More

    ಗೋವಾದ ಎರಡು ಬೋಟ್​ ವಶ

    ಕಾರವಾರ: ಅರಬ್ಬಿ ಸಮುದ್ರದಲ್ಲಿ ನಿಷೇಧಿತ ಲೈಟ್ ಫಿಶಿಂಗ್ ನಡೆಸುತ್ತಿದ್ದ ಆರೋಪದ ಮೇಲೆ ಗೋವಾ ರಾಜ್ಯದ ಎರಡು ಬೋಟ್​ಗಳನ್ನು ಕೋಸ್ಟ್​ಗಾರ್ಡ್ ಅಧಿಕಾರಿಗಳು ಮಂಗಳವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.

    ಮಾಲ್ವಿನ್ ಅವರಿಗೆ ಸೇರಿದ ಮರ್ಸಿ ಗ್ರೇಸ್ 1 ಹಾಗೂ 2 ಎಂಬ ಹೆಸರಿನ ಎರಡು ಬೋಟ್​ಗಳನ್ನು ಕೋಸ್ಟ್​ಗಾರ್ಡ್ ಅಧಿಕಾರಿಗಳು ವಶಕ್ಕೆ ಪಡೆದು ಕರಾವಳಿ ಕಾವಲು ಪಡೆಯ ಸಹಾಯದಲ್ಲಿ ಇಲ್ಲಿನ ಬೈತಖೋಲ್ ಬಂದರಿಗೆ ಎಳೆತಂದಿದ್ದಾರೆ.

    ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಬೋಟ್ ಪರಿಶೀಲಿಸಿದ್ದು, ಲೈಟ್ ಫಿಶಿಂಗ್​ಗೆ ಬಳಸುತ್ತಿದ್ದ ಜನರೇಟರ್ ಬೋಟ್​ನಲ್ಲಿ ಇರುವುದು ಕಂಡುಬಂದಿದೆ. ‘ದಾಖಲೆ ಪರಿಶೀಲನೆ ನಡೆಸಿದ್ದು, ಅಸಮರ್ಪಕವಾಗಿದ್ದಲ್ಲಿ ನಿಯಮದಂತೆ ದಂಡ ವಿಧಿಸಿ ಬೋಟ್​ಗಳನ್ನು ಬಿಡುಗಡೆ ಮಾಡಲಾಗುವುದು’ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ನಾಗರಾಜ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts