂಥಾಲಯ ಮತ್ತು ಶಾಲೆ-ಕಾಲೇಜ್‌ಗಳಲ್ಲಿನ ಗ್ರಂಥಾಲಯಗಳೇ ಇಂದಿನ ನನ್ನ ವೃತ್ತಿ ಬದುಕಿಗೆ ಬುನಾದಿ ಕಟ್ಟಿಕೊಟ್ಟಿವೆ ಎಂದರು.

    ಮಕ್ಕಳಿಗೆ ಗ್ರಂಥಾಲಯಗಳ ಅರಿವು ಮೂಡಿಸಿ ನಿರಂತರ ಬಳಕೆಗೆ ಸ್ಫೂರ್ತಿ ತುಂಬಬೇಕು. ನಿಸ್ವಾರ್ಥದಿಂದ ಸಾರ್ವಜನಿಕರ ಸೇವೆ ಸಲ್ಲಿಸುತ್ತಿರುವ ಸಂಘ-ಸಂಸ್ಥೆಗಳಿಗೆ ಸಹಕಾರ ನೀಡುವುದು ಸಹ ನಾಗರಿಕರ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

    ಮಾಜಿ ಮಹಾಪೌರ ಎನ್.ಬಿ.ನಿರ್ವಾಣಿ, ಸಂಘದ ಅಧ್ಯಕ್ಷ ಸುರೇಶ ಉರಬಿನಹಟ್ಟಿ ಮಾತನಾಡಿದರು. ಗ್ರಂಥಾಲಯ ಇಲಾಖೆ ಉಪ ನಿರ್ದೇಶಕ ರಾಮಯ್ಯ, ಡಾ. ಡಿ.ಎನ್. ಮಿಸಾಳೆ, ಜಗದೀಶ ಮಠದ, ಶಿವನಪ್ಪ ಕಮತ, ಮಹೇಶ ಚಿಟಗಿ, ಸಂಘಟನಾ ಕಾರ್ಯದರ್ಶಿ ವಿಲಾಸ ಕೆರೂರ, ಉಪಾಧ್ಯಕ್ಷ ಎಸ್.ಜಿ. ಕಲ್ಯಾಣಿ, ರಾಜೇಂದ್ರ ರತನ್, ಡಿ.ಎಂ.ಟೊಣ್ಣೆ, ಮಹೇಶ ಮಾವಿನಕಟ್ಟಿ, ನಜೀರಹ್ಮದ್ ದಳವಾಯಿ, ದುಂಡಪ್ಪ ಉಳ್ಳಾಗಡ್ಡಿ, ಈರಣ್ಣ ಕಟ್ಟಾವಿ, ಮಲ್ಹಾರ ದೀಕ್ಷಿತ, ಕಲ್ಲಪ್ಪ ಮಜಲಟ್ಟಿ, ಸಿ.ಎಸ್. ಖನಗಣ್ಣಿ, ಜಿ.ಎಸ್. ಹಿರೇಮಠ, ಬಸವರಾಜ ಗೌಡಪ್ಪಗೋಳ, ಮಲ್ಲೇಶ ಸೊಂಟಕ್ಕಿ, ಎಸ್.ಎಂ. ಮೇಲಿನಮನಿ ಇದ್ದರು. ಎ.ಕೆ.ಪಾಟೀಲ ನಿರೂಪಿಸಿದರು. ಪ್ರತೀಕ್ಷಾ ಟೊಣ್ಣೆ, ನಿರ್ಮಲಾ ಉರಬಿನಹಟ್ಟಿ ಪ್ರಾರ್ಥಿಸಿದರು. ಮಹಾನಗರ ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ ವಂದಿಸಿದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts