More

    ಗೌರವಧನ ನಿಗದಿ ಮಾಡಲು ಆಗ್ರಹ

    ಮಂಡ್ಯ: ಮಾಸಿಕ 12 ಸಾವಿರ ರೂ. ಗೌರವಧನ ನಿಗದಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

    ಕಳೆದ 13 ವರ್ಷಗಳಿಂದ ಗ್ರಾಮೀಣ ಹಾಗೂ ನಗರದಲ್ಲಿ ತಾಯಿ ಮತ್ತು ಮಗುವಿನ ಆರೈಕೆ, ಆರೋಗ್ಯದ ಬಗ್ಗೆ ಜಾಗೃತಿ, ಗ್ರಾಮ ನೈರ್ಮಲ್ಯ ಸೇರಿದಂತೆ ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹಗಲಿರುಳು ಸೇವೆ ಸಲ್ಲಿಸಲಾಗುತ್ತಿದೆ. ಆದರೆ ಕಾರ್ಯಕರ್ತೆಯರಿಗೆ ನಿಗದಿಯಾಗಿರುವ ಪ್ರೋತ್ಸಾಹಧನ ಸಿಗದಿರುವುದು ಬೇಸರದ ವಿಷಯ. ಈ ಸಂಬಂಧ ಹಲವು ಬಾರಿ ಹೋರಾಟ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಆರ್‌ಸಿಎಚ್(ಆಶಾ ನಿಧಿ) ಪೋರ್ಟಲ್‌ನಿಂದ ಪ್ರೋತ್ಸಾಹಧನ ಪಾವತಿ ಕ್ರಮ ನಿಲ್ಲಿಸಿ ಎಲ್ಲವನ್ನೂ ಸೇರಿಸಿ 12000 ರೂ. ಗೌರವಧನವನ್ನು ಪ್ರತಿ ತಿಂಗಳು ನೀಡಬೇಕು. ಪೋರ್ಟಲ್‌ನಿಂದ ಕಳೆದ 2 ವರ್ಷದಲ್ಲಿ ಆಗಿರುವ ಆರ್ಥಿಕ ನಷ್ಟವನ್ನು ಹಿಂಬಾಕಿ ರೂಪದಲ್ಲಿ ಕೊಡಬೇಕು. ಕೋವಿಡ್, ನಿವೃತ್ತಿ/ ಸ್ವಯಂ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ 20 ಸಾವಿರ ರೂ. ಇಡುಗಂಟನ್ನು ಪಶ್ಚಿಮ ಬಂಗಾಳದಲ್ಲಿರುವಂತೆ 3 ಲಕ್ಷ ರೂ.ಗೆ ಹೆಚ್ಚಿಸಬೇಕು ಸೇರಿದಂತೆ 8 ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.

    ಪ್ರತಿಭಟನೆಯಲ್ಲಿ ಅಧ್ಯಕ್ಷೆ ಪುಷ್ಪಾವತಿ, ಸಂಧ್ಯಾ, ದಾಕ್ಷಾಯಿಣಿ, ಜ್ಯೋತಿ, ಪಲ್ಲವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts