More

    ಗ್ರಂಥಾಲಯಕ್ಕಿಲ್ಲ ಸ್ವಂತ ಕಟ್ಟಡ

    ರಮೇಶ ಹಾರ್ಸಿಮನೆ ಸಿದ್ದಾಪುರ

    ಪಟ್ಟಣದ ಸರ್ಕಾರಿ ಆಸ್ಪತ್ರೆ ಹತ್ತಿರದ ಲೋಕೋಪಯೋಗಿ ಇಲಾಖೆಯ ವಸತಿಗೃಹದಲ್ಲಿ ಸಾರ್ವಜನಿಕ ಗ್ರಂಥಾಲಯ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾ ಕೇಂದ್ರ ಗ್ರಂಥಾಲಯದ ಇಲ್ಲಿನ ಶಾಖೆಯಲ್ಲಿ ಡಿಜಿಟಲ್ ವ್ಯವಸ್ಥೆ ಆಗಿದ್ದರೂ ಸ್ವಂತ ಕಟ್ಟಡ ಇಲ್ಲದೆ ಕಳೆಗುಂದಿದೆ.

    1,021ಜನ ಗುರುತಿನ ಚೀಟಿ ಹೊಂದಿದ ಸದಸ್ಯರನ್ನು ಈ ಗ್ರಂಥಾಲಯ ಹೊಂದಿದೆ. ಸಾಹಿತಿಗಳು, ವಿದ್ಯಾರ್ಥಿಗಳು, ಮಹಿಳೆಯರು, ನೌಕರರಿಗೆ ಉಪಯುಕ್ತವಾಗುವ 14 ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಅವುಗಳನ್ನು ಗ್ರಂಥಪಾಲಕರು, ಮೇಲ್ವಿಚಾರಕರು ಸರಿಯಾಗಿ ಜೋಡಿಸಿ ಇಟ್ಟಿದ್ದಾರೆ. ಅಲ್ಲದೆ, ಪಟ್ಟಣದ ಶಾಲೆ- ಕಾಲೇಜ್​ಗಳಿಗೆ, ಸಂಘ- ಸಂಸ್ಥೆಗಳಿಗೆ ತೆರಳಿ ಗ್ರಂಥಾಲಯದ ಉಪಯೋಗ ಪಡೆಯುವಂತೆ ಸದಸ್ಯರಿಗೆ ಮನವರಿಕೆ ಮಾಡುತ್ತಿದ್ದಾರೆ.

    ಸಾರ್ವಜನಿಕರ ಒತ್ತಾಯದ ಮೇರೆಗೆ ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹೊನ್ನೆಗುಂಡಿ ರಸ್ತೆ ಪಕ್ಕದಲ್ಲಿ 3 ಗುಂಟೆ ಕಂದಾಯ ಜಮೀನನ್ನು ಈ ಹಿಂದಿನ ತಹಸೀಲ್ದಾರರು ಮಂಜೂರಿ ಮಾಡಿಸಿದ್ದರು. ಕಟ್ಟಡ ನಿರ್ವಣಕ್ಕೆ ಗ್ರಂಥಾಲಯ ಇಲಾಖೆ ಅನುಮತಿಯನ್ನೂ ನೀಡಿತ್ತು. ಆದರೆ, ಕೆಲವರು ಸ್ವಹಿತಾಸಕ್ತಿಗಳು ಕಟ್ಟಡ ನಿರ್ವಣಕ್ಕೆ ಅಡ್ಡಗಾಲು ಹಾಕಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ. ಈ ಕುರಿತು ಶಾಸಕರು, ತಾಲೂಕಿನ ವಿವಿಧ ಸ್ಥರದ ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಿ ಪಟ್ಟಣದ ಕೇಂದ್ರ ಗ್ರಂಥಾಲಯ ಶಾಖೆಗೆ ಸ್ವಂತ ಕಟ್ಟಡ ನಿರ್ವಿುಸಲು ಮುಂದಾಗಬೇಕು ಎಂದು ವಿ.ಎಸ್.ಶೇಟ್, ಎನ್.ವಿ. ಹೆಗಡೆ, ಐ.ಕೆ.ನಾಯ್ಕ ಮತ್ತಿತರ ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಗ್ರಂಥಾಲಯಕ್ಕೆ ಸ್ವಂತ ಕಟ್ಟಡದ ಅವಶ್ಯಕತೆ ಇದೆ. ಈಗಾಗಲೇ ಗುರುತಿಸಿರುವ ಸ್ಥಳ ಎಲ್ಲರಿಗೂ ಅನುಕೂಲವಾಗುತ್ತದೆ. ಆದರೆ, ಈ ಕುರಿತು ಸ್ಥಳೀಯ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ಗಮನಹರಿಸಿ ಗ್ರಂಥಾಲಯಕ್ಕೆ ನೂತನ ಕಟ್ಟಡ ನಿರ್ಮಾಣ ಮಾಡಿಕೊಡಲು ಮುಂದಾಗಬೇಕು.
    | ಸಿ.ಎಸ್. ಗೌಡರ್ ಹೆಗ್ಗೋಡಮನೆ
    ಸಿದ್ದಾಪುರ ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ

    ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ಬೇಕು. ಈಗಾಗಲೇ ಈ ಕುರಿತು ಸಂಬಂಧ ಪಟ್ಟ ಇಲಾಖೆಯ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಕಟ್ಟಡ ಕಟ್ಟಲು ಜಾಗ ಮಂಜೂರಾಗಿದ್ದರೂ ಕೆಲವರು ಕೋರ್ಟಿಗೆ ಹೋಗಿದ್ದಾರೆ. ನಿತ್ಯ ಓದುಗರು ಬರುತ್ತಿದ್ದು ಅವರಿಗೆ ಕುಳಿತು ಓದಲು ಜಾಗದ ಅಭಾವ ಇದೆ. ಇದ್ದ ವ್ಯವಸ್ಥೆಯನ್ನು ನೀಡಲು ಆಗುತ್ತಿಲ್ಲ.
    | ಶೋಭಾ ಜಿ. ಗ್ರಂಥಪಾಲಕರು ಸಿದ್ದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts