More

    ಗೋಧಿ ಖರೀದಿಸಲು ವ್ಯಾಪಾರಸ್ಥರಿಗೆ ಅವಕಾಶ

    ಧಾರವಾಡ: ಭಾರತೀಯ ಆಹಾರ ನಿಗಮದಿಂದ ಗೋಧಿದಿಯನ್ನು ಸಗಟು ವ್ಯಾಪಾರಿಗಳು, ಆಹಾರಧಾನ್ಯ ವರ್ತಕರು, ಕಿರಾಣಿ ವ್ಯಾಪಾರಸ್ಥರಿಗೆ ಮತ್ತು ಎಪಿಎಂಸಿ ವರ್ತಕರಿಗೆ ಒಎಂಎಸ್​ಡಿ ಅಡಿ ಇ ಹರಾಜಿನಲ್ಲಿ ಭಾಗವಹಿಸದೆ ನೇರವಾಗಿ ಜಿಲ್ಲಾಧಿಕಾರಿ ಪರವಾನಗಿ ಪಡೆದು ಖರೀದಿಸಲು ಅವಕಾಶ ನೀಡಲಾಗಿದೆ.

    ಕನಿಷ್ಠ 10 ಮೆಟ್ರಿಕ್ ಟನ್​ನಿಂದ ಗರಿಷ್ಠ 5,000 ಮೆಟ್ರಿಕ್ ಟನ್​ವರೆಗೆ ಪ್ರತಿ ವಾರಕ್ಕೆ ಖರೀದಿಸಲು ಅವಕಾಶವಿದೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯಾಪಾರಿಗಳು, ಕಿರಾಣಿ ವರ್ತಕರು, ಆಹಾರಧಾನ್ಯ ಸಗಟು ವರ್ತಕರು ಹಾಗೂ ಎಪಿಎಂಸಿ ವ್ಯಾಪಾರಸ್ಥರು ಇದರ ಸದುಪಯೋಗ ಪಡೆಯಲು ಕೋರಲಾಗಿದೆ.

    ಆಸಕ್ತ ವ್ಯಾಪಾರಿಗಳು ಹಾಗೂ ಸಗಟು ವ್ಯಾಪಾರಿಗಳು ಜಿಲ್ಲಾಧಿಕಾರಿಯವರಿಗೆ ಅರ್ಜಿ ಸಲ್ಲಿಸಿ ಎಫ್​ಸಿಐದಿಂದ ನೇರವಾಗಿ ಗೋದಿ ಖರೀದಿಸಿ ಸಾರ್ವಜನಿಕರಿಗೆ ಮಾರಾಟ ಮಾಡಬೇಕು ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ಮರ್ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts