More

    ಗೋಕೃಪಾಮೃತದಿಂದ ವಿಷಮುಕ್ತ ಕೃಷಿಗೆ ಪ್ರೋತ್ಸಾಹ

    ಶಿರಸಿ: ತಾಲೂಕಿನ ಮಾಳಂಜಿ ಗ್ರಾಮದ ಮಧುಕೇಶ್ವರ ಭತ್ತ ಉತ್ಪಾದಕ ಸೌಹಾರ್ದ ಸಹಕಾರಿ ಸಂಘವು ವಿಷಮುಕ್ತ ಕೃಷಿಗೆ ಪ್ರೋತ್ಸಾಹಿಸುತ್ತಿದ್ದು, ಈ ನಿಟ್ಟಿನಲ್ಲಿ ಗೋಕೃಪಾಮೃತ ದ್ರವರೂಪದ ಗೊಬ್ಬರವನ್ನು ಗುರುವಾರ ಉಚಿತವಾಗಿ ರೈತರಿಗೆ ವಿತರಿಸಲಾಯಿತು.

    ಭೂಲೋಕದ ಅಮೃತ ಎಂದು ಖ್ಯಾತಿಯಾದ ಗೋಕೃಪಾಮೃತ ಎನ್ನುವ ದ್ರವ ರೂಪದ ಗೊಬ್ಬರದ ತಯಾರಿ ವಿಧಾನ ಮತ್ತು ಬಳಸುವ ಕ್ರಮದ ಕುರಿತು ಸಂಸ್ಥೆಯ ಸಿಇಒ ಪ್ರಶಾಂತ ನಾಯಕ ಅವರು ಮಾಳಂಜಿಯಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ತಿಳಿಸಿದರು. ರಾಸಾಯನಿಕ ಕೃಷಿಯಿಂದ ಬೇಸತ್ತ ರೈತರಿಗೆ ವರದಾನವಾಗಿರುವ ಈ ಜಲವನ್ನು ಬೆಳೆಗಳಿಗೆ ಸಿಂಪಡಿಸುವುದು ಹಾಗೂ ಭೂಮಿಗೆ ನೇರವಾಗಿ ಹಾಕುವ ಮೂಲಕ ರೋಗ ನಿರ್ವಹಣೆ, ಉತ್ತಮ ಇಳುವರಿ, ಹೆಚ್ಚು ಆದಾಯ ಪಡೆಯಬಹುದಾಗಿದೆ. ಪರಿಶುದ್ಧವಾದ 200 ಲೀ ಡ್ರಮ್ಲ್ಲಿ 2 ಲೀ ಗೋಕೃಪಾಮೃತ ಜಲ, 2 ಲೀ ತಾಜಾ ದೇಶಿ ಹಸುವಿನ ಮಜ್ಜಿಗೆ ಮತ್ತು ಸಾವಯವ ಬೆಲ್ಲ 1 ರಿಂದ 2 ಕೆಜಿ ಹಾಕಿ ಮಿಶ್ರಣ ಮಾಡಿ ನೆರಳಿನಲ್ಲಿಡಬೇಕು. ದಿನಕ್ಕೆರಡು ಬಾರಿ 6 ದಿನ ಮಿಶ್ರಣ ಮಾಡಿದಾಗ ದ್ರಾವಣ ತಯಾರಾಗುತ್ತದೆ. 10 ಲೀ ನೀರಿಗೆ 2 ಲೀ ದ್ರಾವಣ ಮಿಶ್ರಣ ಮಾಡಿ ಗಿಡಗಳಿಗೆ ಸಿಂಪಡಿಸಬಹುದು ಅಥವಾ ಹನಿ ನೀರಾವರಿ ವಿಧಾನದ ಮೂಲಕವು ಕೊಡಬಹುದು. ಗಿಡದ ಬುಡಕ್ಕೆ ನೇರವಾಗಿ ನೀಡುವುದರಿಂದ ಬೇರುಗಳ ಆರೋಗ್ಯ ಮತ್ತು ಬೆಳವಣಿಗೆ ವೃದ್ಧಿಸಬಹುದಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ದೊಡ್ನಳ್ಳಿ ಶಂಭುಲಿಂಗೇಶ್ವರ ರೈತ ಉತ್ಪಾದಕ ಸಂಸ್ಥೆ, ದೊಡ್ಮನೆ ಲಕ್ಷ್ಮೀನಾರಾಯಣ ರೈತ ಉತ್ಪಾದಕ ಸಂಸ್ಥೆ, ಶ್ರೀರಾಮೇಶ್ವರ ಸಾವಯವ ಕೃಷಿ ಪರಿವಾರ ರೈತ ಉತ್ಪಾದಕ ಸಂಸ್ಥೆ, ಭೂಸಿರಿ ರೈತ ಉತ್ಪಾದಕ ಸಂಸ್ಥೆ, ಕೆ.ಎನ್.ಸಿ ರೈತ ಉತ್ಪಾದಕ ಸಂಸ್ಥೆ ಮತ್ತು ಭಾಗ್ಯವಿಧಾತ ರೈತ ಉತ್ಪಾದಕ ಸಂಸ್ಥೆಗಳಿಗೆ ಗೋಕೃಪಾಮೃತ ಜಲವನ್ನು ಉಚಿತವಾಗಿ ವಿತರಿಸಲಾಯಿತು.

    ರೈತ ಉತ್ಪಾದಕ ಸಂಸ್ಥೆಯ ಪ್ರಮುಖ ಸಿಬ್ಬಂದಿ ರವಿ ನಾಯ್ಕ, ವೀರೇಶ ಕೆ.ಎಂ., ವಿಕ್ರಮ ಎಚ್.ಜೆ., ವಿನಾಯಕ ಹೆಗಡೆ, ವಿನಾಯಕ ಗೌಡ, ಗಣಪತಿ ಹೆಗಡೆ, ಪೂರ್ಣಿಮಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts