More

    ಗೋವಾದಲ್ಲಿರುವ ಕನ್ನಡಿಗರಿಗೆ ಅಗತ್ಯ ವಸ್ತು ರವಾನೆ

    ಗಜೇಂದ್ರಗಡ: ಗೋವಾ ರಾಜ್ಯದಲ್ಲಿ ನೆಲೆಸಿರುವ ರೋಣ ಮತಕ್ಷೇತ್ರದ ಕನ್ನಡಿಗರಿಗೆ ಅಕ್ಕಿ, ಅಡುಗೆ ಎಣ್ಣೆ ಇತರ ಸಾಮಗ್ರಿ ಸೇರಿ 10 ಟನ್ ಆಹಾರ ಧಾನ್ಯಗಳನ್ನು ಶಾಸಕ ಕಳಕಪ್ಪ ಬಂಡಿ ಗೋವಾಗೆ ಕಳುಹಿಸಿದರು.

    ಈ ವೇಳೆ ಮಾತನಾಡಿದ ಅವರು, ಮಹಾಮಾರಿ ಕರೋನಾ ಹರಡದಂತೆ ತಡೆಗಟ್ಟುವ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವ ಉದ್ದೇಶದಿಂದ ಸರ್ಕಾರ ಲಾಕ್​ಡೌನ್ ಘೊಷಿಸಿದೆ. ಪರಿಣಾಮ ನೆರೆಯ ಗೋವಾದಲ್ಲಿ ದುಡಿಯಲು ತೆರಳಿದ್ದ ಕ್ಷೇತ್ರದ ಜನತೆ ಸಂಕಷ್ಟಕ್ಕೆ ಸಿಲುಕಿರುವ ಮಾಹಿತಿ ಹಿನ್ನೆಲೆಯಲ್ಲಿ ಅವರಿಗೆ ತೊಂದರೆ ಆಗಬಾರದು ಎನ್ನುವ ಕಾರಣದಿಂದ ಎರಡು ವಾಹನಗಳಲ್ಲಿ ಅಗತ್ಯ ಆಹಾರ ಸಾಮಗ್ರಿಗಳನ್ನು ಕಳುಹಿಸಲಾಗಿದೆ. ಅಲ್ಲದೆ, ಅಲ್ಲಿನ ಅಧಿಕಾರಿಗಳ ಜತೆ ಮಾತನಾಡಿ, ಕನ್ನಡಿಗರಿಗೆ ಬೇಕಾದ ಎಲ್ಲ ಅಗತ್ಯ ನೆರವು ನೀಡಲು ಕೋರಲಾಗುವುದು ಎಂದರು.ಬಿಜೆಪಿ ರೋಣ ಮಂಡಲ ಅಧ್ಯಕ್ಷ ಮುತ್ತಣ್ಣ ಕಡಗದ ಮಾತನಾಡಿ, ಲಾಕ್​ಡೌನ್​ನಿಂದ ಗೋವಾದಲ್ಲಿರುವ ಕ್ಷೇತ್ರದ 700 ಕುಟುಂಬಗಳಿಗೆ 2 ಟನ್​ನಷ್ಟು ಅಗತ್ಯ ಆಹಾರ ಸಾಮಗ್ರಿ ಕಳುಹಿಸಲಾಗಿದೆ ಎಂದರು.ಬಿಜೆಪಿ ನಗರ ಮಂಡಲ ಅಧ್ಯಕ್ಷ ಅಶೋಕ ವನ್ನಾಲ, ಡಂಬಳ ಮಂಡಲ ಅಧ್ಯಕ್ಷ ರವಿ ಕರಿಗಾರ, ಪ್ರಕಾಶ ಸಂಕಣ್ಣವರ, ರವಿ ಚವ್ಹಾಣ, ಬಸವರಾಜ ಸಂಗನಾಳ, ಬಾಳು ಗೌಡರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts