More

    ಗೋವಿನಜೋಳ ಬೆಳೆ ಪರಿಶೀಲನೆ

    ಯಲ್ಲಾಪುರ: ತಾಲೂಕಿನ ಕಿರವತ್ತಿ, ಮದನೂರು ಭಾಗಗಳಲ್ಲಿ ಕೀಟ ಬಾಧೆಗೊಳಗಾದ ಗೋವಿನಜೋಳದ ಹೊಲಗಳಿಗೆ ಕೃಷಿ ವಿಜ್ಞಾನಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೃಷಿ ವಿಜ್ಞಾನಿ ಡಾ. ರೂಪಾ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ಎಂ. ಎಸ್. ಕುಲಕರ್ಣಿ, ಕೃಷಿ ಅಧಿಕಾರಿ ಪ್ರಮೀಳಾ ಘೊಡೆಸೆ ಹಾಗೂ ಆತ್ಮಾ ಯೋಜನೆಯ ಅಧಿಕಾರಿಗಳು ರೈತರಿಂದ ಮಾಹಿತಿ ಪಡೆದರು.

    ಡಾ. ರೂಪಾ ಪಾಟೀಲ ಮಾತನಾಡಿ, ಇದು ಲದ್ದಿ ಹುಳದ ಬಾಧೆಯಾಗಿದ್ದು, ಇದನ್ನು ನಿಯಂತ್ರಿಸಲು ಸಾಧ್ಯವಿದೆ ಎಂದರು. ಬೆಳೆಯಲ್ಲಿ ಕೀಟಭಕ್ಷಕ ಪಕ್ಷಿಗಳಿಗೆ ಕುಳಿತುಕೊಳ್ಳಲು ಆಶ್ರಯತಾಣ ಒದಗಿಸುವುದು, ಪ್ರತಿ ಎಕರೆಗೆ 10 ಪಕ್ಷಿಗಳ ಆಶ್ರಯತಾಣ ಅಳವಡಿಸಬೇಕು, ಬೆಳೆಯು 10-15 ದಿನಗಳಿರುವಾಗ ಪ್ರತಿ ಎಕರೆಗೆ 15 ಫೆರೇಮೋನ್ ಬಲೆಗಳನ್ನು ಅಳವಡಿಸಬೇಕು. ಮೆಟಾರಿಜಿಯಂ ರಿಲೈ ಶೀಲಿಂದ್ರವನ್ನು ಪ್ರತಿ ಲೀಟರ್ ನೀರಿಗೆ 3 ಗ್ರಾಂನಂತೆ ಬೆರೆಸಿ 15-20 ದಿನದ ಬೆಳೆಯ ಸುಳಿಯಲ್ಲಿ ಹಾಕಬೇಕು. ನಂತರ ಪ್ರತಿ 10 ದಿನಗಳ ಅಂತರದಲ್ಲಿ ಕೀಟದ ಸಂಖ್ಯೆಯನ್ನು ಆಧರಿಸಿ ಸಿಂಪಡಣೆ ಮಾಡಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts