More

    ಗ್ಯಾರಂಟಿಗಾಗಿ ಎಸ್‌ಸಿಪಿ-ಟಿಎಸ್‌ಪಿ ಹಣ ಬಳಕೆ ಬೇಡ :ಎಸ್ಸಿ-ಎಸ್ಟಿ ಹಕ್ಕುಗಳ ಸಮಿತಿ ಪ್ರತಿಭಟನೆ

    ದಾವಣಗೆರೆ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಉಪಯೋಜನೆ ಮೀಸಲು ಹಣವನ್ನು ಗ್ಯಾರಂಟಿ ಯೋಜನೆಗೆ ವೆಚ್ಚಕ್ಕೆ ಬಳಸುವ ನಿರ್ಧಾರ ಕೈಬಿಡುವಂತೆ ಒತ್ತಾಯಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಹಕ್ಕುಗಳ ಹೋರಾಟ ಸಮಿತಿ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
    ನಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಅಲ್ಲಿನ ಸಿಬ್ಬಂದಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
    ಪರಿಶಿಷ್ಟ ಜಾತಿ, ಪಂಗಡಗಳ ಉಪಯೋಜನೆಗೆ 34,294 ಕೋಟಿ ರೂ. ಮೀಸಲಿಟ್ಟಿದ್ದು ಈ ಹಣವನ್ನು ಬೇರೆ ಯೋಜನೆಗಳಿಗೆ ವರ್ಗಾಯಿಸುವ ದುರುದ್ದೇಶದಿಂದ ಮಾಡಿರುವ ತಿದ್ದುಪಡಿಯನ್ನು ರಾಜ್ಯ ಸರ್ಕಾರ ಕಳೆದ ಜುಲೈನಲ್ಲಿ ರದ್ದುಗೊಳಿಸಿರುವುದು ಸ್ವಾಗತಾರ್ಹ ಎಂದು ಸಮಿತಿ ರಾಜ್ಯ ಸಂಚಾಲಕ ಆವರಗೆರೆ ವಾಸು ತಿಳಿಸಿದರು.
    ಹಿಂದಿನ ಸರ್ಕಾರ ದಲಿತ, ಆದಿವಾಸಿ ಹಾಗೂ ಬುಡಕಟ್ಟು ವಿರೋಧಿ ನೀತಿ ಅನುಸರಿಸಿತು. ಇದರ ಪರಿಣಾಮ ಪರಿಶಿಷ್ಟ ಸಮುದಾಯದ ಜನರ ವಿಶ್ವಾಸ ಕಳೆದುಕೊಂಡು ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿತು. ದಲಿತ ಸಂಘಟನೆಗಳ ಬೆಂಬಲದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವಾಗಿದೆ ಎಂದರು.
    ಕಾಂಗ್ರೆಸ್ ಸರ್ಕಾರ ಕೂಡ ದಲಿತ ವಿರೋಧಿ ಧೋರಣೆ ಅನುಸರಿಸಿ ತಾವೇ ತಂದಿರುವ ಪರಿಶಿಷ್ಟ ಜಾತಿ, ಪಂಡಗಳ ಉಪಯೋಜನೆ (ಯೋಜನೆ, ಹಂಚಿಕೆ, ಹಣಕಾಸು, ಸಂಪನ್ಮೂಲಗಳ ಬಳಕೆ)ಕಾಯ್ದೆ 2013ರ ಭಾಗ 7 (ಡಿ) ಯೋಜನೆಗೆ ಮೀಸಲು ಹಣವನ್ನು ಗ್ಯಾರಂಟಿ ಯೋಜನೆಗಾಗಿ ಬಳಸಿಕೊಳ್ಳಲು ತೀರ್ಮಾನಿಸಿರುವುದು ಸರಿಯಲ್ಲ. ಇದರಿಂದ ತಿದ್ದುಪಡಿ ರದ್ದತಿಯನ್ನು ಉಲ್ಲಂಘಿಸಿದಂತಾಗಲಿದೆ ಎಂದರು.
    ಸಮಿತಿ ಜಿಲ್ಲಾ ಸಂಚಾಲಕರಾದ ಕೆರೆಯಾಗನಹಳ್ಳಿ ರಾಜು, ವಿ.ಲಕ್ಷ್ಮಣ, ಸಿ.ಗುರುಮೂರ್ತಿ, ರುದ್ರೇಶ್ ಮಳಲ್ಕೆರೆ, ಮುಖಂಡರಾದ ಎನ್.ಎಚ್. ರಾಮಣ್ಣ ಜಿಲ್ಲಾ ನಿಟ್ಟುವಳ್ಳಿ ಬಸಣ್ಣ, ಬಿ. ಚಿನ್ನಪ್ಪ, ಎ.ಕೆ.ಹನುಮಂತಪ್ಪ ನಿಟುವಳ್ಳಿ, ಮದಕರಿ ಸುನೀಲ್, ರಂಗನಾಥ ನರೇಗ, ತಾಲೂಕು ಸಂಚಾಲಕ ಎನ್ ರಾಕೇಶ್ ಇತರರು ಪ್ರತಿಭಟನೆಯಲ್ಲಿದ್ದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts